
ಬೆಂಗಳೂರು(ಜ.19) ಆರೋಗ್ಯ ವಿಮೆ ಸೇರಿದಂತೆ ಹಲವು ವಿಮೆಗಳು ಲಭ್ಯವಿದೆ. ಈ ಪೈಕಿ ಪ್ರಯಾಣ ವಿಮೆ ಕೂಡ ಅತ್ಯಂತ ಪ್ರಮುಖವಾದ ವಿಮೆ. ಆದರೆ ಕೆಲ ದೇಶಗಳಿಗೆ ನೀವು ಪ್ರಯಾಣ ಮಾಡಬೇಕಾದರೆ ಕಡ್ಡಾಯ ವಿಮೆ ಹೊಂದಿರಲೇಬೇಕು. ಪ್ರಮುಖವಾಗಿ ಭಾರತದಿಂದ ನೀವು ಅಂತಾರಾಷ್ಟ್ರೀಯ ಪ್ರಯಾಣ ಮಾಡುತ್ತಿದ್ದರೆ, ಯಾವ ದೇಶ, ಆ ದೇಶದ ಪಾಲಿಸಿ ಮೇಲೆ ಕಡ್ಡಾಯ ವಿಮೆಗಳು ಅವಲಂಬಿತವಾಗಿರುತ್ತದೆ. ಸದ್ಯ 38 ದೇಶಗಳಿಗೆ ಪ್ರಯಾಣಿಸಬೇಕಾದರೆ ಕಡ್ಡಾಯ ವಿಮೆ ಅಗತ್ಯವಿದೆ. ಪ್ರಮುಖವಾಗಿ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಕಡ್ಡಾಯ ವಿಮೆ ಅಗತ್ಯವಿದೆ.
ಏನಿದು ಕಡ್ಡಾಯ ವಿಮೆ?
ಒಂದು ರಾಷ್ಟ್ರವು ಪ್ರಯಾಣ ವಿಮೆಯನ್ನು ಕಡ್ಡಾಯಗೊಳಿಸಿದರೆ, ಆ ರಾಷ್ಟ್ರವನ್ನು ಪ್ರವೇಶಿಸಲು ಅಥವಾ ವೀಸಾಗೆ ಅರ್ಜಿ ಸಲ್ಲಿಸಲು ಕಾನೂನುರೀತ್ಯ ಅವಶ್ಯಕ ಎಂದಾಗಿದೆ. ಸಾಮಾನ್ಯ ಪ್ರಯಾಣ ವಿಮೆಯಂತೆಯೇ ಈ ಕಡ್ಡಾಯ ಪಾಲಿಸಿಗಳು ಸಾಮಾನ್ಯವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗೆ ಕವರೇಜ್, ವಿಮಾನಗಳ ವಿಳಂಬ, ಕಳೆದುಹೋದ ಬ್ಯಾಗೇಜ್/ಪಾಸ್‌ಪೋರ್ಟ್, ಆಸ್ತಿ ಹಾನಿ ಅಥವಾ ದೈಹಿಕ ಹಾನಿಯ ಹೊಣೆಗಾರಿಕೆ ಇತ್ಯಾದಿಗಳಂತಹ ಅದೇ ರೀತಿಯ ಪ್ರಯೋಜನಗಳನ್ನು ಒದಗಿಸುತ್ತವೆ.
ಸೈಫ್ ಆಲಿ ಖಾನ್ ಚಿಕಿತ್ಸೆಗೆ ಕೊಟ್ಟ ಆರೋಗ್ಯ ವಿಮೆ ದಾಖಲೆ ಬಹಿರಂಗ, 35.95 ಲಕ್ಷ ರೂ ಕ್ಲೈಮ್!
ಹಲವು ದೇಶಗಳು ಭಾರತೀಯ ಪ್ರಯಾಣಿಕರಿಗೆ ಅಂತಾರಾಷ್ಟ್ರೀಯ ಪ್ರಯಾಣ ವಿಮೆಯನ್ನು ಕಡ್ಡಾಯಗೊಳಿಸುತ್ತವೆ. ಸಾಮಾನ್ಯವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗಳು, COVID-19 ಚಿಕಿತ್ಸೆ ಅಥವಾ ಸ್ಥಳಾಂತರಿಸುವಿಕೆಗಾಗಿ ಕವರೇಜ್ ಅನ್ನು ಹೊಂದಿರಬೇಕಾಗಿ ಸೂಚಿಸುತ್ತವೆ.
ಕಡ್ಡಾಯ ವಿಮೆ ದೇಶಗಳು:
ಕ್ಯೂಬಾ, ಈಕ್ವೆಡಾರ್ (ಗ್ಯಾಲಪಗೋಸ್ಗಾಗಿ), ಅರುಬಾ, ಜೋರ್ಡಾನ್, ನೇಪಾಳ (ಟ್ರೆಕ್ಕಿಂಗ್/ಪರ್ವತಾರೋಹಣ), ವಿಯೆಟ್ನಾಂ, ಇರಾನ್, ಲಾವೋಸ್, ಕತಾರ್, ರುವಾಂಡಾ ಮತ್ತು ಸೇಶೆಲ್ಸ್. ಷೆಂಗೆನ್ ದೇಶಗಳಿಗೆ ಕನಿಷ್ಠ €30,000 ಕವರೇಜ್ ಅಗತ್ಯವಿರುತ್ತದೆ. ರಷ್ಯಾ, ಟರ್ಕಿ, UAE (ಮ್ಲಟಿಪಲ್-ಎಂಟ್ರಿ ವೀಸಾಗಳು), ಸೌದಿ ಅರೇಬಿಯಾ ಮತ್ತು USA (ವಿದ್ಯಾರ್ಥಿಗಳು) ಸಹ ನಿರ್ದಿಷ್ಟ ಅವಶ್ಯಕತೆಗಳನ್ನು ಹೊಂದಿವೆ. ಅಂಟಾರ್ಟಿಕಾದಂತಹ ದೂರದ ಸ್ಥಳಗಳಲ್ಲಿ, ಕಾಂಪ್ರಹೆನ್ಸಿವ್ ವೈದ್ಯಕೀಯ ಸ್ಥಳಾಂತರಿಸುವ ಕವರೇಜ್ ಅತ್ಯಗತ್ಯ. ನಿಮ್ಮ ಪ್ರವಾಸವನ್ನು ಯೋಜಿಸುವ ಮೊದಲು ಯಾವಾಗಲೂ ರಾಯಭಾರ ಕಚೇರಿಗಳು ಅಥವಾ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಅಪ್ಡೇಟ್ ಮಾಡಿದ ನಿಯಮಗಳನ್ನು ಪರಿಶೀಲಿಸಿ.
ಕಡ್ಡಾಯ ವಿಮೆಯ ಅನುಕೂಲ:
ವಾಸಿಗರಿಗೆ ತಕ್ಷಣದ ವೈದ್ಯಕೀಯ ಸಹಾಯವನ್ನು ಒದಗಿಸಲು
ಸ್ಥಳೀಯ ಆರೋಗ್ಯ ವ್ಯವಸ್ಥೆಗಳಿಗೆ ಹಣಕಾಸಿನ ಅಪಾಯಗಳನ್ನು ಕಡಿಮೆ ಮಾಡಲು
ಸಾರ್ವಜನಿಕ ಸುರಕ್ಷತೆ ಮತ್ತು ಆರೋಗ್ಯವನ್ನು ಹೆಚ್ಚಿಸಲು
ಸರ್ಕಾರದ ಮೇಲಿನ ಹೊರೆ ಕಡಿಮೆ ಮಾಡಲು
ಆಹ್ಲಾದಕರ ಪ್ರಯಾಣದ ಅನುಭವವನ್ನು ಒದಗಿಸಲು
ಕಡ್ಡಾಯ ಅವಶ್ಯಕತೆಗಳನ್ನು ಹೊಂದಿರುವ ದೇಶಗಳಿಗೆ ಭೇಟಿ ನೀಡುವಾಗ ನಿಮ್ಮ ಪ್ರಯಾಣ ವಿಮೆಯನ್ನು ಮುಂಚಿತವಾಗಿಯೇ ಪಡೆದುಕೊಳ್ಳಿ. ನಿಮ್ಮ ಪಾಲಿಸಿಯು ಸ್ಥಳೀಯ ನಿಯಮಗಳಿಗೆ ಹೊಂದಾಣಿಕೆಯಾಗುತ್ತದೆ, ಅಗತ್ಯ ಮೊತ್ತ, ಅವಧಿ ಮತ್ತು ವ್ಯಾಪ್ತಿಯನ್ನು ಕವರ್ ಮಾಡುತ್ತದೆ ಎಂದು ಖಚಿತಪಡಿಸಿಕೊಳ್ಳಿ. ನಿಮಗೆ ಕಡ್ಡಾಯ ವಿಮೆಯನ್ನು ಹಲವು ವಿಮಾ ಕಂಪನಿಗಳು ನೀಡುತ್ತದೆ. ಫೋನ್‌ಪೇ ಸೇರಿದಂತೆ ಇತರ ಕೆಲ ಪ್ಲಾಟ್‌ಫಾರ್ಮ್ ಕೂಡ ನಿಮಗೆ ಕಡ್ಡಾಯ ವಿಮೆಯನ್ನು ಆಕರ್ಷಕ ಹಾಗೂ ಅತ್ಯಧಿಕ ಸೌಲಭ್ಯದಲ್ಲಿ ನೀಡುತ್ತದೆ. ಆಯ್ಕೆ ಮಾಡುವಾಗ ವಿಶ್ವಾಸಾರ್ಹ ವಿಮಾ ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳಿ.
ಮಹಿಳೆಯರು ತಿಂಗಳಿಗೆ ಗಳಿಸಿ 7000 ರೂ, ಮೋದಿ ಚಾಲನೆ ನೀಡಿದ ಹೊಸ ಯೋಜನೆ ಯಾವುದು?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.