ಭಾರತ ಬಡ ದೇಶವಲ್ಲ ಅಂತ ಈ ಸಿಟಿಯಲ್ಲಿರೋ ಜನರ ನೋಡಿದ್ರೆ ಗೊತ್ತಾಗುತ್ತೆ, ಎಲ್ಲರೂ ದುಡ್ಡಿರೋರೇ ಇಲ್ಲಿರೋದು!

Published : Apr 22, 2024, 12:54 PM ISTUpdated : Apr 22, 2024, 01:05 PM IST
ಭಾರತ ಬಡ ದೇಶವಲ್ಲ ಅಂತ ಈ ಸಿಟಿಯಲ್ಲಿರೋ ಜನರ ನೋಡಿದ್ರೆ ಗೊತ್ತಾಗುತ್ತೆ, ಎಲ್ಲರೂ ದುಡ್ಡಿರೋರೇ ಇಲ್ಲಿರೋದು!

ಸಾರಾಂಶ

ವಿಶ್ವದಲ್ಲಿ ಬಿಲಿಯನೇರ್ ಗಳ ಸಂಖ್ಯೆಯಲ್ಲಿ ಅಭಿವೃದ್ಧಿ ಆಗ್ತಿದೆ. ಇದು ಖುಷಿ ವಿಷ್ಯ ಕೂಡ ಹೌದು. ಭಾರತದಲ್ಲಿ ಕೂಡ ಕೋಟ್ಯಾಧಿಪತಿಗಳ ಸಂಖ್ಯೆ ಏರಿಕೆ ಆಗ್ತಿದೆ.  ಶ್ರೀಮಂತರು ನೆಲೆಸಿರುವ ವಿಶ್ವದ ನಗರಗಳ ಪಟ್ಟಿಯಲ್ಲಿ ಭಾರತದ ಎರಡು ನಗರ ಸ್ಥಾನ ಪಡೆದಿದೆ.   

ಭಾರತ ಸೇರಿದಂತೆ ವಿಶ್ವದಾದ್ಯಂತ ಶ್ರೀಮಂತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ಶ್ರೀಮಂತ ದೇಶ ಯಾವುದು ಎಂದಾಗ ಎಲ್ಲರ ಬಾಯಿಂದ ಬರೋದು ಅಮೆರಿಕಾದ ಹೆಸರು. ದೊಡ್ಡಣ್ಣ ಎಂದೇ ಪ್ರಸಿದ್ಧಿ ಪಡೆದಿರುವ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಅತಿ ಹೆಚ್ಚು ಶ್ರೀಮಂತರು ನೆಲೆಸಿದ್ದಾರೆ. ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2024 ಬಿಡುಗಡೆಯಾಗಿದ್ದು, ಅದ್ರಲ್ಲಿ ಟಾಪ್ ಟೆನ್ ಶ್ರೀಮಂತ ನಗರಗಳ ಪಟ್ಟಿ ಮಾಡಲಾಗಿದೆ. ಯಾವ ನಗರದಲ್ಲಿ ಹೆಚ್ಚು ಶ್ರೀಮಂತರು ನೆಲೆಸಿದ್ದಾರೆ ಎಂಬುದನ್ನು ಪಟ್ಟಿಯಲ್ಲಿ ಹೇಳಲಾಗಿದೆ.

ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2024ರ ಪ್ರಕಾರ, ಶತಕೋಟ್ಯಾಧಿಪತಿ (Billionaires) ಗಳು ನೆಲೆನಿಂತಿರುವ ನಗರದಲ್ಲಿ ನ್ಯೂಯಾರ್ಕ್ (New York) ಮೊದಲ ಸ್ಥಾನದಲ್ಲಿದೆ. ಲಂಡನ್ (London) ಎರಡನೇ ಸ್ಥಾನದಲ್ಲಿದೆ. ಅಚ್ಚರಿ ವಿಷ್ಯ ಅಂದ್ರೆ ಮುಂಬೈ ಮೂರನೇ ಸ್ಥಾನದಲ್ಲಿದೆ. ಬೀಜಿಂಗ್, ಶಾಂಘೈ ಸೇರಿದಂತೆ ಐದು ನಗರಗಳ ನಂತ್ರ ದೆಹಲಿ ಬರುತ್ತೆ. ಹತ್ತರ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಇದೆ. 

ಮನೆ ಕೊಳ್ಳೋದು ಡೆಡ್ ಇನ್ವೆಸ್ಟ್‌ಮೆಂಟ್ ಅಂತಾರಲ್ಲ, ಹಾಗಾದ್ರೆ ಬಾಡಿಗೆ ಮನೆಯೇ ಬೆಸ್ಟಾ?

ಯಾವ ನಗರದಲ್ಲಿ ಎಷ್ಟು ಶ್ರೀಮಂತರಿದ್ದಾರೆ? :

ನ್ಯೂಯಾರ್ಕ್ :  ಹುರುನ್ ಗ್ಲೋಬಲ್ ರಿಚ್ ಲಿಸ್ಟ್ ಪ್ರಕಾರ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ನ್ಯೂಯಾರ್ಕ್ ನಲ್ಲಿ 119 ಬಿಲಿಯನೇರ್‌ಗಳಿದ್ದಾರೆ. ಅವರ ನಿವ್ವಳ ಮೌಲ್ಯವು ಒಂದು ಬಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಅಂದರೆ ಸುಮಾರು 8,337 ಕೋಟಿ ರೂಪಾಯಿ. ವಿಶ್ವದ 10 ಶ್ರೀಮಂತರಲ್ಲಿ ಒಂಬತ್ತು ಮಂದಿ ಅಮೆರಿಕದವರು.

ಲಂಡನ್ : ಇನ್ನು ಎರಡನೇ ಸ್ಥಾನದಲ್ಲಿರುವ ಲಂಡನ್ ನಲ್ಲಿ 97. ಬಿಲಿಯನೇರ್‌ ನೆಲೆಸಿದ್ದಾರೆ. 

ಮುಂಬೈ : ಆರ್ಥಿಕ ರಾಜಧಾನಿ ಎಂದೇ ಹೆಸರು ಪಡೆದಿರುವ ಮುಂಬೈ ಮೂರನೇ ಸ್ಥಾನದಲ್ಲಿದೆ. ಇದು ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ. ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಸೇರಿದಂತೆ 92 ಬಿಲಿಯನೇರ್‌ಗಳು ಈ ನಗರದಲ್ಲಿ ವಾಸಿಸುತ್ತಿದ್ದಾರೆ. ಅಂಬಾನಿ ನಿವ್ವಳ ಮೌಲ್ಯ 113 ಬಿಲಿಯನ್ ಡಾಲರ್ ಮತ್ತು ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 11 ನೇ ಸ್ಥಾನದಲ್ಲಿದ್ದಾರೆ. ಈ ವರ್ಷ ಅವರ ನಿವ್ವಳ ಮೌಲ್ಯವು 16.5 ಬಿಲಿಯನ್ ಡಾಲರ್  ಹೆಚ್ಚಾಗಿದೆ. 

ಬೀಜಿಂಗ್ : ಈ ಪಟ್ಟಿಯ ಇನ್ನೊಂದು ವಿಶೇಷವೆಂದ್ರೆ ಟಾಪ್ ಟೆನ್ ವಿಶ್ವ ಶ್ರೀಮಂತ ನಗರದ ಪಟ್ಟಿಯಲ್ಲಿ ಚೀನಾದ ನಾಲ್ಕು ನಗರ ಸ್ಥಾನ ಪಡೆದಿದೆ. ಬೀಜಿಂಗ್ ನಾಲ್ಕನೇ ಸ್ಥಾನದಲ್ಲಿದ್ದು, ಅಲ್ಲಿ 91 ಬಿಲಿಯನೇರ್‌ ಗಳಿದ್ದಾರೆ. 

ಶಾಂಘೈ : ಐದನೇ ಸ್ಥಾನದಲ್ಲಿ ಚೀನಾದ ಶಾಂಘೈ ಇದೆ. ಅಲ್ಲಿ 87 ಬಿಲಿಯನೇರ್ ಇದ್ದಾರೆ. ಶಾಂಘೈ ಸ್ಟಾಕ್ ಎಕ್ಸ್ಚೇಂಜ್ ವಿಶ್ವದ ಮೂರನೇ ಅತಿದೊಡ್ಡ ಷೇರು ಮಾರುಕಟ್ಟೆಯಾಗಿದೆ.

ಶೆನ್ಜೆನ್ : ಶ್ರೀಮಂತರು ನೆಲೆ ನಿಂತಿರುವ ಜಾಗದಲ್ಲಿ ಶೆನ್ಜೆನ್ ಕೂಡ ಸೇರಿದೆ. ಇಲ್ಲಿ 84 ಬಿಲಿಯನೇರ್ ಗಳನ್ನು ನೀವು ನೋಡ್ಬಹುದು.

ವೃತ್ತಿಜೀವನಕ್ಕೆ ಗಡಿಯಾರವಿಲ್ಲ, ಚಿಂತೆ ಬಿಟ್ಟು ಕೆಲಸದಲ್ಲಿ ಮುಂದುವರಿಯಿರಿ;ಉದ್ಯೋಗಸ್ಥ ಮಹಿಳೆಗೆ ವಿನೀತಾ ಸಿಂಗ್ ಸಲಹೆ

ಹಾಂಗ್ ಕಾಂಗ್ : ಚೀನಾದ ಹಾಂಗ್ ಕಾಂಗ್ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 67 ಬಿಲಿಯನೇರ್ ಇಲ್ಲಿದ್ದಾರೆ. 

ಮಾಸ್ಕೋ : ಪಟ್ಟಿಯಲ್ಲಿ ಮಾಸ್ಕೋ ಎಂಟನೇ ಸ್ಥಾನದಲ್ಲಿದೆ. ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ 57 ಬಿಲಿಯನೇರ್ಸ್ ಇದ್ದಾರೆ.

ದೆಹಲಿ : ಭಾರತದ ರಾಜಧಾನಿ ದೆಹಲಿ ಕೂಡ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 52  ಶತಕೋಟ್ಯಾಧಿಪತಿಗಳು ನೆಲೆಸಿದ್ದಾರೆ. ಇದ್ರಲ್ಲಿ ಎಚ್‌ಸಿಎಲ್‌ನ ಶಿವ ನಾಡಾರ್, ಏರ್‌ಟೆಲ್‌ನ ಸುನಿಲ್ ಮಿತ್ತಲ್ ಮತ್ತು ಡಿಎಲ್‌ಎಫ್‌ನ ಕೆಪಿ ಸಿಂಗ್ ಸೇರಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೋ : ವಿಶ್ವದ ಅತ್ಯಂತ ಶ್ರೀಮಂತರು ನೆಲೆಸಿರುವ ಪ್ರಮುಖ ಹತ್ತು ನಗರಗಳಲ್ಲಿ ಕೊನೆಯ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಇದೆ. ಇಲ್ಲಿ 52 ಬಿಲಿಯನೇರ್ಸ್ ಇದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌