ಗೃಹ ಸಚಿವ ಅಮಿತ್ ಷಾ ಹಾಗೂ ಪತ್ನಿ ಹೂಡಿಕೆ ಮಾಡಿದ ಪ್ರಮುಖ ಷೇರುಗಳಿವು

By Anusha Kb  |  First Published Apr 22, 2024, 12:48 PM IST

 ಉದ್ಯಮಿಗಳಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಅವರ ಪತ್ನಿ ಸೋನಾಲ್ ಶಾ ಕೂಡ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಹೂಡಿಕೆ ಮಾಡಿದ್ದು, ಅವರು ಹೂಡಿಕೆ ಮಾಡಿದ ಪ್ರಮುಖ ಷೇರುಗಳು ಹಾಗೂ ಆಸ್ತಿ ಬಗ್ಗೆ ಡಿಟೇಲ್ ಇಲ್ಲಿದೆ. 


ನವದೆಹಲಿ: ಲೋಕಸಭೆ ಚುನಾವಣೆಗೆ ಬಹುತೇಕ ರಾಜಕಾರಣಿಗಳು ತಮ್ಮ ಆಸ್ತಿ ಘೋಷಣೆ ಮಾಡಿದ್ದು, ತಮಗೆಷ್ಟು ಸಾಲ ಇದೆ? ಎಷ್ಟು ಆದಾಯ ಹೊಂದಿದ್ದೇವೆ? ಎಲ್ಲಿ ಹೂಡಿಕೆ ಮಾಡಿದ್ದೇವೆ ಎಂಬುದರ ವಿವರವನ್ನು ಚುನಾವಣಾ ಆಯೋಗಕ್ಕೆ  ಸಲ್ಲಿಕೆ ಮಾಡಿದ್ದಾರೆ. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ತಮ್ಮ ಆಸ್ತಿ ಘೋಷಣೆ ಮಾಡಿದ್ದಾರೆ. ಅದರನ್ವಯ ಉದ್ಯಮಿಗಳಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಹಾಗೂ ಅವರ ಪತ್ನಿ ಸೋನಾಲ್ ಶಾ ಕೂಡ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಹೂಡಿಕೆ ಮಾಡಿದ್ದು, ಅವರು ಹೂಡಿಕೆ ಮಾಡಿದ ಪ್ರಮುಖ ಷೇರುಗಳು ಹಾಗೂ ಆಸ್ತಿ ಬಗ್ಗೆ ಡಿಟೇಲ್ ಇಲ್ಲಿದೆ. 

ಕಳೆದ ಐದು ವರ್ಷಗಳಲ್ಲಿ ಷೇರು ಮಾರುಕಟ್ಟೆಯಲ್ಲಿ  ಗೃಹ ಸಚಿವ ಅಮಿತ್ ಶಾ ಮತ್ತು ಅವರ ಪತ್ನಿ ಸೋನಾಲ್ ಶಾ ಅವರು ಮಾಡಿದ ಹೂಡಿಕೆಯು 2024 ರ ಏಪ್ರಿಲ್ 15ರ  ವೇಳೆಗೆ ಶೇ.71 ಪ್ರತಿಶತದಷ್ಟು ಬೆಳೆದಿದ್ದು,  37.4 ಕೋಟಿ ರೂ.  ಇದೆ ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿರುವ ಮಾಹಿತಿಯಂತೆ ಅಮಿತ್ ಶಾ ದಂಪತಿ ಈಕ್ವಿಟಿ ಮಾರುಕಟ್ಟೆಯ ಹೊರತಾಗಿ, ಸಣ್ಣ ಉಳಿತಾಯ ಯೋಜನೆಗಳು, ಚಿನ್ನ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ.

Tap to resize

Latest Videos

Lok Sabha Election 2024: ಮೋದಿ ಮೂರನೇ ಬಾರಿ ಗೆದ್ರೆ ಈ ಎಲ್ಲಾ ಸ್ಟಾಕ್‌ಗಳದ್ದು ಮಿಂಚಿನ ಓಟ ಅಂತಾರೆ ತಜ್ಞರು!

ಬ್ಯಾಂಕಿಂಗ್ ಮತ್ತು ಎಫ್‌ಎಂಸಿಜಿ ಸ್ಟಾಕ್‌ಗಳಲ್ಲಿ ಮಾಡಿದ ಹೂಡಿಕೆ ಈ ದಂಪತಿಗೆ ಒಳ್ಳೆಯ ಲಾಭ ನೀಡಿದೆ. ಇದರ ಜೊತೆಗೆ ಕೇವಲ ಎರಡು ಬ್ಯಾಂಕ್‌ಗಳಲ್ಲಿ ದಂಪತಿ ಹೂಡಿಕೆ ಮಾಡಿದ್ದಾರೆ. ಅದರಲ್ಲಿ ಮೊದಲನೇಯದಾಗಿ ಕೆನರಾ ಬ್ಯಾಂಕ್, ಇಲ್ಲಿ ದಂಪತಿ ರೂ. 2.96 ಕೋಟಿ ಹಾಗೂ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್ ಇಲ್ಲಿ ಕರೂರ್ ವೈಶ್ಯ ಬ್ಯಾಂಕ್ ಲಿಮಿಟೆಡ್‌ನಲ್ಲಿ ರೂ. 1.89 ಕೋಟಿ ಉಳಿತಾಯ ಮಾಡಿದ್ದು, ಇವು ಇವರ ಸಂಪೂರ್ಣ ಷೇರು ಮಾರುಕಟ್ಟೆಯ ಹೂಡಿಕೆಯ  ಸುಮಾರು 13 ಪ್ರತಿಶತದಷ್ಟಿವೆ. ಇದಷ್ಟೇ ಅಲ್ಲದೇ ಬಂಧನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಅದರ ಕೆಲವು ಅಂಗಸಂಸ್ಥೆಗಳಲ್ಲಿ ಸಣ್ಣ ಹೂಡಿಕೆಗಳನ್ನು ಮಾಡಿದ್ದಾರೆ.

ಇದರ ಜೊತೆ ಹಲವು ಎಫ್‌ಎಂಸಿಜಿ ಸ್ಟಾಕ್‌ಗಳಲ್ಲೂ ದಂಪತಿ ಜೊತೆಯಾಗಿ ಹೂಡಿಕೆ ಮಾಡಿದ್ದಾರೆ.  

  • ಪ್ರೊಟೆಕ್ಟರ್ & ಗಂಬ್ಲೆ ಹೈಜಿನ್ & ಹೆಲ್ತ್‌ಕೇರ್ ಲಿಮಿಟೆಡ್‌ನಲ್ಲಿ ಅಮಿತ್ ಶಾ ಹಾಗೂ ಸೋನಾಲ್ ಇಬ್ಬರು ತಲಾ  0.95 ಕೋಟಿ ಹೂಡಿಕೆ ಮಾಡಿದ್ದಾರೆ.
  • ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್‌ನಲ್ಲಿ ಇಬ್ಬರೂ ತಲಾ 1.35 ಕೋಟಿ
  • ಕೋಲ್ಗೇಟ್ ಪಾಮ್ ಆಲಿವ್ ಇಂಡಿಯಾ ಲಿಮಿಟೆಡ್‌ನಲ್ಲಿ ತಲಾ 1.07 ಕೋಟಿ 

ಜೊತೆಯಾಗಿ ಈ ಮೂರು ಹೂಡಿಕೆಗಳಿಂದ ದಂಪತಿ 12 ಪ್ರತಿಶತದಷ್ಟು ಲಾಭ ಗಳಿಸಿದ್ದಾರೆ. 

Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್‌ ನಾಯಕ!

ಅವರು ಹೂಡಿಕೆ ಮಾಡಿದ ಇನ್ನುಳಿದ ಕಂಪನಿಗಳೆಂದರೆ

  • ಗುಜರಾತ್ ಫ್ಲೋರೋಕೆಮಿಕಲ್ ಲಿಮಿಟೆಡ್‌ (1.79 ಕೋಟಿ)
  • ಲಕ್ಷ್ಮಿ ಮೆಚಿನ್ ವರ್ಕ್ಸ್ ಲಿಮಿಟೆಡ್ (1.22 ಕೋಟಿ)
  • ಎಂಆರ್‌ಎಳ್ ಲಿಮಿಟೆಡ್ (1.29 ಕೋಟಿ)
  • ಭಾರ್ತಿ ಏರ್‌ಟೆಲ್ ಲಿಮಿಟೆಡ್ (1.22 ಕೋಟಿ
  • ಸನ್ ಫಾರ್ಮಾಸೂಟಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ (2.05 ಕೋಟಿ)

ಒಟ್ಟಾಗಿ ಅಮಿತ್ ಷಾ ಹಾಗೂ ಪತ್ನಿ ಜೊತೆಯಾಗಿ ಹೊಂದಿರುವ ಚರ ಹಾಗೂ ಸ್ಥಿರ ಆಸ್ತಿಯ ಒಟ್ಟು ಮೌಲ್ಯ 65.7 ಕೋಟಿ, 2019ರಲ್ಲಿ ಇವರ ಆಸ್ತಿ 40.3 ಕೋಟಿ ಇದ್ದು, ಶೇಕಡಾ 63 ರಷ್ಟು ಹೆಚ್ಚಾಗಿದೆ. ಚರಾಸ್ತಿ ಮೇಲೆ ಇವರು ಮಾಡಿರುವ ಹೂಡಿಕೆಯೂ ಶೇಕಡಾ 82ರಷ್ಟು ಹೆಚ್ಚಾಗಿದೆ. ಹಾಗೆಯೇ ಸ್ಥಿರ ಆಸ್ತಿಯ ಮೌಲ್ಯವೂ ಕಳೆದೈದು ವರ್ಷದಲ್ಲಿ ಶೇಕಡಾ 36ರಷ್ಟು ಹೆಚ್ಚಾಗಿದೆ. 

click me!