ಕೆಲಸ ಬಿಟ್ಟು ನಮ್ಮದೆ ಬ್ಯುಸಿನೆಸ್ ಶುರು ಮಾಡ್ಬೇಕೆಂಬ ಆಸೆಯಿರುತ್ತದೆ. ಅಲ್ಪಸ್ವಲ್ಪ ಹಣ ಕೂಡಿಟ್ಟಿರುತ್ತೇವೆ. ಆದ್ರೆ ಯಾವ ವ್ಯಾಪಾರ ಶುರು ಮಾಡ್ಬೇಕೆಂಬ ಗೊಂದಲವಿರುತ್ತದೆ. ಅತಿ ಹೆಚ್ಚು ಲಾಭತರಬಲ್ಲ ವ್ಯಾಪಾರ ಬಗ್ಗೆ ಇಲ್ಲಿ ಮಾಹಿತಿಯಿದೆ.
Business Desk: ಸ್ವಂತ ವ್ಯವಹಾರ (Own business )ಪ್ರಾರಂಭಿಸಲು ಯೋಜಿಸುತ್ತಿದ್ದರೆ ವ್ಯಾಪಾರ ಶುರು ಮಾಡಲು ಇದು ಸರಿಯಾದ ಸಮಯ.ವೆಂಚರ್ ಇಂಟೆಲಿಜೆನ್ಸ್ ನ ಇತ್ತೀಚಿನ ವರದಿ (Report)ಯ ಪ್ರಕಾರ, ಭಾರತೀಯ ಸ್ಟಾರ್ಟ್‌ಅಪ್ (Startup)ಗಳು ವೇಗವಾಗಿ ಬೆಳೆಯುತ್ತಿವೆ. ಅತ್ಯಂತ ಆಶ್ಚರ್ಯಕರವೆಂದ್ರೆ ಕೇವಲ 2 ತಿಂಗಳುಗಳಲ್ಲಿ ಸ್ಟಾರ್ಟ್ ಅಪ್ ಗಳು 5 ಬಿಲಿಯನ್ ಡಾಲರ್ (Dollars )ಗಳಿಸಿವೆ. ಹೆಚ್ಚು ಗಳಿಸಬಲ್ಲ ನವೀನ ವ್ಯಾಪಾರವನ್ನು ಬಹುತೇಕ ಎಲ್ಲರೂ ಹುಡುಕುತ್ತಾರೆ. ನೀವು ಇನ್ನೂ ಪ್ಲಾನಿಂಗ್ ನಲ್ಲಿದ್ದರೆ ಚಿಂತಿಸುವ ಅಗತ್ಯವಿಲ್ಲ. 2022 ರಲ್ಲಿ ಅತಿ ಹೆಚ್ಚು ಲಾಭ ಗಳಿಸಬಲ್ಲ ಉದ್ಯೋಗದ ಪಟ್ಟಿ ನಮ್ಮಲ್ಲಿದೆ. ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಇದ್ರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಸ್ವಂತ ಉದ್ಯೋಗದ ಕನಸನ್ನು ನನಸಾಗಿಸುವವರಿಗೆ ಇಲ್ಲಿದೆ ಬ್ಯುಸಿನೆಸ್ ಐಡಿಯಾ
1. ಆನ್ಲೈನ್ ಟೀಚಿಂಗ್ : ಕೋವಿಡ್ 19 ಸಾಂಕ್ರಾಮಿಕ ರೋಗವು ಏಕಾಏಕಿ ಕಲಿಕೆ ವಿಧಾನವನ್ನು ಬದಲಿಸಿದೆ. ಶಾಲೆಗಳಿಗೆ ಹೋಗಿ ಕಲಿಯುತ್ತಿದ್ದ ಮಕ್ಕಳು ಆನ್ಲೈನ್ ಮೂಲಕ ಕಲಿಯುತ್ತಿದ್ದಾರೆ. ಶಾಲೆ-ಕಾಲೇಜು ಮಕ್ಕಳು ಮಾತ್ರವಲ್ಲ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರು ಕೂಡ ಆನ್ಲೈನ್ ಕಲಿಕೆಗೆ ಸ್ಥಳಾಂತರಗೊಂಡಿದ್ದಾರೆ. ಯಾವುದೇ ವಿಷಯದಲ್ಲಿ ನೀವು ಪರಿಣಿತಿ ಹೊಂದಿದ್ದರೆ ಆನ್ಲೈನ್ ಟೀಚಿಂಗ್ ಶುರು ಮಾಡಬಹುದು. ನೀವು ಯಾವುದೇ ಸ್ಥಳದಲ್ಲಿರಲಿ ಯುಟ್ಯೂಬ್ ಮೂಲಕ ನೀವು ಕೆಲಸ ಆರಂಭಿಸಬಹುದು. ಬೈಜುಸ್ ಸೇರಿದಂತೆ ಅನೇಕ ಆನ್‌ಲೈನ್ ಕಲಿಕೆ ವೇದಿಕೆಗಳ ಮೂಲಕ ನೀವು ವಿದ್ಯಾರ್ಥಿಗಳಿಗೆ ಕಲಿಸಬಹುದು. ಯಾವುದೇ ವಿಷಯಗಳಲ್ಲಿ ಅಗತ್ಯವಾದ ಪರಿಣತಿಯನ್ನು ಹೊಂದಿಲ್ಲದಿದ್ದರೆ, ನಿಮ್ಮ ಭಾಷೆಯನ್ನೇ ನೀವು ವಿದೇಶಿಗರಿಗೆ ಅಥವಾ ಅನ್ಯ ರಾಜ್ಯದವರಿಗೆ ಕಲಿಸಬಹುದು.
2. ಸೈಬರ್ ಭದ್ರತಾ ಸೇವೆಗಳು : ನೀವು ಹ್ಯಾಕಿಂಗ್, ಸಾಫ್ಟ್ ವೇರ್ ಮತ್ತು ಹಾರ್ಡ್‌ವೇರ್‌ನಲ್ಲಿ ಪರಿಣತಿ ಹೊಂದಿದ್ದರೆ ಸೈಬರ್ ಸೆಕ್ಯುರಿಟಿ ಸೇವೆಗಳನ್ನು ನೀಡಬಹುದು. ಅದಕ್ಕಾಗಿ ಸ್ವಂತ ಕಂಪನಿಯನ್ನು ಪ್ರಾರಂಭಿಸಬಹುದು. 2020ರಲ್ಲಿ ಭಾರತದಲ್ಲಿ ಸೈಬರ್ ದಾಳಿ ಅತಿ ಹೆಚ್ಚಾಗಿ ವರದಿಯಾಗಿದೆ. ತಮ್ಮ ಸಿಸ್ಟಮ್‌ಗಳು ಮತ್ತು ಡೇಟಾವನ್ನು ರಕ್ಷಿಸಲು ಎಲ್ಲ ಕಂಪನಿಗಳು ದೊಡ್ಡ ಮಟ್ಟದಲ್ಲಿ ಹಣ ಹೂಡುತ್ತವೆ. ಇದರ ಪ್ರಯೋಜನವನ್ನು ನೀವು ಪಡೆಯಬಹುದು.
ಇದನ್ನೂ ಓದಿ: Business Ideas ಕೇವಲ 8ನೇ ತರಗತಿ ಅನ್ನೋ ಚಿಂತೆ ಬೇಡ, ಕಡಿಮೆ ಹೂಡಿಕೆಯಲ್ಲಿ ಕೈತುಂಬ ಆದಾಯ ಗಳಿಸಿ!
3. ಕ್ಲೌಡ್ ಕಿಚನ್ : ಇದು ಆನ್ಲೈನ್ ದುನಿಯಾ. ಜನರು ಮಾರುಕಟ್ಟೆಗೆ ಬರುವುದಕ್ಕಿಂತ ಆನ್ಲೈನ್ ಸೇವೆ ಪಡೆಯಲು ಇಷ್ಟಪಡ್ತಿದ್ದಾರೆ. ಅಡುಗೆ,ಆಹಾರ ಕೂಡ ಆನ್ಲೈನ್ ಮೂಲಕ ಹೆಚ್ಚು ಮಾರಾಟವಾಗ್ತಿದೆ. ಕ್ಲೌಡ್ ಕಿಚನ್ 2022 ರ ಅದ್ಭುತ ವ್ಯಾಪಾರ ಕಲ್ಪನೆಗಳಲ್ಲಿ ಒಂದಾಗಿದೆ. ನೀವು ಇದಕ್ಕೆ ಹೆಚ್ಚಿನ ಹೂಡಿಕೆ ಮಾಡಬೇಕಾಗಿಲ್ಲ. ದೊಡ್ಡ ಜಾಗದ ಅವಶ್ಯಕತೆಯೂ ಆರಂಭದಲ್ಲಿ ಇರುವುದಿಲ್ಲ. ಮನೆಯಲ್ಲಿಯೇ ಅಡುಗೆ ಮಾಡಿ,ಆನ್ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಆಹಾರಕ್ಕಾಗಿ ಆರ್ಡರ್ ಪಡೆಯಬಹುದು.
4. ಪೆಟ್ ಡೇಕೇರ್ : ನೀವು ಸಾಕುಪ್ರಾಣಿಗಳ ಪ್ರೇಮಿಯಾಗಿದ್ದರೆ, ಸಾಕುಪ್ರಾಣಿಗಳ ಡೇಕೇರ್ ವ್ಯವಹಾರವನ್ನು ಪ್ರಾರಂಭಿಸಬಹುದು.ಕಚೇರಿಗೆ ಹೋಗುವ ವೃತ್ತಿಪರರಿಗೆ ಆ ಸಮಯದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ನೋಡಿಕೊಳ್ಳುವವರ ಅವಶ್ಯಕತೆಯಿರುತ್ತದೆ. ಅವರ ಸಾಕು ಪ್ರಾಣಿಗಳನ್ನು ನೀವು ನೋಡಿಕೊಳ್ಳುವ ಮೂಲಕ ಹಣ ಗಳಿಸಬಹುದು. ವಿದೇಶಿ ಪ್ರವಾಸಕ್ಕೆ ಹೋಗುವಾಗ ಹಾಗೂ ಬೇರೆ ಊರಿಗೆ ಹೋಗುವಾಗಲೂ ಜನರು ಸಾಕು ಪ್ರಾಣಿಗಳನ್ನು ಡೇಕೇರ್ ನಲ್ಲಿ ಬಿಡುತ್ತಾರೆ.
ಇದನ್ನೂ ಓದಿ: Marriage Loan : ಧೂಮ್ಧಾಮ್ ಮದುವೆಗೆ ಹಣ ಸಾಲ್ತಿಲ್ವಾ? ಇಲ್ಲಿ ಸಿಗುತ್ತೆ ಸಾಲ
5. 3ಡಿ ಮುದ್ರಣ : 3 ಡಿ ಮುದ್ರಣದ ತಂತ್ರಜ್ಞಾನವು ಭಾರತದಲ್ಲಿ ಅಗಾಧ ಜನಪ್ರಿಯತೆಯನ್ನು ಗಳಿಸುತ್ತಿದೆ. ಡಿಜಿಟಲ್ ಮುದ್ರಣ ಉದ್ಯಮದ ಬಗ್ಗೆ ನಿಮಗೆ ಉತ್ತಮ ಜ್ಞಾನವಿದ್ದರೆ, 3ಡಿ ಮುದ್ರಣ ವ್ಯವಹಾರದ ಬಗ್ಗೆ ಗಂಭೀರವಾಗಿ ಯೋಚಿಸಿ.
6. ಬ್ಲಾಗಿಂಗ್ : ಬರವಣಿಗೆಯಲ್ಲಿ ಹಿಡಿತವಿದ್ದರೆ ನೀವು ಒಳ್ಳೆಯ ಬ್ಲಾಗರ್ ಆಗಬಹುದು. 2022 ರಲ್ಲಿ ಆಹಾರದ ಬ್ಲಾಗಿಂಗ್ ಅತ್ಯುತ್ತಮ ವ್ಯಾಪಾರವಾಗಿದೆ. ವಿವಿಧ ರೀತಿಯ ಪಾಕಪದ್ಧತಿಗಳನ್ನು ಒದಗಿಸುವ ವಿವಿಧ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ, ನಿಮ್ಮ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ಪುಟಗಳಲ್ಲಿ ನಿಮ್ಮ ವಿಮರ್ಶೆಗಳನ್ನು ಪೋಸ್ಟ್ ಮಾಡಬಹುದು. ಇದ್ರಿಂದಲೂ ನೀವು ಸಾಕಷ್ಟು ಹಣ ಗಳಿಸಬಹುದು.
7. ಸಿಸಿಟಿವಿ : ಇತ್ತೀಚಿನ ದಿನಗಳಲ್ಲಿ ಭದ್ರತೆ ಬಗ್ಗೆ ಜನರು ಹೆಚ್ಚು ಗಮನ ನೀಡ್ತಿದ್ದಾರೆ. ಮನೆ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುತ್ತಿದ್ದಾರೆ. ಈ ವ್ಯಾಪಾರ ಶುರು ಮಾಡಿ ನೀವ ಆದಾಯ ಗಳಿಸಬಹುದು.