ರಾಜಸ್ಥಾನದ ಚುರುನಲ್ಲಿ ಟೊಮೆಟೋ ಬೆಲೆ ಕೇವಲ 31 ರು. ದೇಶದಲ್ಲೇ ಅತೀ ಕಡಿಮೆ ದರ

By Kannadaprabha NewsFirst Published Jul 7, 2023, 11:13 AM IST
Highlights

ದೇಶಾದ್ಯಂತ ಟೊಮೆಟೋ ಬೆಲೆ ಏರುಗತಿಯಲ್ಲೇ ಸಾಗಿದ್ದು ಗುರುವಾರದ ದಿನದಾಂತ್ಯದಲ್ಲಿ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಕೇಜಿಗೆ 162 ರು. ತಲುಪಿದೆ. ಆದರೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಪವಾಡಸದೃಶವೆಂಬಂತೆ ಕೇಜಿಗೆ 31 ರು. ಬೆಲೆ ದಾಖಲಾಗಿದ್ದು, ದೇಶದಲ್ಲೇ ಅತಿ ಕನಿಷ್ಠ ಎನ್ನಿಸಿಕೊಂಡಿದೆ.

ನವದೆಹಲಿ: ದೇಶಾದ್ಯಂತ ಟೊಮೆಟೋ ಬೆಲೆ ಏರುಗತಿಯಲ್ಲೇ ಸಾಗಿದ್ದು ಗುರುವಾರದ ದಿನದಾಂತ್ಯದಲ್ಲಿ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಕೇಜಿಗೆ 162 ರು. ತಲುಪಿದೆ. ಆದರೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ಪವಾಡಸದೃಶವೆಂಬಂತೆ ಕೇಜಿಗೆ 31 ರು. ಬೆಲೆ ದಾಖಲಾಗಿದ್ದು, ದೇಶದಲ್ಲೇ ಅತಿ ಕನಿಷ್ಠ ಎನ್ನಿಸಿಕೊಂಡಿದೆ. ಮಿಕ್ಕೆಲ್ಲ ಸ್ಥಳಗಳಲ್ಲೂ ಟೊಮೆಟೊ ಬೆಲೆ ಹೆಚ್ಚಿದ್ದು, ದೇಶದ ಸರಾಸರಿ ಬೆಲೆ ಕೇಜಿಗೆ 95.58 ರು. ದಾಖಲಾಗಿದೆ. ಕೋಲ್ಕತಾದಲ್ಲಿ 152 ರು., ದೆಹಲಿಯಲ್ಲಿ 120 ರು., ಚೆನ್ನೈನಲ್ಲಿ 117 ರು., ಬೆಂಗಳೂರಿನಲ್ಲಿ 110 ರು., ಹಾಗೂ ಮುಂಬೈನಲ್ಲಿ ಕೇಜಿಗೆ 108 ರು. ಬೆಲೆ ಇದೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕೇಜಿಗೆ 90 ರು. ಇದೆ.

ಟೊಮೆಟೋ ನಂತರ 100 ರೂ. ದಾಟಿದ ಬೀನ್ಸ್‌

Latest Videos

ಟೊಮೆಟೋ ನಂತರ ಈಗ ಬೀನ್ಸ್‌, ಕ್ಯಾರೆಟ್‌ ದರ ಕೂಡ ನಗರದ ಮಾರುಕಟ್ಟೆಗಳಲ್ಲಿ ಶತಕದ ಗಡಿ ದಾಟಿದೆ. ತರಕಾರಿಗಳನ್ನು ಕೊಂಡುಕೊಳ್ಳಲು ಸಂತೆಗೆ ತೆರಳುವ ಗ್ರಾಹಕರು ಬೆಲೆ ಕೇಳಿ ಅಕ್ಷರಶಃ ಹೌಹಾರುತ್ತಿದ್ದಾರೆ. ಏರಿಕೆಯ ಹಾದಿಯಲ್ಲಿ ಇರುವ ನಾಟಿ ಟೊಮೆಟೋ ಸೋಮವಾರ ಸ್ಥಳೀಯ ಮಾರುಕಟ್ಟೆಗಳಲ್ಲಿ ಕೇಜಿಗೆ .120-125 ದರದಲ್ಲಿ ಮಾರಾಟವಾಗಿದೆ. ಹಾಪ್‌ಕಾಮ್ಸ್‌ನಲ್ಲಿ .124ಕ್ಕೆ ಮಾರಾಟವಾಗಿ​ದೆ. ಹಿಂದಿನ ವಾರಕ್ಕಿಂತಲೂ ಕಡಿಮೆ ಪ್ರಮಾಣದ ಟೊಮೆಟೋ ಬರುತ್ತಿರುವುದು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ನಗರದ ನಂದಿನಿ ಲೇಔಟ್‌, ಮಲ್ಲೇಶ್ವರ, ಜೆ.ಪಿ.ನಗರ, ಯಶವಂತಪುರ ಸ್ಥಳೀಯ ಮಾರುಕಟ್ಟೆ, ತಳ್ಳುಗಾಡಿಗಳಲ್ಲಿ ಮಾರುವವರು .130 ರವರೆಗೂ ಟೊಮೆಟೋ ಮಾರುತ್ತಿದ್ದಾರೆ. ಹೀಗಾಗಿ ಗ್ರಾಹಕರು ಟೊಮೆಟೋ ಬದಲು ಬೇರೆ ತರಕಾರಿಗಳನ್ನು ಖರೀದಿಸುತ್ತಿದ್ದಾರೆ.

ಹಾಸನ: ಬೆಲೆ ಏರಿಕೆ, ಹೊಲಕ್ಕೆ ನುಗ್ಗಿ ಟೊಮ್ಯಾಟೋ ಕದ್ದ ಕಳ್ಳರು..!

ಕೆ.ಆರ್‌.ಮಾರುಕಟ್ಟೆಯಲ್ಲಿ ಸಾಧಾರಣ 24 ಕೇಜಿ ಬಾಕ್ಸ್‌ ಟೊಮೆಟೋ .1800 ರವರೆಗೆ ಮಾರಾಟವಾಗಿದೆ. ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಇಷ್ಟೊಂದು ಬೆಲೆ ಏರುತ್ತಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ವ್ಯಾಪಾರಿಗಳು ಸದ್ಯಕ್ಕೆ ಈ ಬೆಲೆ ಇಳಿಯುವುದಿಲ್ಲ ಎನ್ನುತ್ತಿದ್ದಾರೆ.

ಇನ್ನು ಕಳೆದ ವಾರದವರೆಗೆ .90ರ ಆಸುಪಾಸಿಲ್ಲಿದ್ದ ಬೀನ್ಸ್‌ ಕೂಡ ಸೋಮವಾರ .30ನಷ್ಟು ಬೆಲೆಯನ್ನು ಹೆಚ್ಚಿಸಿಕೊಂಡಿದ್ದು .120 ರವರೆಗೆ ಮಾರಾಟವಾಗಿದೆ. ಸಗಟು ವ್ಯಾಪಾರಿಗಳಿಗೆ ಇದು .80-90 ನಂತೆ ಸಿಗುತ್ತಿದೆ. ಆದರೆ, ಟೊಮೆಟೋನಷ್ಟು ಬೀನ್ಸ್‌ ಕೊರತೆಯಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ. ಇನ್ನು, ಕ್ಯಾರೆಟ್‌ ಬೆಲೆ ಕೂಡ ಏರುಗತಿಗೆ ಬಂದಿದ್ದು, ಕೇಜಿಗೆ .100 -.110 ನಂತೆ ಮಾರಾಟವಾಗುತ್ತಿದೆ. ಹಾಪ್‌ಕಾಮ್ಸ್‌ನಲ್ಲಿ ಮಾರುಕಟ್ಟೆಗಿಂತ .5​-.10 ದರ ವ್ಯತ್ಯಾಸವಾಗಿದೆ.

ಕೆಜಿಗೆ 150 ರೂ. ದಾಟಿದ ಟೊಮ್ಯಾಟೋ: ಈ ರಾಜ್ಯದ ನ್ಯಾಯಬೆಲೆ ಅಂಗಡಿಗಳಲ್ಲಿ 60 ರೂ. ಗೆ ಮಾರಾಟ!

ಶತಕ ದಾಟಿದ ತರಕಾರಿಗಳು

ಟೊಮೆಟೋ (ನಾಟಿ) .125
ಟೊಮೆಟೋ (ಜಾಮುನ್‌) .120
ಬೀನ್ಸ್‌ .120
ಬೀನ್ಸ್‌ಕಾಳು .110
ಕ್ಯಾರೇಟ್‌ .110
ಹಸಿ ಮೆಣಸಿನ ಕಾಯಿ .170
ಹಸಿರು ಬಟಾಣಿ .190

ಶತಕ​ದ ಅಂಚಿನಲ್ಲಿರುವ ತರಕಾರಿಗಳು

ಚಪ್ಪರದ ಅವರೆ .86
ಗೋರೆಕಾಯಿ .80
ದಪ್ಪ ಮೆಣಸಿನಕಾಯಿ .84
ಗೆಡ್ಡೆ ಕೋಸು .90
ಸೋರೆ ಕಾಯಿ .75
ಹಾಗಲ ಕಾಯಿ .98
ಬದನೆಕಾಯಿ .85

click me!