
ಭಾರತದಲ್ಲಿ ಮಹಿಳೆ ಹಣಕಾಸಿನ ವಿಚಾರಕ್ಕೆ (Financial matters) ಸಂಬಂಧಿಸಿ ಇಂದಿಗೂ ಪತಿಯನ್ನೇ (Husband) ಅವಲಂಬಿಸಿದ್ದಾಳೆ. ಕೆಲಸಕ್ಕೆ ಹೋಗದ ಗೃಹಿಣಿಯರು(home makers) ಚಿಕ್ಕಪುಟ್ಟ ವಸ್ತು ಖರೀದಿಗೂ ಪತಿ ಮುಂದೆ ಕೈಚಾಚಬೇಕು. ಈ ಅವಲಂಬನೆ ಮುಂದೆ ಸಂಕಷ್ಟಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಪತಿ ಸಾವಿನ ನಂತ್ರ ಪತ್ನಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಸುಂದರವಾಗಿ ಕಳೆಯಬೇಕಿದ್ದ ನಿವೃತ್ತಿ ಬದುಕು ದುಸ್ತರವಾಗಬಹುದು.ಪತ್ನಿ ಈಗ ಮಾತ್ರವಲ್ಲ, ನಿವೃತ್ತಿ ನಂತ್ರವೂ ಸುಖವಾಗಿ ಬದುಕು ಸಾಗಿಸಬೇಕೆಂದು ಬಯಸೋ ಪತಿ ಇಂದೇ ಹೂಡಿಕೆಗೆ ಮುಂದಾಗಬೇಕು. ಹೆಂಡತಿ ವೃದ್ಧಾಪ್ಯದಲ್ಲಿಆರ್ಥಿಕವಾಗಿ ಸ್ವತಂತ್ರಳಾಗಿರಬೇಕೆಂದ್ರೆ ಪತಿ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ(NPS) ಹೂಡಿಕೆ (Investment) ಮಾಡೋದು ಒಳ್ಳೆಯದು.
ಏನಿದು ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme)?
ದೇಶದ ಎಲ್ಲ ವರ್ಗದವರಿಗೂ ಕೇಂದ್ರ ಸರ್ಕಾರ ಹಲವು ವಿಶೇಷ ಯೋಜನೆಗಳನ್ನು ಜಾರಿಗೊಳಿಸಿದೆ. ಅದ್ರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ, ಪತ್ನಿ ತಿಂಗಳಿಗೆ ಸುಮಾರು 44,793 ರೂಪಾಯಿಗಳನ್ನು ಗಳಿಸಬಹುದು. ಎನ್ ಪಿಎಸ್ ಒಂದು ರೀತಿಯ ಪಿಂಚಣಿ ಯೋಜನೆಯಾಗಿದೆ(Pension Schme). 60 ವರ್ಷ ವಯಸ್ಸಿನ ನಂತರ ನಿಮಗೆ ಪಿಂಚಣಿ ಸಿಗಲಿದೆ. 60 ವರ್ಷಗಳ ನಂತರ ಪ್ರತಿ ತಿಂಗಳು ನಿಯಮಿತ ಆದಾಯವನ್ನು(Income) ಗಳಿಸಬಹುದು. ಪತ್ನಿ ಹೆಸರಿನಲ್ಲಿ ಹೊಸ ಪಿಂಚಣಿ ವ್ಯವಸ್ಥೆ (NPS) ಖಾತೆಯನ್ನು ತೆರೆಯಬಹುದು. 60 ವರ್ಷದ ನಂತ್ರ ಪತ್ನಿಗೆ ದೊಡ್ಡ ಮೊತ್ತದ ಹಣ ಸಿಗಲಿದೆ. ಜೊತೆಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ನಿಯಮಿತ ಆದಾಯವೂ ಸಿಗುತ್ತದೆ.
ಹೊಸ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ : ಅನುಕೂಲಕ್ಕೆ ಅನುಗುಣವಾಗಿ ಪ್ರತಿ ತಿಂಗಳು ಅಥವಾ ವಾರ್ಷಿಕವಾಗಿ ಹೊಸ ಪಿಂಚಣಿ ವ್ಯವಸ್ಥೆಯ ಖಾತೆಯಲ್ಲಿ ಹಣ ಠೇವಣಿ (Deposit) ಮಾಡಬಹುದು. ಕೇವಲ 1,000 ರೂಪಾಯಿಗೆ ಪತ್ನಿ ಹೆಸರಿನಲ್ಲಿ ಎನ್ ಪಿಸಿ ಖಾತೆ ತೆರೆಯಬಹುದು. ಈ ಖಾತೆ 60 ನೇ ವಯಸ್ಸಿಗೆ ಪಕ್ವವಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಪತ್ನಿಗೆ 65 ವರ್ಷವಾಗುವವರೆಗೂ ನೀವು ಇದ್ರಲ್ಲಿ ಹೂಡಿಕೆ ಮಾಡಬಹುದು.
New Labour Codes: ಮುಂದಿನ ವರ್ಷ ವಾರದಲ್ಲಿ ನಾಲ್ಕೇ ದಿನ ಕೆಲಸ? ಹೊಸ ಕಾರ್ಮಿಕ ನೀತಿ ಸಂಹಿತೆ ಜಾರಿಗೆ ಕೇಂದ್ರ ಚಿಂತನೆ
ತಿಂಗಳಿಗೆ ಸಿಗಲಿದೆ ಇಷ್ಟು ಹಣ : 30 ವರ್ಷದ ಪತ್ನಿ ಹೆಸರಿನಲ್ಲಿ ಎನ್ ಪಿಸಿ ಖಾತೆ ತೆರೆದಿದ್ದೀರಿ ಎಂದಿಟ್ಟುಕೊಳ್ಳೋಣ. ನೀವು ಖಾತೆಗೆ ಪ್ರತಿ ತಿಂಗಳು 5000 ರೂಪಾಯಿ ಹೂಡಿಕೆ(Invest) ಮಾಡುತ್ತೀರಿ. ವಾರ್ಷಿಕವಾಗಿ ಹೂಡಿಕೆಗೆ ಶೇ. 10ರಷ್ಟು ಲಾಭ ಬಂದರೆ, 60ನೇ ವಯಸ್ಸಿನಲ್ಲಿ ಅವರ ಖಾತೆಯಲ್ಲಿ ಒಟ್ಟು 1.12 ಕೋಟಿ ರೂ.ಇರುತ್ತದೆ. ಅಂದ್ರೆ ಪ್ರತಿ ತಿಂಗಳು ಸುಮಾರು 45,000 ರೂಪಾಯಿ ಪಿಂಚಣಿ ಸಿಗುತ್ತದೆ. ಜೀವನ ಪರ್ಯಂತ ಅವರಿಗೆ ಈ ಪಿಂಚಣಿ ಸಿಗುತ್ತದೆ.
ಎನ್‌ಪಿಎಸ್ ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಣವನ್ನು ವೃತ್ತಿಪರ ಫಂಡ್ ಮ್ಯಾನೇಜರ್ ನಿರ್ವಹಿಸುತ್ತಾರೆ. ಎನ್ ಪಿಸಿ ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ.
ಯೋಜನೆಯಲ್ಲಿ ಯಾರು ಹೂಡಿಕೆ ಮಾಡಬಹುದು?
ಈ ಯೋಜನೆ (Plan)ಯಲ್ಲಿ 18-65 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕ ಖಾತೆ ತೆರೆಯಬಹುದು. ಒಬ್ಬ ವ್ಯಕ್ತಿಯು ಒಂದು ಎನ್ ಪಿಸಿ ಖಾತೆಯನ್ನು ಮಾತ್ರ ತೆರೆಯಬಹುದು. ಇದು ಜಂಟಿ ಖಾತೆಯಾಗಿರಬಾರದು.
ಖಾತೆಯನ್ನು ಯಾವ ರೀತಿಯಲ್ಲಿ ತೆರೆಯಬಹುದು:
ಈ ಯೋಜನೆಯಡಿ ಎರಡು ರೀತಿಯ ಖಾತೆಗಳನ್ನು ತೆರೆಯಬಹುದು. ಮೊದಲನೆಯದು ಆಯ್ಕೆ ಒಂದು. ಇದರಲ್ಲಿ ಸಮಯಕ್ಕೆ ಮೊದಲು ಹಣ ವಾಪಸ್ ಪಡೆಯಲು ಸಾಧ್ಯವಿಲ್ಲ. ಅವಧಿ ಮುಗಿದ ನಂತರವೇ ನೀವು ಹಣ ವಾಪಸ್ ಪಡೆಯಬೇಕು. ಆಯ್ಕೆ ಎರಡನ್ನು ಆಯ್ಕೆ ಮಾಡಿಕೊಳ್ಳಲು ನೀವು ಮೊದಲು ಟೈರ್ ಒನ್ ಖಾತೆ ಹೊಂದಿರಬೇಕು. ಇದ್ರಲ್ಲಿ ನಿಮಗೆ ಇಷ್ಟಬಂದಂತೆ ಹಣ ಠೇವಣಿ ಮಾಡಬಹುದು ಹಾಗೂ ವಾಪಸ್ ಪಡೆಯಬಹುದು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.