Tie up for Tokenization:ಮಾಸ್ಟರ್ ಕಾರ್ಡ್-ಗೂಗಲ್ ಪೇ ಒಪ್ಪಂದ; ಟೋಕನೈಸ್ಡ್ ಕಾರ್ಡ್ ಸೇವೆಗೆ ಸಿದ್ಧ

By Suvarna News  |  First Published Dec 21, 2021, 6:34 PM IST

* ಜನವರಿ 1 ರಿಂದ ಆನ್ ಲೈನ್ ಪಾವತಿಗೆ ಟೋಕನೈಸೇಷನ್ ವ್ಯವಸ್ಥೆ
*ಗೂಗಲ್ ಪೇ ಬಳಕೆದಾರರಿಗೆ ಮಾಸ್ಟರ್ ಕಾರ್ಡ್ ಮೂಲಕ ಸುರಕ್ಷಿತ ಆನ್ ಲೈನ್ ಪಾವತಿಗೆ ಅವಕಾಶ
*ಈ ಸೇವೆಗೆ ಬಳಕೆದಾರರು Google Pay app ನಲ್ಲಿ ಕಾರ್ಡ್ ಮಾಹಿತಿ, OTP ದಾಖಲಿಸೋದು ಅಗತ್ಯ
 


ನವದೆಹಲಿ (ಡಿ.21): ಜನವರಿ 1ರಿಂದ ದೇಶಾದ್ಯಂತ  ಆನ್ ಲೈನ್ ವ್ಯವಹಾರಗಳಿಗೆ (Online transaction)ಸಂಬಂಧಿಸಿ ಟೋಕನೈಸೇಷನ್(Tokenisation)ವ್ಯವಸ್ಥೆ ಜಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಮಾಸ್ಟರ್ ಕಾರ್ಡ್(Mastercard ) ಹಾಗೂ ಗೂಗಲ್ ಪೇ(Google Pay)ಗ್ರಾಹಕರಿಗೆ ಟೋಕನೈಸ್ಟ್ (tokenised ) ಕಾರ್ಡ್ ಸೇವೆಗಳನ್ನು ಒದಗಿಸೋ ಸಂಬಂಧ ಒಪ್ಪಂದ ಮಾಡಿಕೊಂಡಿವೆ. ಇದ್ರಿಂದ ಗೂಗಲ್ ಪೇ(Google Pay)ಬಳಕೆದಾರರು ಮಾಸ್ಟರ್ ಕ್ರೆಡಿಟ್ ಕಾರ್ಡ್(Mastercard credit) ಹಾಗೂ ಡೆಬಿಟ್ ಕಾರ್ಡ್(debit card) ಬಳಸಿ ಸುರಕ್ಷಿತವಾಗಿ ಹಣವನ್ನು ವರ್ಗಾಯಿಸಲು ಸಾಧ್ಯವಾಗಲಿದೆ.

ಟೋಕನೈಸೇಷನ್ ನಿಂದ ಮಾಸ್ಟರ್ ಕಾರ್ಡ್ ಬಳಕೆದಾರರಿಗೆ ತಮ್ಮ ಮೊಬೈಲ್ ಗೆ ಸಂಪರ್ಕಿಸಲ್ಪಟ್ಟಿರೋ ಸುರಕ್ಷಿತ ಡಿಜಿಟಲ್ ಟೋಕನ್ ಮೂಲಕ ಪಾವತಿ ಮಾಡಲು ಸಾಧ್ಯವಾಗಲಿದೆ. ಈ ಟೋಕನ್ ವ್ಯವಸ್ಥೆಯಿಂದಾಗಿ ಅವರ ಕಾರ್ಡ್ ಮಾಹಿತಿಗಳಾದ ಸಂಖ್ಯೆ ಹಾಗೂ ಅವಧಿ ದಿನಾಂಕವನ್ನು (expiry date)ಗ್ರಾಹಕರ ಜೊತೆ ಹಂಚಿಕೊಳ್ಳಬೇಕಾದ ಅಗತ್ಯವಿಲ್ಲ. ಅಲ್ಲದೆ, ಟೋಕನೈಸೇಷನ್ ವ್ಯವಸ್ಥೆಯಿಂದ ಗೂಗಲ್ ಪೇ ಗ್ರಾಹಕರು ಆನ್ ಲೈನ್ ಪಾವತಿ ಸಮಯದಲ್ಲಿ ಮಾಸ್ಟರ್ ಕಾರ್ಡ್ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿ  ಈ ಮೊದಲಿನಂತೆಯೇ ಶೀಘ್ರವಾಗಿ ಪಾವತಿ ಮಾಡಲು ಸಾಧ್ಯವಾಗಲಿದೆ. 

Tap to resize

Latest Videos

undefined

Payment Card Tokenization:ಜನವರಿ 1ರಿಂದ ಆನ್ಲೈನ್ ತಾಣಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆಗೆ ಹೊಸ ನಿಯಮ

ಈ ಸೇವೆ ಪಡೆಯಲು ಬಳಕೆದಾರರು ಗೂಗಲ್ ಪೇ ಅಪ್ಲಿಕೇಷನ್ ನಲ್ಲಿ(Google Pay app) ತಮ್ಮ ಕಾರ್ಡ್ ಮಾಹಿತಿಗಳು ಹಾಗೂ ಒಟಿಪಿ ( OTP) ನೋಂದಣಿ ಮಾಡಬೇಕು. ಪ್ರಸ್ತುತ ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಚ್ ಡಿಎಫ್ ಸಿ(HDFC) ಬ್ಯಾಂಕ್, ಎಚ್ಎಸ್ ಬಿಸಿ(HSBC), ಆರ್ ಬಿಎಲ್ (RBL)ಬ್ಯಾಂಕ್ ಹಾಗೂ ಎಸ್ ಬಿಐ (SBI) ಮಾಸ್ಟರ್ ಕಾರ್ಡ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸೇವೆಗಳನ್ನು ಒದಗಿಸುತ್ತಿವೆ. 

'ಕಾರ್ಡ್ ಟೋಕನೈಸೇಷನ್ ಗಾಗಿ ನಾವು ಮಾಸ್ಟರ್ ಕಾರ್ಡ್ ಜೊತೆ ಒಗ್ಗೂಡಿ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಇದು ಬಳಕೆದಾರರು ಕಾರ್ಡ್ ಬಳಸಿ ಮಾಡೋ ಪಾವತಿಗಳನ್ನು ಸುರಕ್ಷಿತವಾಗಿರಿಸಲಿದೆ' ಎಂದು ಗೂಗಲ್ ಪೇ ಬ್ಯುಸಿನೆಸ್ ಮುಖ್ಯಸ್ಥ ಸಜಿತ್ ಶಿವಾನಂದನ್ ತಿಳಿಸಿದ್ದಾರೆ. ಅನೇಕ ಕ್ರೆಡಿಟ್ ಕಾರ್ಡ್ ಗಳಿಗೆ ಈಗಾಗಲೇ ಈ ಸೇವೆಯನ್ನು ಆರಂಭಿಸಲಾಗಿದೆ. ಭಾರತದಲ್ಲಿ ಟೋಕನೈಸೇಷನ್ ಅನ್ನು ಗ್ರಾಹಕರು ಹೆಚ್ಚೆಚ್ಚು ಬಳಸಿಕೊಳ್ಳುವಂತೆ ಮಾಡಲು ಇತರ ಕೆಲವು ಬ್ಯಾಂಕ್ ಗಳೊಂದಿಗೆ ಕೂಡ ಗೂಗಲ್ ಒಪ್ಪಂದ ಮಾಡಿಕೊಳ್ಳುತ್ತಿದೆ. 

ಮಾಸ್ಟರ್ ಕಾರ್ಡ್ ಡಿಜಿಟಲ್ ಎನಾಬಲ್ ಮೆಂಟ್ ಸೇವೆ(Mastercard Digital Enablement Service) ಮೂಲಕ ಮೊಬೈಲ್ ಸಾಧನಗಳಲ್ಲಿ ಪಾವತಿ ಮಾಹಿತಿಗಳನ್ನು ಟೋಕನೈಸ್ಟ್ ಮಾಡಿ ಸಂಗ್ರಹಿಸಿಡಲಾಗುತ್ತದೆ. ಇದ್ರಿಂದ ಬಳಕೆದಾರರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಕಾರ್ಡ್ ಬಳಕೆದಾರರು ಮೊಬೈಲ್ ಕಳೆದುಕೊಂಡರೂ ಕೂಡ ಈ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ವ್ಯಾಪಾರಿಗಳ ಮುಖಾಂತರ ಟೋಕನ್ ಅನ್ನು ಸುಲಭವಾಗಿ ಅಪ್ ಡೇಟ್ ಮಾಡೋ ಮೂಲಕ ಬಳಕದಾರರು ಕಳೆದುಕೊಂಡ ಅಥವಾ ಅವಧಿ ಮುಗಿದ ಕಾರ್ಡ್ಗಳನ್ನು ಬದಲಾಯಿಸಲು ಅವಕಾಶವಿದೆ. 

New Labour Codes: ಮುಂದಿನ ವರ್ಷ ವಾರದಲ್ಲಿ ನಾಲ್ಕೇ ದಿನ ಕೆಲಸ? ಹೊಸ ಕಾರ್ಮಿಕ ನೀತಿ ಸಂಹಿತೆ ಜಾರಿಗೆ ಕೇಂದ್ರ ಚಿಂತನೆ

ಈ ವರ್ಷದ ಜೂನ್ ನಲ್ಲಿ ಗೂಗಲ್ ಪೇ ಎಸ್ ಬಿಐ ಸೇರಿದಂತೆ ಭಾರತದ ಪ್ರಮುಖ ಬ್ಯಾಂಕ್ ಗಳ ಜೊತೆ ಟೋಕನೈಸ್ಡ್ ಕಾರ್ಡ್ ಸೇವೆಗಳಿಗೆ ಸಂಬಂಧಿಸಿ ಒಪ್ಪಂದ ಮಾಡಿಕೊಂಡಿದೆ. ಗೂಗಲ್ ಪೇ ಯುಪಿಐ(UPI)ಅಪ್ಲಿಕೇಷನ್ ಮೂಲಕ ಇಂಡಸ್ ಬ್ಯಾಂಕ್, ಎಸ್ ಬಿಐ ಹಾಗೂ ಫೆಡರಲ್ ಬ್ಯಾಂಕ್ ಡೆಬಿಟ್  ಕಾರ್ಡ್ ಬಳಕೆದಾರರಿಗೆ ಹಾಗೂ ಇಂಡಸ್ ಇಂಡ್ ಬ್ಯಾಂಕ ಹಾಗೂ ಎಚ್ ಎಸ್ ಬಿಸಿ ಇಂಡಿಯಾ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಟೋಕ ನೈಸ್ಡ್ ಸೇವೆಗಳನ್ನು ಒದಗಿಸುತ್ತಿದೆ. 
 

click me!