Payment Card Tokenization:ಜನವರಿ 1ರಿಂದ ಆನ್ಲೈನ್ ತಾಣಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆಗೆ ಹೊಸ ನಿಯಮ

By Suvarna News  |  First Published Dec 21, 2021, 4:28 PM IST

*ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಅಳಿಸಿ ಹಾಕಲು ಡಿ.30 ಗಡುವು
*ಜ.1ರಿಂದ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸದಂತೆ ನೋಟಿಸ್ ನೀಡಿರೋ ಆರ್ ಬಿಐ
*ಆನ್ ಲೈನ್ ಪಾವತಿಯನ್ನು ಸುರಕ್ಷಿತವಾಗಿಡಲು ಈ ಯೋಜನೆ


ಆನ್ ಲೈನ್ ಪಾವತಿಯನ್ನು(Online payment) ಹೆಚ್ಚು ಸುರಕ್ಷಿತವಾಗಿಡಲು ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್ ಸುರಕ್ಷತೆ ಹೆಚ್ಚಿಸಲು ಆನ್ಲೈನ್ ವ್ಯಾಪಾರಿಗಳು (online merchants)ಹಾಗೂ ಪೇಮೆಂಟ್ ಗೇಟ್ ವೇಗಳ(payment gateways) ಬಳಿಯಿರೋ  ಕಾರ್ಡ್ ಮಾಹಿತಿಗಳನ್ನು ಅಳಿಸಿ ಹಾಕುವಂತೆ ಭಾರತೀಯ ರಿಸರ್ವ್ ಬ್ಯಾಂಕ್  (RBI) ಈ ಹಿಂದೆಯೇ  ನಿರ್ದೇಶನ ನೀಡಿದೆ. ಅಲ್ಲದೆ, ಈ ಕೆಲಸವನ್ನು ಜನವರಿ 1ರೊಳಗೆ ಮಾಡಿ ಮುಗಿಸಲು ಗಡುವು ವಿಧಿಸಿದೆ. ಆ ಬಳಿಕ ಆನ್ ಲೈನ್ ವ್ಯಾಪಾರಿಗಳು ವಹಿವಾಟುಗಳನ್ನು ನಡೆಸಲು ಟೋಕನೈಸೇಷನ್(tokenisation) ವ್ಯವಸ್ಥೆಯನ್ನು ಅಳವಡಿಸಿಕೊಳ್ಳೋದು ಕಡ್ಡಾಯ.

ಏನಿದು ಹೊಸ ನಿಯಮ?
ಇಲ್ಲಿಯ ತನಕ ಆನ್ ಲೈನ್ ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಕಾರ್ಡ್ ಆನ್ ಫೈಲ್ (CoF)ನಲ್ಲಿ ಸಂಗ್ರಹಿಸಿಡುತ್ತಿದ್ದರು. ಇದ್ರಿಂದ ನೀವು ನಿರ್ದಿಷ್ಟಆನ್ ಲೈನ್ ತಾಣದಲ್ಲಿ ಮೊದಲ ಬಾರಿಗೆ  ಶಾಪಿಂಗ್ ಮಾಡೋವಾಗ ಕ್ರೆಡಿಟ್ (Credit) ಅಥವಾ ಡೆಬಿಟ್ (Debit)ಕಾರ್ಡ್ ಮಾಹಿತಿ ನೀಡಿದ್ರೆ ಸಾಕು, ಮುಂದಿನ ಬಾರಿ ಶಾಪಿಂಗ್ (Shopping) ಮಾಡೋವಾಗ ಈ ಮಾಹಿತಿಗಳನ್ನು ಇನ್ನೊಮ್ಮೆ ನೀಡಬೇಕಾದ ಅಗತ್ಯವಿಲ್ಲ. ಆದ್ರೆ ಇದ್ರಿಂದ ಗ್ರಾಹಕರ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಸೈಬರ್ ವಂಚಕರು ಕದ್ದು ದುರುಪಯೋಗಪಡಿಸಿಕೊಳ್ಳೋ ಸಾಧ್ಯತೆಯೂ ಇದೆ. ಈ ಹಿನ್ನೆಲೆಯಲ್ಲಿ ಆನ್ ಲೈನ್ ಪಾವತಿ ಸಮಯದಲ್ಲಿ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಮಾಹಿತಿಗಳನ್ನು ಹೆಚ್ಚು ಸುರಕ್ಷಿತವಾಗಿಡೋ ಉದ್ದೇಶದಿಂದ ಆರ್ ಬಿಐ ಆನ್ ಲೈನ್ ವ್ಯಾಪಾರಿಗಳು ಹಾಗೂ ಗೇಟ್ ವೇಗಳು ಜನವರಿ 1ರಿಂದ ಕಾರ್ಡ್ ಮಾಹಿತಿಗಳನ್ನು ಸೇವ್ ಮಾಡದಂತೆ ಸೆಪ್ಟೆಂಬರ್ ನಲ್ಲಿ ನೋಟಿಸ್ ಮೂಲಕ ಆದೇಶಿಸಿದೆ. ಹೀಗಾಗಿ ಹೊಸ ವರ್ಷದಿಂದ ಆನ್ ಲೈನ್ ವ್ಯಾಪಾರಿಗಳು ಗ್ರಾಹಕರ ಕಾರ್ಡ್ ಮಾಹಿತಿ ಸಂಗ್ರಹಿಸುವಂತಿಲ್ಲ.ಇದರ ಬದಲು ಟೋಕನೈಸೇಷನ್ ವ್ಯವಸ್ಥೆ ಅಳವಡಿಸಿಕೊಳ್ಳಬಹುದು ಇಲ್ಲವೇ ಗ್ರಾಹಕರು ಪ್ರತಿ ಬಾರಿ ವ್ಯವಹಾರ ನಡೆಸೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸುವಂತೆ ಸೂಚಿಸಬಹುದು. 

Tap to resize

Latest Videos

undefined

New Labour Codes: ಮುಂದಿನ ವರ್ಷ ವಾರದಲ್ಲಿ ನಾಲ್ಕೇ ದಿನ ಕೆಲಸ? ಹೊಸ ಕಾರ್ಮಿಕ ನೀತಿ ಸಂಹಿತೆ ಜಾರಿಗೆ ಕೇಂದ್ರ ಚಿಂತನೆ

ಏನಿದು ಟೋಕನೈಸೇಷನ್ ?
ಕ್ರೆಡಿಟ್(Credit) ಅಥವಾ ಡೆಬಿಟ್(Debit) ಕಾರ್ಡ್ ಮಾಹಿತಿಗಳನ್ನು ಟೋಕನ್(Token) ಎಂಬ ಪರ್ಯಾಯ ಕೋಡ್ ಗೆ ಬದಲಾಯಿಸೋ ಪ್ರಕ್ರಿಯೆಯನ್ನು ಟೋಕನೈಸೇಷನ್ ಎಂದು ಕರೆಯಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಕಾರ್ಡ್ ಮಾಹಿತಿಗಳನ್ನು 'ಟೋಕನ್' ಎಂಬ ವಿಶಿಷ್ಟ ಪರ್ಯಾಯ ಕೋಡ್ ಗೆ ಬದಲಾಯಿಸಲಾಗುತ್ತದೆ. ಪ್ರತಿ ಕಾರ್ಡ್, ಸಾಧನ ಹಾಗೂ ಟೋಕನ್ ಮನವಿದಾರರನ್ನು ಪರಿಗಣಿಸಿ  ಹೊಸ ಟೋಕನ್ ನೀಡಲಾಗುತ್ತದೆ. ಈ ಟೋಕನ್ ವ್ಯವಸ್ಥೆಯಿಂದಾಗಿ ಗ್ರಾಹಕರ ಕಾರ್ಡ್ ಮಾಹಿತಿಗಳು ಸುರಕ್ಷಿತವಾಗಿರುತ್ತವೆ. ಅಲ್ಲದೆ, ಬಳಕೆದಾರರ ಖಾತೆಯ ಸಂಪೂರ್ಣ ಮಾಹಿತಿ ವ್ಯಾಪಾರಿಗೆ ತಿಳಿಯೋದಿಲ್ಲ.  

Card Stuck in ATM : ಎಟಿಎಂ ಯಂತ್ರದಲ್ಲಿ ಕಾರ್ಡ್ ಸಿಕ್ಕಿಬಿದ್ರೆ ಚಿಂತೆ ಬೇಡ,ಹೀಗೆ ಮಾಡಿ!

ಟೋಕನೈಸೇಷನ್ ಹೇಗೆ ಕಾರ್ಯನಿರ್ವಹಿಸುತ್ತದೆ?
-ನೀವು ಆನ್ ಲೈನ್ ವ್ಯಾಪಾರ ತಾಣದಲ್ಲಿ ಖರೀದಿ ಪ್ರಾರಂಭಿಸಿದ ತಕ್ಷಣ ವ್ಯಾಪಾರಿ ಟೋಕನೈಸೇಷನ್ ಪ್ರಕ್ರಿಯೆಗೆ ಚಾಲನೆ ನೀಡುತ್ತಾನೆ. ನಿಮ್ಮ ಡೆಬಿಟ್ /ಕ್ರೆಡಿಟ್ ಕಾರ್ಡ್ ಟೋಕನೈಸೇಷನ್ ಮಾಡಲು ಅನುಮತಿ ಕೇಳುತ್ತಾನೆ. 
-ಗ್ರಾಹಕ ಅನುಮತಿ ನೀಡಿದ ತಕ್ಷಣ ವ್ಯಾಪಾರಿ ಕಾರ್ಡ್ ನೆಟ್ ವರ್ಕ್ ಗೆ ಟೋಕನೈಸೇಷನ್ ಮನವಿ ಕಳುಹಿಸುತ್ತಾನೆ.
-ಕಾರ್ಡ್ ನೆಟ್ ವರ್ಕ್ ತಕ್ಷಣ ಆ ನಿರ್ದಿಷ್ಟ ಕಾರ್ಡ್ಗೆ ಸಂಬಂಧಿಸಿ 16 ಅಂಕೆಗಳ ಟೋಕನ್ ಸೃಷ್ಟಿಸಿ  ವ್ಯಾಪಾರಿಗೆ ಕಳುಹಿಸುತ್ತದೆ.
-ವ್ಯಾಪಾರಿಯು ಭವಿಷ್ಯದ ವಹಿವಾಟುಗಳಿಗಾಗಿ ಈ ಟೋಕನ್ ಸೇವ್ ಮಾಡಿಟ್ಟುಕೊಳ್ಳುತ್ತಾನೆ.
-ವಹಿವಾಟು ನಡೆಸಲು ಗ್ರಾಹಕರು ಒಟಿಪಿ(OPT) ಹಾಗೂ ಸಿವಿವಿ( CVV) ಸಂಖ್ಯೆ ಮೂಲಕ ಅನುಮತಿ ನೀಡೋದು ಅಗತ್ಯ.
-ಬೇರೆ ವ್ಯಾಪಾರಿಗಳಿಗೆ ಅಥವಾ ಬೇರೆ ಕಾರ್ಡ್ ಮೂಲಕ ಶಾಪಿಂಗ್ ಮಾಡಿದ್ರೆ ಗ್ರಾಹಕರು ಆನ್ ಲೈನ್ ಪಾವತಿ ಮಾಡಲು ಈ ಎಲ್ಲ ನಿಯಮಗಳನ್ನು ಇನ್ನೊಮ್ಮೆ ಪಾಲಿಸೋದು ಅಗತ್ಯ. 

click me!