10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 7 ಲಕ್ಷ ರೂ. ಇರ್ತಿತ್ತು!

Published : Jul 30, 2023, 08:41 PM IST
10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 7 ಲಕ್ಷ ರೂ. ಇರ್ತಿತ್ತು!

ಸಾರಾಂಶ

Multibagger Tracker ಹೂಡಿಕೆದಾರರು ಕಳೆದ 10 ವರ್ಷಗಳ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ದರೆ, ಈ ವೇಳೆಗೆ ಆ ಹೂಡಿಕೆಯ ಮೌಲ್ಯ ಸುಮಾರು 7 ಲಕ್ಷ ರೂ. ಗಳಾಗುತ್ತಿತ್ತು ಎಂದು ವಿಶ್ಲೇಷಣೆ ಮಾಡಲಾಗಿದೆ.

ನವದೆಹಲಿ (ಜುಲೈ 30, 2023): ಹಣ ಮಾಡಲು ನಾನಾ ಮಾರ್ಗಗಳಿರುತ್ತದೆ. ಈ ಪೈಕಿ ಷೇರು ಮಾರುಕಟ್ಟೆಯೂ ಒಂದು. ಕೆಲವು ಸಣ್ಣ ಸಣ್ಣ ಕಂಪನಿಗಳೂ ಸಹ ಹೆಚ್ಚು ಲಾಭ ತಂದುಕೊಡಬಹುದು. ಸದ್ಯ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಅಬ್ಬರ ಹೆಚ್ಚಾಗಿದ್ದು, ಬಹುತೇಕ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಗಿದೆ. ಇದರಿಂದ ಹೂಡಿಕೆದಾರರಿಗೆ ಭರ್ಜರಿ ಲಾಭ ಆಗುತ್ತಿದೆ. ಆದರೆ, ಸಾವಿರ ರೂ. ಮೊತ್ತದ ಹೂಡಿಕೆ ಮಾಡಿ ಲಕ್ಷಾಂತರ ರೂ. ಲಾಭ ಮಾಡಲು ಸಹ ಇಲ್ಲಿ ಸಾಧ್ಯವಿದೆ. ಅದ್ಹೇಗೆ ಅಂತೀರಾ..? 

‘ಭಾರತ್ ರಸಾಯನ್’ ಎಂಬ ಕಂಪನಿಯ ಷೇರುಗಳು ಕಳೆದ ದಶಕದಲ್ಲಿ ಹೂಡಿಕೆದಾರರಿಗೆ ಬಂಪರ್ ರಿಟರ್ನ್ಸ್ ನೀಡಿದ್ದು, 6,600% ರಷ್ಟು ಏರಿಕೆಯಾಗಿದೆ. ಈ ಹಿನ್ನೆಲೆ ಹೂಡಿಕೆದಾರರು 10 ವರ್ಷಗಳ ಹಿಂದೆ 10,000 ರೂ. ಗಳನ್ನು ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ್ದರೆ ಮತ್ತು ಆ ಹಣ ಹೂಡಿಕೆಯಲ್ಲಿಯೇ ಉಳಿದಿದ್ದರೆ, ಈ ಹೂಡಿಕೆಯು ಸುಮಾರು 7 ಲಕ್ಷ ರೂ. ಆಗುತ್ತಿತ್ತು ಎಂದು ವಿಶ್ಲೇಷಿಸಲಾಗಿದೆ. ಕಳೆದ 3 ವರ್ಷಗಳಲ್ಲಿ, ಈ ಷೇರಿನ ಮೌಲ್ಯ 53% ಏರಿಕೆಯಾಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ 103% ನಷ್ಟು ಆದಾಯ ನೀಡಿದೆ.

ಇದನ್ನು ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 4 ಲಕ್ಷ ರೂ. ಇರ್ತಿತ್ತು!

‘ಭಾರತ್ ರಸಾಯನ್’ ಸುಮಾರು 3,798 ಕೋಟಿ ರೂಪಾಯಿಗಳ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಸ್ಮಾಲ್‌ ಕ್ಯಾಪ್ ಕಂಪನಿಯಾಗಿದ್ದು, R&D ಚಾಲಿತ ರಾಸಾಯನಿಕ ಉತ್ಪಾದನಾ ಕಂಪನಿಯಾಗಿದೆ. ಇದು fatty acid anhydrides, grignard reagents, pharma intermediates, esters and solvents ಉತ್ಪಾದನೆಯಲ್ಲಿ ನಿಯಮಿತವಾಗಿ ತೊಡಗಿಸಿಕೊಂಡಿದೆ. ಹಾಗೂ, ಈ ಕಂಪನಿಯು ವೈಯಕ್ತಿಕ ಆರೈಕೆ (ಚರ್ಮ, ಕೂದಲು ಮತ್ತು ಬ್ಯಾಕ್ಟೀರಿಯಾ ವಿರೋಧಿ) ಸಂರಕ್ಷಕಗಳಲ್ಲಿ ಪ್ರಾಥಮಿಕ ಗಮನವನ್ನು ಹೊಂದಿರುವ ಕಾಸ್ಮೆಟಿಕ್ ಪದಾರ್ಥಗಳ ಅತಿದೊಡ್ಡ ತಯಾರಕರಲ್ಲಿಯೂ ಒಂದಾಗಿದೆ.

ಈ ಮಧ್ಯೆ, ವಿನಿಮಯ ಕೇಂದ್ರಗಳಲ್ಲಿ ಲಭ್ಯವಿರುವ ಇತ್ತೀಚಿನ ಷೇರುದಾರರ ಮಾದರಿಯ ಪ್ರಕಾರ, ಪ್ರಮೋಟರ್‌ಗಳು ಈ ಕಂಪನಿಯ 74.79% ರಷ್ಟು ಪಾಲನ್ನು ಹೊಂದಿದ್ದರೆ, ಉಳಿದ 25.21% ಪಾಲು ಸಾರ್ವಜನಿಕ ಷೇರುದಾರರ ಬಳಿ ಇರುತ್ತದೆ. ಸಾರ್ವಜನಿಕ ಷೇರುದಾರರಲ್ಲಿ, ಮ್ಯೂಚುವಲ್ ಫಂಡ್‌ಗಳು ಕಂಪನಿಯಲ್ಲಿ ಯಾವುದೇ ಪಾಲನ್ನು ಹೊಂದಿಲ್ಲ, ಆದರೆ ಚಿಲ್ಲರೆ ಹೂಡಿಕೆದಾರರು ಕಂಪನಿಯಲ್ಲಿ 12.20% ನಷ್ಟು ಸಂಯೋಜಿತ ಹಿಡುವಳಿ ಹೊಂದಿದ್ದಾರೆ.

ಇದನ್ನೂ ಓದಿ: ನೀವು ಈ ಸ್ಟಾಕ್‌ನಲ್ಲಿ 10 ವರ್ಷದ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 10 ಲಕ್ಷ ರೂ. ಇರ್ತಿತ್ತು!

ಮಾರ್ಚ್ ಅಂತ್ಯದ ತ್ರೈಮಾಸಿಕದಲ್ಲಿ, ಭಾರತ್ ರಸಾಯನ್ 305.8 ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದೂ ತಿಳಿದುಬಂದಿದೆ. ಇತರೆ ಸ್ಮಾಲ್‌ಕ್ಯಾಪ್‌ ಕಂಪನಿಗಳಿಗೆ ಹೋಲಿಸಿದರೆ ಭಾರತ್ ರಸಾಯನ್ ಕಂಪನಿ ಡಿಸ್ಕೌಂಟ್‌ನಲ್ಲಿ ಟ್ರೇಡಿಂಗ್‌ ಮಾಡುತ್ತಿದೆ ಎಂದೂ ವಿಶ್ಲೇಷಕರು ಹೇಳುತ್ತಾರೆ.

ಇದನ್ನೂ ಓದಿ: ಇನ್ಫೋಸಿಸ್‌ನ 1 ಲಕ್ಷ ರೂ. ಬೆಲೆಯ ಈ ಷೇರಿನ ಮೌಲ್ಯ ಈಗ 9.58 ಕೋಟಿ.!

ಇದನ್ನೂ ಓದಿ: 10 ವರ್ಷದ ಹಿಂದೆ ಟಾಟಾ ಸಮೂಹದ ಈ ಷೇರಿನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ಇರುತ್ತಿತ್ತು!

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?