ಉದ್ಯಮಿ ಗೌತಮ್ ಸಿಂಘಾನಿಯಾ ಬಳಿ ಇದೆ ಭಾರತದ 2ನೇ ಅತ್ಯಂತ ದುಬಾರಿ ಮನೆ, ಇದರ ಬೆಲೆ ಏಷ್ಟು?

Published : Jul 30, 2023, 06:32 PM IST
ಉದ್ಯಮಿ ಗೌತಮ್ ಸಿಂಘಾನಿಯಾ ಬಳಿ ಇದೆ ಭಾರತದ 2ನೇ ಅತ್ಯಂತ ದುಬಾರಿ ಮನೆ, ಇದರ ಬೆಲೆ ಏಷ್ಟು?

ಸಾರಾಂಶ

ಮುಕೇಶ್ ಅಂಬಾನಿ, ಗೌತಮ್ ಆದಾನಿ, ರತನ್ ಟಾಟಾ ಸೇರಿದಂತೆ ಹಲವು ಶ್ರೀಮಂತ ಉದ್ಯಮಿಗಳ ಬಳಿ ಕೋಟಿ ಕೋಟಿ ರೂಪಾಯಿ ಆಸ್ತಿ, ಮನೆ, ಕಾರುಗಳಿವೆ. ಭಾರತದಲ್ಲಿ ಅತ್ಯಂತ ದುಬಾರಿ ಮನೆ ಹೊಂದಿದೆ ಖ್ಯಾತಿ ಮುಕೇಶ್ ಅಂಬಾನಿ ಪಾಲಾಗಿದೆ. 2ನೇ ಅತ್ಯಂತ ದುಬಾರಿ ಮನೆ ಹೊಂದಿದ ಖ್ಯಾತಿ ಉದ್ಯಮಿ ಗೌತಮ್ ಸಿಂಘಾನಿಯಾಗೆ ಸಲ್ಲಲಿದೆ. ಸಿಂಘಾನಿಯ ಮನೆ ಬೆಲೆ ಏಷ್ಟು ಗೊತ್ತಾ?

ಮುಂಬೈ(ಜು.30) ಶ್ರೀಮಂತ ಉದ್ಯಮಿಗಳು, ಸೆಲೆಬ್ರೆಟಿಗಳ ಬಳಿಕ ಸಾವಿರಾರು ಕೋಟಿ ರೂಪಾಯಿ ಮನೆ, ಐಷಾರಾಮಿ ಕಾರು,  ಆಸ್ತಿ, ಒಡವೆ ಸೇರಿದಂತೆ ಎಲ್ಲವೂ ಕೋಟಿ ಲೆಕ್ಕದಲ್ಲೇ ಇದೆ. ಭಾರತದ ಹಲವು ಉದ್ಯಮಿಗಳು ವಿದೇಶದಲ್ಲೂ ವ್ಯವಹಾರ ನಡೆಸುತ್ತಿದ್ದಾರೆ. ಜೊತೆಗೆ ವಿದೇಶದಲ್ಲೂ ಆಸ್ತಿ ಸಂಪಾದಿಸಿದ್ದಾರೆ. ಭಾರತದಲ್ಲಿ ಅತ್ಯಂತ ದುಬಾರಿ ಮನೆ ಹೊಂದಿರುವ ಖ್ಯಾತಿ ಉದ್ಯಮಿ ಮುಕೇಶ್ ಅಂಬಾನಿ ಪಾಲಿಗಿದೆ. ಇನ್ನು ಭಾರತದ 2ನೇ ಅತ್ಯಂತ ದುಬಾರಿ ಮನೆ ಹೊಂದಿರುವ ಖ್ಯಾತಿ ಉದ್ಯಮಿ ಗೌತಮಿ ಸಿಂಘಾನಿಯಾಗೆ ಸಲ್ಲಲಿದೆ. ರೇಮಂಡ್ ಗ್ರೂಪ್‌ನ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಗೌತಮ್ ಸಿಂಘಾನಿಯಾ ಐಷಾರಾಮಿ ಮನೆ ಹೊಂದಿದ್ದಾರೆ. ಇದರ ಬೆಲೆ ಬರೋಬ್ಬರಿ 6,000 ಕೋಟಿ ರೂಪಾಯಿ.

ಮುಂಬೈನಲ್ಲಿರುವ ಜೆಕೆ ಹೌಸ್ ಉದ್ಯಮಿ ಗೌತಮ್ ಸಿಂಘಾನಿಯಾರ ಮನೆ. ಇದು 30 ಮಹಡಿ ಹೊಂದಿದೆ. 16,000 ಚದರ ಅಡಿ ವಿಸ್ತೀರ್ಣದ ಈ ಮನೆಯ ಬೆಲೆ 6,000 ಕೋಟಿ ರೂಪಾಯಿ. ಎರಡು ಸ್ವಿಮ್ಮಿಂಗ್ ಪೂಲ್, ಸ್ಪಾ, ಹೆಲಿಪ್ಯಾಡ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳನ್ನು ಹೊಂದಿದೆ. ಇದು ಭಾರತದ ಅತ್ಯಂತ ದುಬಾರಿ ಮನೆಗಳಲ್ಲಿ 2ನೇ ಸ್ಥಾನ ಪಡೆದಿದೆ.

ನವೀಕರಣಗೊಂಡ ಐಕಾನಿಕ್ ಆಡಿ 100 ಕಾರು, ರೇಮಂಡ್ ಮಾಲೀಕರಿಗೆ ಥ್ಯಾಂಕ್ಸ್ ಎಂದ ರವಿಶಾಸ್ತ್ರಿ! 

ಮೊದಲ ಸ್ಥಾನದಲ್ಲಿರುವ ಉದ್ಯಮಿ ಮುಕೇಶ್ ಅಂಬಾನಿಯ ಆ್ಯಂಟಿಲಿಯಾ ಮನೆ ವಿಶ್ವದಲ್ಲೇ ಭಾರಿ ಪ್ರಸಿದ್ದಿ ಪಡೆದಿದೆ.  ಇದರ ಬೆಲೆ ಬರೋಬ್ಬರಿ 15,000 ಕೋಟಿ ರೂಪಾಯಿ. ಅಂಬಾನಿ ಮನೆಯನ್ನು ಮೀರಿಸುವ ಮನೆ ಸದ್ಯಕ್ಕೆ ಭಾರತದಲ್ಲಿ ಇಲ್ಲ. ಇದು ಬೆಲೆಯಲ್ಲಿ ಮಾತ್ರವಲ್ಲ, ಈ ಮನೆಯಲ್ಲಿರುವ ಐಷಾರಾಮಿ ಸೌಲಭ್ಯದಲ್ಲೂ ಇತರ ಎಲ್ಲಾ ಬಂಗಲೆಗಳಿಗಿಂತ ಅಂಬಾನಿ ಮನೆಗೆ ಮೊದಲ ಸ್ಥಾನ.

ಗೌತಮ್ ಸಿಂಘಾನಿಯಾ ಬಳಿ ಐಷರಾಮಿ ಕಾರುಗಳಿವೆ. ಲ್ಯಾಂಬೋರ್ಗಿನಿ ಗಲ್ಲಾರ್ಡೋ LP570 , ಲೋಟಸ್ ಎಲೈಸ್ ಕರ್ನ್ವರ್ಟೇಬಲ್, ನಿಸಾನ್ ಸ್ಕೈಲೈನ್ GTR, ಹೋಂಡಾ  S2000, ಫೆರಾರಿ 458 ಇಟಾಲಿಯಾ, ಆಡಿ  Q7 ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ. ಇನ್ನು ಎರಡು ಹೆಲಿಕಾಪ್ಟರ್ ಕೂಡ ಇದೆ. ಜೊತೆಗೆ ಬೊಂಬಾರ್ಡಿಯರ್ ಚಾಲೆಂಜರ್ 600 ಅನ್ನೋ ಪ್ರೈವೇಟ್ ಜೆಟ್ ಹೊಂದಿದ್ದಾರೆ. ಇದರ ಬೆಲೆ 150 ಕೋಟಿ ರೂಪಾಯಿ. ಯಾಚ್, ಟೀಕ್ ಬೋಟ್ ಸೇರಿದಂತೆ ಐಷಾರಾಮಿ ಬೋಟ್‌ಗಳನ್ನು ಹೊಂದಿದ್ದಾರೆ.

ಪುತ್ರನಿಂದಲೇ ರೇಮಂಡ್‌ ಕಂಪನಿ ಒಡೆಯ ವಜಾ

57ರ ಹರೆಯದ ಗೌತಮ್ ಸಿಂಘಾನಿಯಾ ಮಾಲೀಕತ್ವಜ ರೇಮಂಡ್ ಕಂಪನಿ ವಿಶ್ವದ ಅತೀ ದೊಡ್ಡ ಫ್ಯಾಬ್ರಿಕ್ ಕಂಪನಿಯಾಗಿದೆ. ದೇಶ ವಿದೇಶಗಳಿಗೆ ರಫ್ತು ಮಾಡುತ್ತಿದೆ. 1986ರಲ್ಲಿ ಜೆಕೆ ಗ್ರೂಪ್ ಕಂಪನಿ ಸೇರಿಕೊಂಡ ಗೌತಮ್ ಸಿಂಘಾನಿಯಾ ಹಂತ ಹಂತವಾಗಿ ಕಂಪನಿಯ ಎಳಿಗೆಯಲ್ಲಿ ಶ್ರಮಿಸಿದ್ದಾರೆ. ಕುಟುಂಬ ರೇಮಂಡ್ ವ್ಯವಹಾರದಲ್ಲಿ ಗೌತಮ್ ಸಿಂಘಾನಿಯಾ ಇದೀಗ ಭಾರತ ಹಾಗೂ ವಿದೇಶದಲ್ಲಿ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್
ಸ್ಟಾರ್‌ಲಿಂಕ್‌ ಇಂಟರ್ನೆಂಟ್‌ ವೆಬ್‌ಸೈಟ್‌ ಆರಂಭ, 30 ದಿನದ ಫ್ರೀ ಟ್ರಯಲ್‌ ಜೊತೆ ರಿಚಾರ್ಜ್‌ ಘೋಷಿಸಿದ ಮಸ್ಕ್‌ ಕಂಪನಿ!