ಬರಲಿದೆ ಪ್ರಯಾಣಿಕರು, ಸರಕು ಒಟ್ಟಿಗೆ ಹೊತ್ತೊಯ್ಯುವ ಟ್ರೈನ್‌: ಡಬ್ಬಲ್‌ ಡೆಕ್ಕರ್‌ ರೈಲು ಸೇವೆ ಶೀಘ್ರದಲ್ಲೇ ಆರಂಭ

Published : Jul 30, 2023, 03:51 PM IST
ಬರಲಿದೆ ಪ್ರಯಾಣಿಕರು, ಸರಕು ಒಟ್ಟಿಗೆ ಹೊತ್ತೊಯ್ಯುವ ಟ್ರೈನ್‌: ಡಬ್ಬಲ್‌ ಡೆಕ್ಕರ್‌ ರೈಲು ಸೇವೆ ಶೀಘ್ರದಲ್ಲೇ ಆರಂಭ

ಸಾರಾಂಶ

ಈ ಡಬ್ಬಲ್‌ ಡೆಕ್ಕರ್‌ ಬೋಗಿಗಳಲ್ಲಿ ಮೇಲ್ಭಾಗದಲ್ಲಿ ಪ್ರಯಾಣಿಕರಿಗೆ ಕೂರಲು ಸೀಟ್‌ಗಳ ವ್ಯವಸ್ಥೆ ಇರಲಿದ್ದು, ಕೆಳಭಾಗದಲ್ಲಿ ಸರಕುಗಳನ್ನು ತುಂಬಲು ಅವಕಾಶ ಇರಲಿದೆ. ರೈಲ್ವೆ ಆದಾಯಕ್ಕೆ ಪ್ರಮುಖ ಕೊಡುಗೆ ನೀಡುವ ಸರಕು ಸಾಗಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಲು ಈ ಬೋಗಿಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂದು ರೈಲ್ವೆ ಹೇಳಿದೆ.

ಚಂಡೀಗಢ (ಜುಲೈ 30, 2023): ಪ್ರಯಾಣಿಕರು ಮತ್ತು ಸರಕು ಎರಡನ್ನೂ ಒಟ್ಟಿಗೆ ಹೊತ್ತೊಯ್ಯುವಂತಹ ಡಬ್ಬಲ್‌ ಡೆಕ್ಕರ್‌ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗಲಿದೆ. ರೈಲು ಬೋಗಿಗಳ ಪ್ರಧಾನ ಉತ್ಪಾದನಾ ಕಾರ್ಖಾನೆ ಕಪೂರ್ತಲಾದಲ್ಲಿ ಈಗಾಗಲೇ ಇಂತಹ ಬೋಗಿಗಳಿಗೆ ಅಂತಿಮ ರೂಪ ನೀಡಲಾಗುತ್ತಿದೆ.

ಈ ಡಬ್ಬಲ್‌ ಡೆಕ್ಕರ್‌ ಬೋಗಿಗಳಲ್ಲಿ ಮೇಲ್ಭಾಗದಲ್ಲಿ ಪ್ರಯಾಣಿಕರಿಗೆ ಕೂರಲು ಸೀಟ್‌ಗಳ ವ್ಯವಸ್ಥೆ ಇರಲಿದ್ದು, ಕೆಳಭಾಗದಲ್ಲಿ ಸರಕುಗಳನ್ನು ತುಂಬಲು ಅವಕಾಶ ಇರಲಿದೆ. ರೈಲ್ವೆ ಆದಾಯಕ್ಕೆ ಪ್ರಮುಖ ಕೊಡುಗೆ ನೀಡುವ ಸರಕು ಸಾಗಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಲು ಈ ಬೋಗಿಗಳು ಉತ್ತಮ ಅವಕಾಶವನ್ನು ಒದಗಿಸುತ್ತವೆ ಎಂದು ರೈಲ್ವೆ ಹೇಳಿದೆ. ಮುಂದಿನ ತಿಂಗಳು ಈ ಬೋಗಿ ಕಾರ್ಯಾರಂಭ ಮಾಡಲಿದ್ದು, ಮೇಲ್ಭಾಗದಲ್ಲಿ ಪ್ರಯಾಣಿಕರು ಹಾಗೂ ಕೆಳಭಾಗದಲ್ಲಿ ಸರಕು ಇಡಲು ವ್ಯವಸ್ಥೆ ಮಾಡಲಾಗಿದೆ.

ಇದನ್ನು ಓದಿ: IRCTC ವೆಬ್‌ಸೈಟ್‌ ಡೌನ್‌: ರೈಲ್ವೆ ಟಿಕೆಟ್ ಬುಕ್‌ ಮಾಡಲು ಜನಸಾಮಾನ್ಯರ ಪರದಾಟ; ನೆಟ್ಟಿಗರ ಆಕ್ರೋಶ

ನಿರ್ಮಾಣವಾದ ಬಳಿಕ ಪ್ರಾಯೋಗಿಕ ಓಡಾಟ ನಡೆಸಿ ಬಳಿಕ, ನಿಯಮಿತವಾಗಿ ಬಳಕೆ ಮಾಡಲಾಗುತ್ತದೆ ಎಂದು ಕಪೂರ್ತಲಾ ರೈಲ್ವೇ ಬೋಗಿ ಕಾರ್ಖಾನೆಯ ಜನರಲ್‌ ಮ್ಯಾನೇಜರ್‌ ಆಶೇಶ್‌ ಅಗರವಾಲ್‌ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸರಕು ಸಾಗಣೆಗೆ ರೈಲ್ವೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. 2022-23ನೇ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆಯ ಮೂಲಕ ರೈಲ್ವೆ 1.62 ಲಕ್ಷ ಕೋಟಿ ರೂ. ಆದಾಯ ಗಳಿಸಿದೆ.

ಇದನ್ನೂ ಓದಿ: ಸಾವನ್‌ ಮಾಸದಲ್ಲಿ ಹಲಾಲ್‌ ಚಹಾ ಕೊಡ್ತೀರಾ: ರೈಲ್ವೆ ಸಿಬ್ಬಂದಿ ಮೇಲೆ ಪ್ರಯಾಣಿಕರ ಆಕ್ರೋಶ! ಏನಿದು ‘ಹಲಾಲ್‌ ಟೀ’’ ವಿವಾದ?

ಇದನ್ನೂ ಓದಿ: ಬೆಂಗಳೂರಿನ ದೊಮ್ಲೂರಿನಲ್ಲಿ ನೂತನ ಘಟಕ ಆರಂಭಿಸಿದ ಹಿಟಾಚಿ ರೈಲ್ ಎಸ್‌ಟಿಎಸ್ ಇಂಡಿಯಾ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!