ಫೋರ್ಬ್ಸ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಸಿರಿವಂತ ಉದ್ಯಮಿಗಳಾದ ಮುಖೇಶ್ ಅಂಬಾನಿ, ಗೌತಮ್ ಅದಾನಿ ಸೇರಿದಂತೆ ಇನ್ನೂಅನೇಕ ಉದ್ಯಮಿಗಳ ಹೆಸರಿರುತ್ತದೆ. ಆದರೆ, ಈ ಪಟ್ಟಿಯಲ್ಲಿ ರತನ್ ಟಾಟಾ ಅವರ ಹೆಸರು ಏಕಿಲ್ಲ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತಿರಬಹುದು. ಅದಕ್ಕೆ ಉತ್ತರ ಇಲ್ಲಿದೆ.
Business Desk: ಫೋರ್ಬ್ಸ್ ಪ್ರಕಾರ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಯಾರು? ಇದಕ್ಕೆ ಉತ್ತರ ಎಲಾನ್ ಮಸ್ಕ್ ಅನ್ನೋದು ಎಲ್ಲರಿಗೂ ಗೊತ್ತು. 268 ಬಿಲಿಯನ್ ಡಾಲರ್ ನಿವ್ವಳ ಸಂಪತ್ತು ಹೊಂದಿರುವ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿ. ಆದರೆ, ಫೋರ್ಬ್ಸ್ ಈ ಪಟ್ಟಿ ಸರಿಯಿದೆಯಾ? ಈ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಏಕೆಂದರೆ ರತನ್ ಟಾಟಾ ಬಗ್ಗೆ ಓದಿದ ಬಳಿಕ ಈ ಕುರಿತ ನಿಮ್ಮ ಅಭಿಪ್ರಾಯ ಸಂಪೂರ್ಣವಾಗಿ ಬದಲಾಗಲಿದೆ. ರತನ್ ಟಾಟಾ ಭಾರತದ ಜನಪ್ರಿಯ ಉದ್ಯಮಿಯಷ್ಟೇ ಅಲ್ಲ, ಒಬ್ಬ ದೊಡ್ಡ ಮಾನವತಾವಧಿ ಕೂಡ ಹೌದು. ಜನಪ್ರಿಯತೆ ಅಥವಾ ಯಶಸ್ಸು ಎಂದೂ ಅವರನ್ನು ಬದಲಾಯಿಸಿಲ್ಲ. ಹೀಗಾಗಿ ರತನ್ ಟಾಟಾ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸದೆ ಇರಬಹುದು, ಆದರೆ, ಅವರು ಹೃದಯವಂತಿಕೆಯಲ್ಲಿ ಖಂಡಿತಾ ವಿಶ್ವದ ನಂ.1 ಉದ್ಯಮಿ ಎಂದರೆ ತಪ್ಪಿಲ್ಲ. ಈ ದೇಶಕ್ಕೆ ಅವರು ನೀಡಿರುವ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಅಲ್ಲದೆ, ಫೋರ್ಬ್ಸ್ ಪಟ್ಟಿಯಲ್ಲಿದ್ದ ಮಾತ್ರಕ್ಕೆ ಒಬ್ಬರು ಶ್ರೀಮಂತರಾಗೋದಿಲ್ಲ. ಬದಲಿಗೆ ಸಮಾಜಕ್ಕೆ ಹಿಂತಿರುಗಿ ಏನು ನೀಡಿದ್ದಾರೆ ಅನ್ನೋದು ಮುಖ್ಯವಾಗುತ್ತದೆ ಎಂಬುದನ್ನು ತೋರಿಸಿದ್ದಾರೆ.
82 ವರ್ಷದ ರತನ್ ಟಾಟಾ ನಮಗೆ ಅನೇಕ ಜೀವನಪಾಠಗಳನ್ನು ಕಲಿಸಿದ್ದಾರೆ. ಇದು ನಮಗೆ ಉತ್ತಮ ಮನುಷ್ಯರಿಗೆ ಬಾಳಲು ನೆರವು ನೀಡುತ್ತದೆ. ಇದೇ ಕಾರಣಕ್ಕೆ ಭಾರತದಲ್ಲಿ ರತನ್ ಟಾಟಾ ಅವರ ಹೆಸರು ಕೇಳದ ವ್ಯಕ್ತಿ ಅಥವಾ ಅವರಿಂದ ಪ್ರೇರಣೆ ಪಡೆಯದವರು ಯಾರೂ ಇಲ್ಲ.
ಯಾರೀಕೆ ಮಾಯಾ ಟಾಟಾ? ರತನ್ ಟಾಟಾ ಉತ್ತರಾಧಿಕಾರಿ ಇವರೇನಾ?
ವಿವಿಧ ಸಮೀಕ್ಷೆಗಳಲ್ಲೇಕೆ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿ ರತನ್ ಟಾಟಾ ಇಲ್ಲ
ಐಐಎಫ್ ಎಲ್ ವೆಲ್ತ್, ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2021ರ ಅನ್ವಯ ಭಾರತದ ಅತೀದೊಡ್ಡ ಕೈಗಾರಿಕೋದ್ಯಮಿ ಹಾಗೂ ಸಮಾಜಸೇವಕ ರತನ್ ಟಾಟಾ ಅವರಿಗಿಂತ ಹೆಚ್ಚು ಶ್ರೀಮಂತರಾಗಿರುವ 432 ಭಾರತೀಯರು ಇದ್ದಾರೆ. ಆರು ದಶಕಗಳ ಕಾಲ ಭಾರತದ ಅತಿದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸಿದ ರತನ್ ಟಾಟಾ, ಭಾರತದ ಟಾಪ್ 10 ಅಥವಾ 20 ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರಬಹುದು ಎಂದು ಊಹಿಸೋದರಲ್ಲಿ ತಪ್ಪಿಲ್ಲ. ಆದರೆ, ವಾಸ್ತವದಲ್ಲಿ ಹಾಗಿಲ್ಲ. ಇದಕ್ಕೆ ಕಾರಣ ರತನ್ ಟಾಟಾ ಅವರು ತಮ್ಮ ಟಾಟಾ ಟ್ರಸ್ಟ್ ಮೂಲಕ ನಡೆಸುತ್ತಿರುವ ಸಾಮಾಜಮುಖಿ ಕೆಲಸಗಳು.
2021ನೇ ಸಾಲಿನಲ್ಲಿ ಅಂದಾಜು 103 ಬಿಲಿಯನ್ ಅಮೆರಿಕನ್ ಡಾಲರ್ ಆದಾಯ ಹೊಂದಿರುವ ಟಾಟಾ ಗ್ರೂಪ್ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನ ಅತೀದೊಡ್ಡ ಸಂಸ್ಥೆಗಳಲ್ಲಿ ಒಂದಾಗಿದೆ.
ಕುಟುಂಬ ಹಾಗೂ ಕಂಪನಿಯ ಶೇ.66ರಷ್ಟು ಸಂಪತ್ತು ದಾನ
ಟಾಟಾ ಸನ್ಸ್ ಶೇ.66ರಷ್ಟು ಈಕ್ವಿಟಿಯನ್ನು ಟಾಟಾ ಟ್ರಸ್ಟ್ ಹೊಂದಿದೆ. ಹಾಗೂ ಡೆವಿಡೆಂಡ್ಸ್ ಟ್ರಸ್ಟ್ ನ ಸಮಾಜಮುಖಿ ಕೆಲಸಗಳಿಗೆ ಬೆಂಬಲ ನೀಡಲು ಬಳಸಲಾಗುತ್ತದೆ. ಕಳೆದ ಒಂದೂವರೆ ದಶಕಗಳಲ್ಲಿ ಟಾಟಾ ಗ್ರೂಪ್ ಭಾರತದ ಅತ್ಯಂತ ತುರ್ತು ಅಗತ್ಯಗಳನ್ನು ಈಡೇರಿಸಲು ಪ್ರಯತ್ನಿಸಿದೆ. ಈ ಸಮಾಜಮುಖಿ ಕೆಲಸಗಳ ಕಾರಣದಿಂದ ಕಂಪನಿಯ ಯಾವುದೇ ಲಾಭ ರತನ್ ಟಾಟಾ ಅವರ ವೈಯಕ್ತಿಕ ಹಣಕಾಸಿನ ಸ್ಟೇಟ್ಮೆಂಟ್ ಮೇಲೆ ಪರಿಣಾಮ ಬೀರುವುದಿಲ್ಲ.
ರತನ್ ಟಾಟಾ ಭೇಟಿಯಾದ ಬಿಲ್ ಗೇಟ್ಸ್, ಆರೋಗ್ಯ ಕ್ಷೇತ್ರದಲ್ಲಿ ಜೊತೆಯಾಗಿ ಹೆಜ್ಜೆ!
ಟಾಟಾ ಗ್ರೂಪ್ ಸ್ಥಾಪನೆಗೊಂಡ ಸಮಯದಿಂದ ರತನ್ ಟಾಟಾ ಹಾಗೂ ಅವರ ಕುಟುಂಬ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆರೋಗ್ಯ ಕ್ಷೇತ್ರಕ್ಕೆ ಅಗತ್ಯ ಸೌಲಭ್ಯಗಳು ಹಾಗೂ ಶೈಕ್ಷಣಿಕ ವ್ಯವಸ್ಥೆಯ ಅಭಿವೃದ್ಧಿಗೆ ನೆರವು ನೀಡುವ ಮೂಲಕ ಭಾರತದ ಅಭಿವೃದ್ಧಿಗೆ ರತನ್ ಟಾಟಾ ಸಾಕಷ್ಟು ಕೊಡುಗೆ ನೀಡಿದ್ದಾರೆ.
ಟಾಟಾ ಗ್ರೂಪ್ ಲೋಹಗಳು ಹಾಗೂ ಗಣಿಗಾರಿಕೆಯಲ್ಲಿ ಸಾಕಷ್ಟು ಆಸಕ್ತಿ ಹೊಂದಿದೆ. ಹಾಗೆಯೇ ಮಾಹಿತಿ ತಂತ್ರಜ್ಞಾನ, ರಿಟೇಲ್, ಅಟೋ, ಕೆಮಿಕಲ್ಸ್, ಸಾರಿಗೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಟಾಟಾ ಸಂಸ್ಥೆ ತೊಡಗಿಸಿಕೊಂಡಿದೆ. ಟಾಟಾ ಗ್ರೂಪ್ ಕನಿಷ್ಠ29 ಲಿಸ್ಟೆಡ್ ಕಂಪನಿಗಳು ಹಾಗೂ ಇನ್ನೂ ಹೆಚ್ಚಿನ ಅನ್ ಲಿಸ್ಟೆಡ್ ಕಂಪನಿಗಳನ್ನು ಹೊಂದಿದೆ.