10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 4 ಲಕ್ಷ ರೂ. ಇರ್ತಿತ್ತು!

By BK AshwinFirst Published Jul 9, 2023, 4:00 PM IST
Highlights

Multibagger Tracker ಹೂಡಿಕೆದಾರರು ಕಳೆದ 10 ವರ್ಷಗಳ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ದರೆ, ಈ ವೇಳೆಗೆ ಆ ಹೂಡಿಕೆಯ ಮೌಲ್ಯ ಸುಮಾರು 4 ಲಕ್ಷ ರೂ. ಗಳಾಗುತ್ತಿತ್ತು ಎಂದು ವಿಶ್ಲೇಷಣೆ ಮಾಡಲಾಗಿದೆ.

ನವದೆಹಲಿ (ಜುಲೈ 9, 2023): ಹಣ ಮಾಡಲು ನಾನಾ ಮಾರ್ಗಗಳಿರುತ್ತದೆ. ಈ ಪೈಕಿ ಷೇರು ಮಾರುಕಟ್ಟೆಯೂ ಒಂದು. ಕೆಲವು ಸಣ್ಣ ಸಣ್ಣ ಕಂಪನಿಗಳೂ ಸಹ ಹೆಚ್ಚು ಲಾಭ ತಂದುಕೊಡಬಹುದು. ಸದ್ಯ ಷೇರು ಮಾರುಕಟ್ಟೆಯಲ್ಲಿ ಗೂಳಿಯ ಓಟ ಹೆಚ್ಚಾಗಿದ್ದು, ಬಹುತೇಕ ಕಂಪನಿಗಳ ಷೇರುಗಳ ಮೌಲ್ಯ ಹೆಚ್ಚಾಗಿದೆ. ಇದರಿಂದ ಹೂಡಿಕೆದಾರರಿಗ ಭರ್ಜರಿ ಲಾಭ ಆಗುತ್ತಿದೆ. ಆದರೆ, ಸಾವಿರ ರೂ. ಮೊತ್ತದ ಹೂಡಿಕೆ ಮಾಡಿ ಲಕ್ಷಾಂತರ ರೂ. ಲಾಭ ಮಾಡಲು ಸಹ ಇಲ್ಲಿ ಸಾಧ್ಯವಿದೆ. ಅದ್ಹೇಗೆ ಅಂತೀರಾ..? 

ಟ್ರೈಡೆಂಟ್‌ ಲಿಮಿಟೆಡ್‌ ಕಂಪನಿಯ ಷೇರುಗಳು ಕಳೆದ 10 ವರ್ಷಗಳಲ್ಲಿ ಹೂಡಿಕೆದಾರರಿಗೆ ಬರೋಬ್ಬರಿ ಶೇ. 3600 ರಷ್ಟು ರಿಟರ್ನ್ಸ್‌ ನೀಡಿದೆ. ಇದೇ ರೀತಿ ಹೂಡಿಕೆದಾರರು ಕಳೆದ 10 ವರ್ಷಗಳ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ದರೆ, ಈ ವೇಳೆಗೆ ಆ ಹೂಡಿಕೆಯ ಮೌಲ್ಯ ಸುಮಾರು 4 ಲಕ್ಷ ರೂ. ಗಳಾಗುತ್ತಿತ್ತು ಎಂದು ವಿಶ್ಲೇಷಣೆ ಮಾಡಲಾಗಿದೆ. ಅಲ್ಲದೆ, ಕಳೆದ 5 ವರ್ಷಗಳಲ್ಲಿ ಈ ಕಂಪನಿ ಷೇರುಗಳ ಮೊತ್ತ ಶೇ. 326 ರಷ್ಟು ಹೆಚ್ಚಾಗಿದ್ದು, ಹಾಗೆ ಕಳೆದ 3 ವರ್ಷಗಳಲ್ಲಿ ಅಂದಾಜು ಶೇ. 665 ರಷ್ಟು ಜಂಪ್‌ ಆಗಿದೆ ಎಂದೂ ತಿಳಿದುಬಂದಿದೆ. 

ಇದನ್ನು ಓದಿ: 10 ವರ್ಷದ ಹಿಂದೆ ನೀವು ಈ ಸ್ಟಾಕ್‌ನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ರೂ. ಇರ್ತಿತ್ತು!

17 ಸಾವಿರ ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿರುವ ಟ್ರೈಡೆಂಟ್‌ ಲಿಮಿಟೆಡ್ ಕಂಪನಿ  ಜವಳಿ, ಕಾಗದ, ನೂಲು ಮತ್ತು ರಾಸಾಯನಿಕಗಳನ್ನು ತಯಾರಿಸುತ್ತದೆ. ಕಂಪನಿಯ ಉತ್ಪನ್ನಗಳಲ್ಲಿ ಟವೆಲ್‌ಗಳು, ಗೋಧಿ ಒಣಹುಲ್ಲಿನಿಂದ ಮುದ್ರಣ ಕಾಗದ, ನೇಯ್ಗೆ ಮತ್ತು ಹೊಸೈರಿ ನೂಲುಗಳು ಹಾಗೂ ಸಲ್ಫ್ಯೂರಿಕ್ ಆಮ್ಲ ಸೇರಿವೆ. ಕಂಪನಿಯು ತನ್ನ ಹೆಚ್ಚಿನ ಆದಾಯವನ್ನು ರಫ್ತುಗಳಿಂದ ಪಡೆಯುತ್ತದೆ. 

ವಿನಿಮಯ ಕೇಂದ್ರಗಳೊಂದಿಗೆ ಲಭ್ಯವಿರುವ ಷೇರುದಾರರ ಮಾದರಿಯ ಪ್ರಕಾರ, ಕಂಪನಿಯು 73.19% ರಷ್ಟು ಪ್ರೊಮೋಟರ್‌ಗಳ ಮಾಲೀಕತ್ವವನ್ನು ಹೊಂದಿದೆ. ಜತೆಗೆ, ಸಾರ್ವಜನಿಕ ಷೇರುದಾರರು ಉಳಿದ 25.56% ಪಾಲು ಹೊಂದಿದ್ದಾರೆ. ಸಾರ್ವಜನಿಕ ಷೇರುದಾರರಲ್ಲಿ, ಮ್ಯೂಚುವಲ್ ಫಂಡ್‌ಗಳು ಮತ್ತು ವಿದೇಶಿ ಹೂಡಿಕೆದಾರರು ಗಮನಾರ್ಹ ಪಾಲನ್ನು ಹೊಂದಿಲ್ಲದಿದ್ದರೂ, ಚಿಲ್ಲರೆ ಹೂಡಿಕೆದಾರರು ಕಂಪನಿಯಲ್ಲಿ ಸುಮಾರು 18% ಪಾಲು ಹೊಂದಿದ್ದಾರೆ.

ಇದನ್ನೂ ಓದಿ: ನೀವು ಈ ಸ್ಟಾಕ್‌ನಲ್ಲಿ 10 ವರ್ಷದ ಹಿಂದೆ 10 ಸಾವಿರ ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 10 ಲಕ್ಷ ರೂ. ಇರ್ತಿತ್ತು!

ಇನ್ನು, ಈ ಕಂಪನಿಯು ಹನ್ನೆರಡು ತಿಂಗಳ (ಟಿಟಿಎಂ) ಆಧಾರದ ಮೇಲೆ 0.83 ಇಪಿಎಸ್ ಹೊಂದಿದೆ. ಕಳೆದ 10 ವರ್ಷಗಳಲ್ಲಿ, ಟ್ರೈಡೆಂಟ್‌ ಲಿಮಿಟೆಡ್‌ನ ಆದಾಯವು ಆರ್ಥಿಕ ವರ್ಷ 2014 ರಲ್ಲಿದ್ದ 3,868 ಕೋಟಿ ರೂಪಾಯಿಗಳಿಂದ ಆರ್ಥಿಕ ವರ್ಷ 2023ರಲ್ಲಿ 6,332 ಕೋಟಿ ರೂಪಾಯಿಗಳಿಗೆ ಏರಿದೆ. ಈ ಮಧ್ಯೆ, ನಿವ್ವಳ ಲಾಭವು ಇದೇ ಅವಧಿಯಲ್ಲಿ ದ್ವಿಗುಣಕ್ಕಿಂತ ಹೆಚ್ಚಾಗಿದ್ದು 441 ಕೋಟಿ ರೂ. ಗೆ ಹೆಚ್ಚಳವಾಗಿದೆ. 

ಮಾರ್ಚ್ 2023ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ, ಕಂಪನಿಯು 116 ಕೋಟಿ ರೂ. ನಷ್ಟು ಲಾಭವನ್ನು ಗಳಿಸಿದ್ದು, ಇದು ಒಂದು ವರ್ಷದ ಹಿಂದೆ ಇದ್ದದ್ದಗಿಂತ ಸುಮಾರು 50% ನಷ್ಟು ಕಡಿಮೆಯಾಗಿದೆ. ಹಾಗೆ, ಅದೇ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳ ಆದಾಯ 1562 ಕೋಟಿ ರೂ. ನಷ್ಟಿತ್ತು ಎಂದೂ ತಿಳಿದುಬಂದಿದೆ. 

ಇದನ್ನೂ ಓದಿ: 10 ವರ್ಷದ ಹಿಂದೆ ಟಾಟಾ ಸಮೂಹದ ಈ ಷೇರಿನಲ್ಲಿ 10,000 ರೂ. ಹೂಡಿಕೆ ಮಾಡಿದ್ರೆ ಈಗ ನಿಮ್ಮ ಬಳಿ 6 ಲಕ್ಷ ಇರುತ್ತಿತ್ತು!

click me!