ದುಡ್ಡು ಮಾಡ್ಬೇಕಾ?: ಈ ಪುಸ್ತಕ ಓದ್ಬಿಡಿ ಸಾಕು!

Published : Aug 15, 2018, 01:52 PM ISTUpdated : Sep 09, 2018, 08:31 PM IST
ದುಡ್ಡು ಮಾಡ್ಬೇಕಾ?: ಈ ಪುಸ್ತಕ ಓದ್ಬಿಡಿ ಸಾಕು!

ಸಾರಾಂಶ

ಹಣ ಗಳಿಸಲು ಬಂದಿದೆ ವಾರೆನ್ ಬಫೆಟ್ ಪುಸ್ತಕ! ಹೂಡಿಕೆಯ ಇತಿಹಾಸ, ಮಹತ್ವ ತಿಳಿಸಿದ ಬಫೆಟ್ ಪುಸ್ತಕ! ವಾರೆನ್ ಬಫೆಟ್ ಮ್ಯಾನೇಜರ್ ಐಫೆಲ್ಸ್ ಬರೆದಿರುವ ಪುಸ್ತಕ! ಇಕ್ವಿಟಿ ಮಾರುಕಟ್ಟೆ ಮೂಲಕ ಯಶಸ್ವಿ ಉದ್ಯಮಿಯಾದ ಬಫೆಟ್

ವಾಷಿಂಗ್ಟನ್(ಆ.15): ವಾರೆನ್ ಬಫೆಟ್ ಹೆಸರು ಯಾರು ತಾನೇ ಕೇಳಿಲ್ಲ ಹೇಳಿ?. ಜಗತ್ತಿನ ಅತ್ಯಂತ ಸಫಲ ಉದ್ಯಮಿಗಳ ಪಟ್ಟಿಯಲ್ಲಿ ವಾರೆನ್ ಬಫೆಟ್ ಹೆಸರು ಮುಂಚೂಣಿಯಲ್ಲಿರುತ್ತದೆ. ಆದರೆ ವಾರೆನ್ ಬಫೆಟ್ ಒಬ್ಬರೇ ತಮ್ಮ ಸಾಮ್ರಾಜ್ಯವನ್ನು ಕಟ್ಟಿಲ್ಲ. ಬದಲಿಗೆ ಬಪೆಟ್ ಯಶಸ್ವಿ ಉದ್ಯಮಿ ಎನಿಸಿಕೊಳ್ಳುವುದರಲ್ಲಿ ಹಲವರ ಅವಿರತ ಶ್ರಮ ಇದೆ.

ಬಫೆಟ್ ಯಶಸ್ಸಿನ ಹಿಂದೆ ಅವರ ಹಾಗೂ ಅವರ ಅತ್ಯುತ್ತಮ ಸಹಭಾಗಿಗಳ ಪಾತ್ರ ಮಹತ್ವದ್ದಾಗಿದೆ.  ತಾವು ಏನು ಮಾಡಿದೆವು, ಹೇಗೆಲ್ಲ ಇಕ್ವಿಟಿ ಮಾರುಕಟ್ಟೆ ಮೂಲಕ ಲಾಭ ಮಾಡಿಕೊಂಡೆವು ಎಂಬ ಬಗ್ಗೆ 'ಇನ್​ಸೈಡ್​  ದಿ ಇನ್​ವೆಸ್ಟ್​ಮೆಂಟ್​ ವಾರೆನ್​ ಬಫೆಟ್​: 20 ಕೇಸಸ್' ಎಂಬ​​  ಪುಸ್ತಕದಲ್ಲಿ ವಿವರಿಸಲಾಗಿದೆ.

  

ಈ ಪುಸ್ತಕದಲ್ಲಿ 1957 ರಿಂದ ಬಫೆಟ್​ ಹೂಡಿಕೆ  ಆರಂಭಿಸಿದ ದಿನದಿಂದ ಹಿಡಿದು ಇಲ್ಲಿಯವರೆಗಿನ  20 ಪ್ರಮುಖ ಹೂಡಿಕೆಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. 1957 ರಿಂದ 68 ವರೆಗಿನ ಅವಧಿಯ ಬಂಡವಾಳ ಹೂಡಿಕೆಯನ್ನು ಭಾಗ -1 ಎಂದು ಮತ್ತು 1968 ರಿಂದ 90 ರವರೆಗಿನ ಅವಧಿಯ 9 ಬಂಡವಾಳ ಹೂಡಿಕೆಯನ್ನು ಭಾಗ-2 ಎಂದು ವಿಂಗಡಿಸಲಾಗಿದೆ. ಅಲ್ಲದೇ ಭಾಗ-3ರಲ್ಲಿ 90 ರ ಬಳಿಕದ ಹೂಡಿಕೆಗಳ ಬಗ್ಗೆ ಪುಸ್ತಕದಲ್ಲಿ ವಿವರಿಸಲಾಗಿದೆ.  

ಈ ಪುಸ್ತಕದಲ್ಲಿ ಪ್ರಮುಖವಾಗಿ ಷೇರುಗಳ ಪತ್ರಗಳು, ಕಂಪನಿಯ ದಾಖಲೆಗಳು, ವಾರ್ಷಿಕ ವರದಿ, ತಜ್ಞರು ವ್ಯಕ್ತಪಡಿಸಿರುವ ಅಭಿಪ್ರಾಯಗಳು,  ಸೀ ಕ್ಯಾಂಡೀಸ್​,  ದಿ ವಾಷಿಂಗ್ಟನ್​ ಪೋಸ್ಟ್​, ಜಿಕೋ, ಕೋಕಾ-ಕೊಲಾ, ಯುಎಸ್​ ಏರ್​, ವೆಲ್ಸ್​ಫೋರ್ಡ್ ಕಂಪನಿಗಳ ಹೂಡಿಕೆ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ಈ ಪುಸ್ತಕವನ್ನು ಬಫೆಟ್ ಅವರ ಮ್ಯಾನೇಜರ್ ಐಫೆಲ್ಸ್ ಬರೆದಿರುವುದು ಮತ್ತೊಂದು ವಿಶೇಷ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುವುದು ಖಚಿತ