ಸೈಟ್ ಖರೀದಿಸುವಾಗ ಈ ಅಂಶಗಳು ಗಮನದಲ್ಲಿರಲಿ

Published : Sep 10, 2018, 05:14 PM ISTUpdated : Sep 19, 2018, 09:22 AM IST
ಸೈಟ್ ಖರೀದಿಸುವಾಗ ಈ ಅಂಶಗಳು ಗಮನದಲ್ಲಿರಲಿ

ಸಾರಾಂಶ

ತಮ್ಮದೇ ಆದ ಜಾಗವೊಂದನ್ನು ಕೊಂಡು,ಮನೆ ಕಟ್ಟಿಕೊಳ್ಳಬೇಕೆಂಬ ಕನಸು ಯಾರಿಗೆ ತಾನೇ ಇರುವುದಿಲ್ಲ ಹೇಳಿ? ಅದರಲ್ಲಿಯೂ ಮಧ್ಯಮ ವರ್ಗದ ಮಂದಿಯ ಜೀವನದ ಏಕೈಕಿ ಗುರಿ ಎಂದರೆ ತಮ್ಮದೇ ಸೂರು ಕಟ್ಟಿಕೊಂಡು, ನೆಲೆ ಕಂಡು ಕೊಳ್ಳುವುದು.ಆದರೆ, ಸೈಟ್ ಕೊಳ್ಳುವಾಗ ಯಾವ ಅಂಶಗಳೆಡೆಗೆ ಗಮನ ಹರಿಸಬೇಕು ಗೊತ್ತಾ?

ನಿವೇಶನ ಖರೀದಿ ಎಲ್ಲರಿಗೂ ಇಷ್ಟವೇ. ಆದರೆ, ಖರೀದಿಸುವಾಗ ಎಚ್ಚರ ತಪ್ಪಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅದು ಎಂತಹ ನಂಬಿಗಸ್ಥ ವ್ಯಕ್ತಿ ಅಥವಾ ಕಂಪನಿಯೇ ಆಗಿರಲಿ. ಅವರಿಂದ ಖರೀದಿ ಮಾಡುವ ಮುನ್ನ ಸೂಕ್ತ ಎಚ್ಚರಿಕೆ ವಹಿಸುವುದು ಸೂಕ್ತ. ಹಾಗಾದರೆ ನಿವೇಶನ ಖರೀದಿ ಮಾಡುವ ಮುನ್ನ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳೇನು? ನೀವೇನು ಮಾಡಬೇಕು ಎಂಬಂತಹ ಮಾಹಿತಿಗಳನ್ನು ಇಲ್ಲಿದೆ..

ಮನೆ ಸಾಲ ತಿರಸ್ಕೃತಗೊಳ್ಳದಂತೆ ಏನು ಮಾಡಬೇಕು?

ಖರೀದಿಗೂ ಮುನ್ನ
ಅಕ್ಕ ಪಕ್ಕದಲ್ಲಿ ನಮಗೆ ಆಪ್ತರೆನಿಸುವವರು ಇದ್ದಾರೆಯೇ, ಅಲ್ಲಿನ ವಾತಾವರಣ ಹೇಗಿದೆ ತಿಳಿಯಬೇಕು (ಉದಾ: ಅಡುಗೆ ಪರಿಮಳ(ಸಸ್ಯಾಹಾರ), ಗದ್ದಲ, ಅತಿಯಾದ ಕಾರ್ಯಕ್ರಮ ಆಗುವ ಹಾಲ್ ಇತ್ಯಾದಿ)
- ನೀರಿನ, ತ್ಯಾಜ್ಯ ವಸ್ತುಗಳಿಗೆ ಚರಂಡಿ ವ್ಯವಸ್ಥೆ.
- ಆ ಜಾಗದಲ್ಲಿ ಕುಡಿಯಲು ಶುದ್ಧ ನೀರು ಹಾಗೂ ಇತರೆ ಬಳಕೆಗೆ ಬೇಕಾದ ನೀರಿನ ಸೌಲಭ್ಯ, ವಿದ್ಯುತ್ ವ್ಯವಸ್ಥೆ .
- ಮೊದಲು ಆ ಜಾಗದಲ್ಲಿ ಏನಿತ್ತು ತಿಳಿದುಕೊಳ್ಳಿ. ಉದಾ-ಕೃಷಿ, ಕಟ್ಟಡ ಇದ್ದಿರಬಹುದು, ದೇಣಿಗೆ ನೀಡಿದ್ದಿರಬಹುದು.
- ಆ ಜಾಗದಲ್ಲಿ ಇದ್ದ ಜನರೊಂದಿಗೆ ಇತರರ ಸಂಬಂಧ(ಮುಂದೆ ನಮಗೆ ತೊಂದರೆ ಕೊಡಬಾರದು ಅಲ್ಲವೇ)
- ಮಕ್ಕಳಿಗೆ ಆಟವಾಡಲು ಜಾಗ ಇದೆಯೇ?
-  ನಮ್ಮ ಇಷ್ಟವಾದ ಕೆಲಸವನ್ನು ಆ ಜಾಗದಲ್ಲಿ ಮಾಡಲು ಸಾಧ್ಯವಿದೆಯೇ?

 ವಾಹನ ನಿಲುಗಡೆಗೆ ಜಾಗ
- ಸಮಾರಂಭ ಮಾಡುವಾಗ ಜಾಗ ಸಾಕಾಗಬಹುದೆ?
- ಕಚೇರಿಗೆ ಎಷ್ಟು ದೂರ ಇದೆ?
- ನಮ್ಮ ಜಾಗದಿಂದ ಇತರೆ ಕಡೆಗೆ ಹೋಗಲು ವಾಹನ ಸೌಲಭ್ಯ ಸುಲಭವಾಗಿ ದೊರಕುವುದೇ?
- ನಮ್ಮ ಸ್ವಂತ ವಾಹನವಾದರೆ ಇಂಧನಕ್ಕೆ ನಮ್ಮ ಕೆಲಸಕಾರ್ಯಗಳಿಗೆ ಹೋಗಲು ಅಲ್ಲಿಂದ ಎಷ್ಟು ಖರ್ಚಾಗಬಹುದು?
- ನಮಗೆ ಅಗತ್ಯದ ಸಾಮಾನುಗಳು ಬೇಕಾದಲ್ಲಿ(ದಿನಸಿ) ಕೂಡಲೇ ಸಿಗಬಹುದೇ?
- ಆರೋಗ್ಯ ಸಂಬಂಧವಾಗಿ ತುರ್ತು ಚಿಕಿತ್ಸೆ ಕಡಿಮೆ ಸಮಯದಲ್ಲಿ ದೊರೆಯಬಹುದೇ?

 ಎಲ್ಲ ದಾಖಲೆಗಳು ಸರಿಯಾಗಿದೆಯೇ?
- ಹಳೆಯ ಜನರಿಂದ ದಾಖಲೆಗಳು ಮುಕ್ತವಾಗಿದೆಯೇ? ಅಥವಾ ಈ ಜಾಗದಲ್ಲಿ ಇನ್ನಾರಿಗಾದರೂ ಹಣ ಪಾವತಿಸಲು ಬಾಕಿ ಉಳಿದಿದೆಯೇ ತಿಳಿಯಿರಿ.
- ಎಷ್ಟು ಮಹಡಿಯ ಕಟ್ಟಡ(ಪಟ್ಟಣಗಳಲ್ಲಿ) ಕಟ್ಟಲು ಅವಕಾಶ ಇದೆ ಎಂಬ ದಾಖಲೆಯನ್ನು ನೆನಪಿನಲ್ಲಿ ಪರಿಶೀಲಿಸಿ.

ಇನ್ನಿತರೆ ಸಂಗತಿಗಳು
- ಇತರೆ ಜಾಗಗಳಿಂದ ಕಡಿಮೆ ಹಣದಲ್ಲಿ ಸರಿಯಾದ ದಾಖಲೆಯೊಂದಿಗೆ ಈ ಜಾಗ ಸಿಗುತ್ತದೆಯೇ ಪರಿಶೀಲಿಸಿ.
- ಮುಂದೆ ಈ ಜಾಗದಲ್ಲಿ ಏನಾದರೂ ಕೆಲಸ, ಕಟ್ಟಡ ನಡೆಯುವ ಜಾಗವಾಗಿದ್ದು ನಾವು ಅದನ್ನು ಬಿಟ್ಟು ಹೋಗಬೇಕಾದ ಪರಿಸ್ಥಿತಿ ಬರಬಹುದೇ? ರೋಡಿನಿಂದ ಎಷ್ಟು ದೂರದಲ್ಲಿ ನಾವು ಖರೀದಿಸುವ ಸ್ಥಳ ಇದೆ ಎಂಬಿತ್ಯಾದಿ ವಿಷಯಗಳು ಗಮನದಲ್ಲಿರಲಿ.
- ಮುಂದೆ ಈ ಜಾಗವನ್ನು ನಾವು ವಿಕ್ರಯಿಸುವಾಗ ಈಗ ನೀಡಿದ ಹಣಕ್ಕಿಂತ ಹೆಚ್ಚಿನ ಮೊತ್ತ ದೊರಕುವಂತಿದೆಯೇ ಆಲೋಚಿಸಿ.
-  ಕಡಿಮೆ ಹಣದಲ್ಲಿ 20 ಸೆಂಟ್‌ನಷ್ಟು ಜಾಗ ದೊರೆಯುವುದು, 10 ಸೆಂಟ್ ಬೇಡವಾಗಿದ್ದಲ್ಲಿ ವಿಕ್ರಯಿಸುವಂತಿದೆಯೇ? ಅಂದರೆ ಉಳಿದ 10ಸೆಂಟ್‌ಗೆ ದಾರಿ, ಕಟ್ಟಡ ಕಟ್ಟುವಂತಹ ಜಾಗವೇ ಎಂದು ಪರಿಶೀಲಿಸಿ.
- ದಾಖಲೆ ಇರುವ ಜಾಗದೊಂದಿಗೆ ದಾಖಲೆಯಿಲ್ಲದ ಜಾಗವಿರಬಹುದು. ಅದನ್ನು ಗಮನಿಸಿ. ಕಾನೂನುಬದ್ಧವಾಗಿರಲಿ ಜಾಗದ ಸಂಪೂರ್ಣ ಹಕ್ಕು ವಿಕ್ರಯ ಮಾಡಬಹುದೇ?
- ಜಾಗ ಅಥವಾ ಸೊತ್ತು ವಿಕ್ರಯ ಮಾಡುವವರ ಸ್ವಾಧೀನದಲ್ಲೇ ಇದೆಯೇ?
- ಆ ಜಾಗಕ್ಕೆ ಸಂಬಂಧಪಟ್ಟಂತೆ ಮೈನರ್ ಹಕ್ಕಿರುವಂತಹ ಮಕ್ಕಳು ಇದ್ದಾರೆಯೇ ತಿಳಿಯಿರಿ.
-  ಜಾಗಕ್ಕೆ ಸಂಬಂಧಪಟ್ಟು ಸಾಲ ಇದೆಯೋ ಅಂದರೆ ಜಾಗವನ್ನು ಅಡವಿಟ್ಟು ಸಾಲ ಪಡೆದಿದ್ದಾರೆಯೇ, ಎಂಬದುನ್ನು ವರಿಶೀಲಿಸಿ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ