
ಅಹಮದಾಬಾದ್(ಸೆ.10): ದೇಶದ 13 ರಾಜ್ಯಗಳಲ್ಲಿ ಒಟ್ಟು 7 ಬ್ಯಾಂಕ್‌ಗಳ ಸುಮಾರು ೧1.5 ಲಕ್ಷ ಗ್ರಾಹಕರ ಡಾಟಾ ಸೋರಿಕೆಯಾಗಿದ್ದು, ದೇಶದ ಬ್ಯಾಂಕಿಂಗ್ ವಲಯ ಬೆಚ್ಚಿ ಬಿದ್ದಿದೆ. ದೇಶದಲ್ಲಿ ಬಹುದೊಡ್ಡ ಸೈಬರ್ ಗ್ಯಾಂಗ್ ವೊಂದು ಚುರುಕಾಗಿದ್ದು, ಇದು ಬ್ಯಾಂಕ್‌ಗಳಿಂದ ಗ್ರಾಹಕರ ಡಾಟಾ ಕದಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಹಮದಾಬಾದ್ ಪೊಲೀಸರು, ಈ ಸೈಬರ್ ಗ್ಯಾಂಗ್ ಮುಖ್ಯಸ್ಥ ಸಮೀರ್ ಖಾನ್ ಎಂಬಾತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಆಗಸ್ಟ್ 31 ರಂದು ಸೈಬರ್ ಕ್ರೈಂ ಪೊಲೀಸರು ಪ್ರಕಾಶಚಂದ್ರ ಕೃಷ್ಣಸಿಂಗ್ ಎಂಬಾತನನ್ನು ಬಂಧಿಸಿದ್ದು, ಈತನಿಂದ ಈ ಗ್ಯಾಂಗ್ ಕುರಿತು ಮಹತ್ವದ ಮಾಹಿತಿ ಲಭಿಸಿದೆ ಎಂದು ಹೇಳಲಾಗಿದೆ.
ಉತ್ತರಪ್ರದೇಶ, ಜಾರ್ಖಂಡ್, ಬಿಹಾರ ಗುಜರಾತ್, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಈ ಸೈಬರ್ ಗ್ಯಾಂಗ್ ಆಕ್ಟೀವ್ ಚುರುಕಾಗಿದ್ದು, ಬ್ಯಾಂಕ್‌ಗಳಿಂದ ಗ್ರಾಹಕರ ಡಾಟಾ ಕದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.