ಈ ಎರಡು ರಾಷ್ಟ್ರಗಳಲ್ಲಿದ್ದಾರೆ ಜಗತ್ತಿನ ಅತೀ ಹೆಚ್ಚು ಸಿರಿವಂತರು!

By Suvarna News  |  First Published Nov 16, 2022, 11:18 AM IST

ಒಂದು ರಾಷ್ಟ್ರದ ಸಂಪತ್ತನ್ನು ಜಿಡಿಪಿ ಆಧಾರದಲ್ಲಿ ಅಳೆಯಬಹುದು. ಹಾಗೆಯೇ ಅಲ್ಲಿನ ನಾಗರಿಕರ ಸಂಪತ್ತನ್ನು ಗೃಹ ಸಂಪತ್ತಿನ ಮಾನದಂಡದಲ್ಲಿ ನಿರ್ಧರಿಸಬಹುದು. ಇತ್ತೀಚಿನ ವರದಿಯೊಂದರ ಪ್ರಕಾರ ಜಗತ್ತಿನ ಒಟ್ಟು ಗೃಹ ಸಂಪತ್ತಿನ ಅರ್ಧದಷ್ಟು ಬರೀ ಎರಡು ರಾಷ್ಟ್ರಗಳಲ್ಲೇ ಕಂಡುಬಂದಿದೆ.ಅಮೆರಿಕ ಹಾಗೂ ಚೀನಾ ಜಗತ್ತಿನ ಗೃಹ ಸಂಪತ್ತಿನ ಶೇ.50ರಷ್ಟನ್ನು ಹೊಂದಿದ್ದು, ಈ ಪಟ್ಟಿಯಲ್ಲಿ ಕ್ರಮವಾಗಿ  ಮೊದಲ ಎರಡು ಸ್ಥಾನಗಳಲ್ಲಿವೆ. ಈ ಪಟ್ಟಿಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ. 


ನವದೆಹಲಿ (ನ.16): ಯಾವುದೇ ಒಂದು ಆರ್ಥಿಕತೆಯ ಸಮಗ್ರ ಸಂಪತ್ತು ಹಾಗೂ ಗಾತ್ರವನ್ನು ಅರ್ಥೈಸಿಕೊಳ್ಳಲು ಜಿಡಿಪಿಯನ್ನು ಸಾಮಾನ್ಯವಾಗಿ ಮಾನದಂಡವಾಗಿ ಬಳಸಲಾಗುತ್ತದೆ.  ವಾರ್ಷಿಕ ಆರ್ಥಿಕ ಉತ್ಪಾದನೆಯನ್ನು ಗಮನಿಸಲು ಇದು ಉಪಯುಕ್ತ. ಆದರೆ, ದೇಶದ ಸಂಪತ್ತನ್ನು ಮೌಲ್ಯಮಾಪನ ಮಾಡಲು ಇತರ ಮಾನದಂಡಗಳನ್ನು ಕೂಡ ಪರಿಗಣಿಸಲಾಗುತ್ತದೆ. ಇದರಲ್ಲಿ ಗೃಹ ಸಂಪತ್ತಿನ ಮಾನದಂಡ ಕೂಡ ಸೇರಿದೆ. ಗೃಹ ಸಂಪತ್ತಿನ ಅಂಕಿಅಂಶಗಳು ಯಾವ ದೇಶದ ನಾಗರಿಕರು ವಿಶ್ವಾದ್ಯಂತ ಹೆಚ್ಚಿನ ಹಣ ಮತ್ತು ಆಸ್ತಿ ಗಳಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುತ್ತದೆ. ಕ್ರೆಡಿಟ್ ಸೂಯಿಸ್ಸೆ ಸಂಸ್ಥೆಯ ವಾರ್ಷಿಕ ಜಾಗತಿಕ ಸಂಪತ್ತಿನ ವರದಿಯಲ್ಲಿ ಪ್ರತಿ ರಾಷ್ಟ್ರದಲ್ಲಿ ಗೃಹ ಸಂಪತ್ತು ಎಷ್ಟಿದೆ ಎಂಬುದನ್ನು ಅಂದಾಜಿಸಲಾಗಿದೆ. ಈ ವರದಿ ಅನ್ವಯ ಜಗತ್ತಿನ  463 ಟ್ರಿಲಿಯನ್ ಡಾಲರ್ ಗೃಹ ಸಂಪತ್ತು ವಿವಿಧ ರಾಷ್ಟ್ರಗಳ ನಡುವೆ ಹಂಚಿ ಹೋಗಿದೆ. ಆದರೆ, ಈ ಸಂಪತ್ತು ಎಲ್ಲ ರಾಷ್ಟ್ರಗಳ ನಡುವೆ ಸಮನಾಗಿ ಹಂಚಿಕೆಯಾಗಿಲ್ಲ. ಅಚ್ಚರಿಯ ಸಂಗತಿಯೆಂದ್ರೆ ಜಗತ್ತಿನ ಒಟ್ಟು ಗೃಹ ಸಂಪತ್ತಿನಲ್ಲಿ ಶೇ.75ರಷ್ಟು ಕೇವಲ 10 ರಾಷ್ಟ್ರಗಳ ನಡುವೆ ಹಂಚಿ ಹೋಗಿದೆ. ಅದರಲ್ಲೂ ಜಗತ್ತಿನ ಒಟ್ಟು ಗೃಹ ಸಂಪತ್ತಿನ ಅರ್ಧದಷ್ಟು ಕೇವಲ ಚೀನಾ ಹಾಗೂ ಅಮೆರಿಕದಲ್ಲಿದೆ. ಇವೆರಡೂ ರಾಷ್ಟ್ರಗಳಲ್ಲಿನ ಎಲ್ಲ ವೈಯಕ್ತಿಕ ಸಂಪತ್ತನ್ನು ಒಗ್ಗೂಡಿಸಿದ್ರೆ ಅದು ಜಗತ್ತಿನ ಸಂಪತ್ತಿನ ಅರ್ಧದಷ್ಟಿದೆ ಎಂದು ವರದಿ ಹೇಳಿದೆ.

ಅಮೆರಿಕ, ಚೀನಾದ ಬಳಿ ಸಿಂಹಪಾಲು
ಇಡೀ ಜಗತ್ತಿನಲ್ಲಿ ಯಾವ ರಾಷ್ಟ್ರದ ನಾಗರಿಕರು ಅತ್ಯಧಿಕ ಹಣ ಹಾಗೂ ಆಸ್ತಿ ಹೊಂದಿದ್ದಾರೆ ಎಂಬುದನ್ನು ಗೃಹ ಸಂಪತ್ತು (Household Wealth) ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಹೀಗಾಗಿ ಕ್ರೆಡಿಟ್ ಸೂಯಿಸ್ಸೆ (Credit Suisse’s) ಸಂಸ್ಥೆಯ ವಾರ್ಷಿಕ ಜಾಗತಿಕ ಸಂಪತ್ತಿನ ವರದಿಯಲ್ಲಿ ದೇಶವಾರು ಗೃಹ ಸಂಪತ್ತಿನ ಅಂಕಿಅಂಶಗಳನ್ನು ನೀಡಲಾಗಿದೆ. ಅದರ ಅನ್ವಯ ಅಮೆರಿಕದಲ್ಲಿ (US) ಜಗತ್ತಿನ ಒಟ್ಟು ಗೃಹ ಸಂಪತ್ತಿನ ಶೇ.31.5ರಷ್ಟಿದೆ. ಅಂದ್ರೆ ಅಮೆರಿಕದಲ್ಲಿ 145.8 ಟ್ರಿಲಿಯನ್ ಗೃಹ ಸಂಪತ್ತಿದೆ. ಅಂದರೆ ಜಗತ್ತಿನಲ್ಲಿ ಅತೀ ಹೆಚ್ಚು ಗೃಹ ಸಂಪತ್ತು ಹೊಂದಿರುವ ರಾಷ್ಟ್ರ ಅಮೆರಿಕ. ಇನ್ನು ಎರಡನೇ ಸ್ಥಾನದಲ್ಲಿರುವ ಚೀನಾ ಜಗತ್ತಿನ ಒಟ್ಟು ಗೃಹ ಸಂಪತ್ತಿನ ಶೇ.18.4ರಷ್ಟನ್ನು ಹೊಂದಿದೆ. ಅಂದರೆ ಚೀನಾದಲ್ಲಿ 85.1ಟ್ರಿಲಿಯನ್ ಡಾಲರ್ ಗೃಹ ಸಂಪತ್ತಿದೆ.  ಇವೆರಡು ರಾಷ್ಟ್ರಗಳನ್ನು ಹೊರತುಪಡಿಸಿದ್ರೆ ಉಳಿದೆಲ್ಲ ರಾಷ್ಟ್ರಗಳ ಪಾಲು ತುಂಬಾ ಕಡಿಮೆ ಎನ್ನಬಹುದು. ಮೂರನೇ ಸ್ಥಾನದಲ್ಲಿರುವ ಜಪಾನ್ ಶೇ.5.5ರಷ್ಟು ಪಾಲು ಹೊಂದಿದ್ದು, 25.7 ಟ್ರಿಲಿಯನ್ ಡಾಲರ್ ಗೃಹ ಸಂಪತ್ತು ಹೊಂದಿದೆ. ಇನ್ನು ಭಾರತ  ಏಳನೇ ಸ್ಥಾನದಲ್ಲಿದ್ದು, ಶೇ.3.1ರಷ್ಟು ಅಂದ್ರೆ 14.2 ಟ್ರಿಲಿಯನ್ ಡಾಲರ್ ಗೃಹ ಸಂಪತ್ತು ಹೊಂದಿದೆ. ಇನ್ನು ಪ್ರಾದೇಶಿಕವಾಗಿ ನೋಡೋದಾದ್ರೆ  ಉತ್ತರ ಅಮೆರಿಕದ ರಾಷ್ಟ್ರಗಳಲ್ಲಿ ಒಟ್ಟು ಶೇ.35ರಷ್ಟು ಗೃಹ ಸಂಪತ್ತು ಸಂಗ್ರಹವಾಗಿದೆ. ಏಷ್ಯಾದಲ್ಲಿ 33.8ರಷ್ಟು ಗೃಹ ಸಂಪತ್ತು ಕಂಡುಬಂದಿದೆ. ಯುರೋಪ್ ನಲ್ಲಿ ಶೇ22.8ರಷ್ಟು ಗೃಹ ಸಂಪತ್ತಿದೆ. 

Tap to resize

Latest Videos

ಚಿಲ್ಲರೆ ವಹಿವಾಟಿನಲ್ಲಿ ಡಿಜಿಟಲ್ ಕರೆನ್ಸಿ ಬಳಕೆಗೆ ಎಸ್ ಬಿಐ, ಐಸಿಐಸಿಐ ಸೇರಿ 5 ಬ್ಯಾಂಕ್ ಗಳು ಆಯ್ಕೆ

ಜಿಡಿಪಿ ಆಧಾರದಲ್ಲಿ ಕಡಿಮೆ ಸಂಪತ್ತು
ಇನ್ನು ಜಿಡಿಪಿ  (GDP) ಆಧಾರದಲ್ಲಿ ಅಮೆರಿಕ ಹಾಗೂ ಚೀನಾದ ಸಂಪತ್ತು ನೋಡೋದಾದ್ರೆ ಕ್ರಮವಾಗಿ ಜಗತ್ತಿನ ಒಟ್ಟು ಸಂಪತ್ತಿನ ಶೇ. 24 ಹಾಗೂ ಶೇ.19ರಷ್ಟಿದೆ. ಆದರೆ, ಗೃಹ ಸಂಪತ್ತಿನ ಆಧಾರದಲ್ಲಿ ಗಮನಿಸಿದ್ರೆ ಈ ಎರಡೂ ರಾಷ್ಟ್ರಗಳಲ್ಲಿ ಹೆಚ್ಚಿನ ಸಂಪತ್ತಿದೆ.

ಸಾಲದ ಕನಿಷ್ಠ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಸಾಲಗಾರರ ಮೇಲೆ ಹೆಚ್ಚಿದ ಇಎಂಐ ಹೊರೆ!

ಚೀನಾದ ಸಂಪತ್ತಿನಲ್ಲಿ ಭಾರೀ ಏರಿಕೆ
ಇತ್ತೀಚಿನ ದಿನಗಳಲ್ಲಿ ಚೀನಾದ ಸಂಪತ್ತಿಲ್ಲಿ ಸಾಕಷ್ಟು ಹೆಚ್ಚಳವಾಗಿರೋದು ಕಂಡುಬಂದಿದೆ.ಕೇವಲ ಒಂದು ದಶಕದ ಹಿಂದೆ ಚೀನಾದ ನಾಗರಿಕರ ಬಳಿ ಜಗತ್ತಿನ ಒಟ್ಟು ಸಂಪತ್ತಿನ ಶೇ.9ರಷ್ಟು ಮಾತ್ರ ಇತ್ತು. ಆದರೆ, ಇದು ಈಗ ಎರಡು ಪಟ್ಟುಗಿಂತಲೂ ಅಧಿಕವಾಗಿದೆ. 
 

click me!