ಜಮೀನು, ಮನೆ, ಸಂಸ್ಥೆ ನೋಂದಣಿ ಮಾಡಿಕೊಳ್ಳಬೇಕಾ? ಹೊಸ ರೂಲ್ಸ್ ಬಂದಿದೆ ನೋಡಿ... ಇದಾಗಲೇ ಜಾರಿಗೊಂಡಿರುವ ಹೊಸ ಪದ್ಧತಿಯ ಡಿಟೇಲ್ಸ್ ಇಲ್ಲಿದೆ ನೋಡಿ..
ಜಮೀನು, ಮನೆ, ಸಂಸ್ಥೆ ಇತ್ಯಾದಿ ನೋಂದಣಿ ಮಾಡಿಕೊಳ್ಳುವ ಜನರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹೊಸ ನಿಯಮ ಜಾರಿಗೆ ಬಂದಿದೆ. ನಿನ್ನೆ ಅಂದರೆ ಡಿಸೆಂಬರ್ 17ರಿಂದ ಈ ನಿಯಮ ಜಾರಿಯಾಗಿದೆ. ಇದರ ಮೂಲ ಉದ್ದೇಶ, ವಂಚನೆ ತಡೆಯುವುದರೊಂದಿಗೆ ಕೆಲಸದಲ್ಲಿ ಪಾರದರ್ಶಕತೆ ತರುವುದು. ಹೆಚ್ಚಿನ ಸಂಖ್ಯೆಯ ಭೂಮಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಅನುಕೂಲವಾಗುವ ಯೋಜನೆ ಇದಾಗಿದೆ. ಈ ಹೊಸ ವ್ಯವಸ್ಥೆ ಅಡಿ, ಇ-ನೋಂದಣಿ ಮೂಲಕ ಜಮೀನು, ಮನೆ, ಸಂಸ್ಥೆ ಇತ್ಯಾದಿ ನೋಂದಣಿ ನಡೆಯಲಿದೆ. ಕೆಲವು ಜಿಲ್ಲೆಯ ಉಪನೋಂದಣಿ ಕಚೇರಿಗಳಲ್ಲಿ ಕೂಡ ಈಗಾಗಲೇ ಈ ವ್ಯವಸ್ಥೆ ಜಾರಿಯಾಗಿದೆ. ಈ ಪ್ರಕ್ರಿಯೆಯು ಭೂಮಿ ನೋಂದಣಿಯಲ್ಲಿ ಸಮಯವನ್ನು ಉಳಿಸುತ್ತದೆ. ಜನರು ಎಲ್ಲಾ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸುತ್ತಾರೆ. ಮೊದಲೇ ಜಮೀನು ಪರಿಶೀಲನೆ ನಡೆಸುವುದರಿಂದ ಮುಂದೆ ಯಾವುದೇ ಅಡೆತಡೆ ಇರುವುದಿಲ್ಲ. ಸಂಪೂರ್ಣವಾಗಿರುವ ಡೇಟಾವನ್ನು ಮೊದಲೇ ನೀಡುವ ಹಿನ್ನೆಲೆಯಲ್ಲಿ, ನೋಂದಣಿ ಕಚೇರಿಯ ಉದ್ಯೋಗಿಗಳ ಮೇಲೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ನೋಂದಣಿ ಸಂಖ್ಯೆ ಹೆಚ್ಚಾಗಲಿದೆ. ಇಷ್ಟೆಲ್ಲಾ ಪ್ರಕ್ರಿಯೆಗಳಿದ್ದರೂ ಯಾವುದೇ ಹೆಚ್ಚುವರಿ ಮೊತ್ತವನ್ನು ಖರ್ಚು ಮಾಡಬೇಕಾಗಿಲ್ಲ ಎನ್ನುವುದು ಇನ್ನೊಂದು ಹೈಲೈಟ್.
ಈ ಹೊಸ ವ್ಯವಸ್ಥೆ ಅಡಿ, ಮುಖ್ಯ ಬದಲಾವಣೆ ಏನೆಂದ್ರೆ, ಭೂಮಿ ಖರೀದಿಸುವ ಮತ್ತು ಮಾರಾಟ ಮಾಡುವ ಅಥವಾ ಸ್ಥಿರ ಆಸ್ತಿಯ ಪರಿಶೀಲನೆಗಾಗಿ ಅರ್ಜಿಯನ್ನು ಮೊದಲು ನೀಡಬೇಕಾಗುತ್ತದೆ. ಬಳಿಕ ಅದರ ಪರಿಶೀಲನೆ ನಡೆಯುತ್ತದೆ. ಇದಾದ ಬಳಿಕ ಸ್ಟಾಂಪ್ ಮತ್ತು ನೋಂದಣಿ ಶುಲ್ಕದ ಬಗ್ಗೆ ಮಾಹಿತಿಯನ್ನು ನೋಂದಣಿ ಕಚೇರಿಯಿಂದ ಅರ್ಜಿದಾರರಿಗೆ ನೀಡಲಾಗುತ್ತದೆ. ಇವೆಲ್ಲಾ ಪರಿಶೀಲನೆ ಮಾಡಿದ ನಂತರ ಅರ್ಜಿದಾರರು ಸಿದ್ಧಪಡಿಸಿದ ಭೂಮಿಯ ಚಲನ್ ಮತ್ತು ಪತ್ರವನ್ನು ಪಡೆಯುತ್ತಾರೆ. ನಂತರ ನೀವು ಮಾಡಬೇಕಿರುವುದು, ನೀವು ನಾಗರಿಕ ಪೋರ್ಟಲ್‌ಗೆ ಹೋಗಿ ವಿವರಗಳನ್ನು ಭರ್ತಿ ಮಾಡುವುದು. ಅಲ್ಲಿ ನೀಡಿರುವ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು ಅಂದರೆ ಅರ್ಜಿದಾರರು ಭೂಮಿ ಖರೀದಿ ಮತ್ತು ಮಾರಾಟದ ದಾಸ್ತಾನು ಪಡೆಯುತ್ತಾರೆ. ಜಿಲ್ಲಾ ನೋಂದಣಿ ಕಚೇರಿಯಲ್ಲಿ ನೋಂದಣಿಯ ಮುಂದಿನ ಪ್ರಕ್ರಿಯೆಯನ್ನು ಯಾವ ಆಪರೇಟರ್ ಮಾಡಬೇಕೆಂದು ಸ್ವಯಂಚಾಲಿತವಾಗಿ ನಿರ್ಧರಿಸುವುದು ಕೂಡ ಇದರ ಪ್ರಮುಖ ಅಂಶವಾಗಿದೆ.
10-12ನೇ ತರಗತಿ ಪಾಸಾದವರಿಗೆ ಎಲ್ಐಸಿ ಸ್ಕಾಲರ್‌ಶಿಪ್ ಸ್ಕೀಮ್: ಅರ್ಜಿ ಸಲ್ಲಿಕೆಗೆ ಕೆಲವೇ ದಿನ ಬಾಕಿ
undefined
ಇಷ್ಟೆಲ್ಲಾ ಆದ ಬಳಿಕ, ನಿಮ್ಮ ಅರ್ಜಿಯನ್ನು ಪರಿಶೀಲಿಸಲಾಗುತ್ತದೆ. ಅರ್ಜಿ ಪರಿಶೀಲನೆಯ ಜೊತೆಗೆ ಡೇಟಾ ಪರಿಶೀಲನೆ ನಡೆಯುತ್ತದೆ. ಎಲ್ಲವೂ ಸರಿಯಾಗಿದೆ ಎಂದ ಮೇಲೆ ಬಯೋಮೆಟ್ರಿಕ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಸಹಾಯಕ ಮಟ್ಟದಲ್ಲಿ ಪರಿಶೀಲನೆಯ ನಂತರ, ಖರೀದಿದಾರ, ಮಾರಾಟಗಾರ, ಸಾಕ್ಷಿಗಳ ಬಯೋಮೆಟ್ರಿಕ್ ನಡೆಸಲಾಗುತ್ತದೆ. ಇದಕ್ಕೆ ಮುಖ್ಯವಾಗಿ ಬೇಕಿರುವುದು ಆಧಾರ್ ಕಾರ್ಡ್. ಖರೀದಿದಾರ,ಮಾರಾಟಗಾರ, ಸಾಕ್ಷಿದಾರರು... ಹೀಗೆ ಎಲ್ಲರ ಆಧಾರ್ ಕಾರ್ಡ್ ಪರಿಶೀಲಿಸಲಾಗುತ್ತದೆ. ಈ ಎಲ್ಲದರ ಪ್ರಸ್ತುತ ಮತ್ತು ಆಧಾರ್ ಫೋಟೋವನ್ನು ದಾಖಲೆ ಪತ್ರದಲ್ಲಿ ಮುದ್ರಿಸಲಾಗುತ್ತದೆ. ಹೀಗೆ ಮಾಡುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಇಷ್ಟೆಲ್ಲಾ ಪ್ರಕ್ರಿಯೆ ಬಳಿಕ ಮುಂದೊಂದು ದಿನ ತಾನು ಭೂಮಿಯನ್ನು ಮಾರಾಟ ಮಾಡಿಲ್ಲ ಅಥವಾ ಖರೀದಿಸಿಲ್ಲ ಎಂದೋ ಸಾಕ್ಷಿದಾರರು ತಾನು ಸಾಕ್ಷಿ ಹೇಳಿಲ್ಲ ಎಂದೋ ಯಾರೂ ಹೇಳಿಕೊಳ್ಳುವ ಸ್ಥಿತಿ ನಿರ್ಮಾಣ ಆಗುವುದಿಲ್ಲ.
ಇಷ್ಟೇ ಅಲ್ಲದೇ, ಈ ಪ್ರಕ್ರಿಯೆ ಪಾರದರ್ಶಕ ಆಗಿರುವ ಹಿನ್ನೆಲೆಯಲ್ಲಿ ನ್ಯಾಯದ ಹಾದಿಯಲ್ಲಿ ಇರುವವರಿಗೆ ಅನುಕೂಲ ಆಗಲಿದೆ. ದೇಶದ ಎಲ್ಲಿಂದಲಾದರೂ, ಯಾವಾಗ ಮತ್ತು ಎಲ್ಲಿ ಭೂಮಿಯನ್ನು ಮಾರಾಟ ಮಾಡಲಾಗಿದೆ ಅಥವಾ ಯಾವ ಆಧಾರ್ ಸಂಖ್ಯೆಯೊಂದಿಗೆ ಖರೀದಿಸಲಾಗಿದೆ ಎಂಬುದನ್ನು ಪರಿಶೀಲನೆ ಇದರಿಂದ ಸಾಧ್ಯ. ಇದಾದ ಬಳಿಕ, ದಾಖಲೆಗಳನ್ನು ಜಿಲ್ಲಾ ಸಬ್ ರಿಜಿಸ್ಟ್ರಾರ್ ಮಟ್ಟದಲ್ಲಿ ಅಂತಿಮಗೊಳಿಸಲಾಗುತ್ತದೆ. ಮಾರಾಟಗಾರ ಮತ್ತು ಸಾಕ್ಷಿ ನಡುವೆ ಒಪ್ಪಂದವೂ ಇರುತ್ತದೆ. ಇಲಾಖೆ ನೀಡಿದ ಸ್ಲಾಟ್‌ನಲ್ಲಿ ವ್ಯಕ್ತಿಯೊಬ್ಬರು ಜಮೀನು ಪತ್ರವನ್ನು ಪಡೆಯಲು ಸಾಧ್ಯವಾಗದಿದ್ದರೆ, ಅವರಿಗೆ ಹೊಸ ದಿನಾಂಕವನ್ನು ನೀಡಲಾಗುತ್ತದೆ.
ಬಾತ್ರೂಮಿನ ಗೋಡೆ ಒಡೆದಾಗ ಚಿನ್ನದ ನಾಣ್ಯಗಳ ಸುರಿಮಳೆ! ಪೆಟ್ಟಿಗೆಯಲ್ಲಿ ಮುತ್ತು ರತ್ನ: ವಿಡಿಯೋ ವೈರಲ್