2025 ಆರಂಭಕ್ಕೂ ಮುನ್ನವೇ ಸದ್ದಿಲ್ಲದೇ ಜಿಯೋ-ಏರ್‌ಟೆಲ್‌ಗೆ ಶಾಕ್ ಕೊಟ್ಟ ವೊಡಾಫೋನ್ ಐಡಿಯಾ

By Mahmad Rafik  |  First Published Dec 17, 2024, 3:01 PM IST

ಭಾರತದಲ್ಲಿ ವೊಡಾಫೋನ್ ಐಡಿಯಾ  ಟೆಲಿಕಾಂ ವಲಯದ ಮೂರನೇ ಅತಿದೊಡ್ಡ ಕಂಪನಿಯಾಗಿದೆ. ಮೊದಲ ಸ್ಥಾನದಲ್ಲಿ ರಿಲಯನ್ಸ್ ಜಿಯೋ ಮತ್ತು ಎರಡನೇ ಸ್ಥಾನದಲ್ಲಿ ಭಾರ್ತಿ ಏರ್‌ಟೆಲ್ ಇದೆ. ಇದೀಗ ಸದ್ದಿಲ್ಲದೇ ಎರಡು ಕಂಪನಿಗಳಿಗೆ ವೊಡಾಫೋನ್ ಐಡಿಯಾ ಶಾಕ್ ನೀಡಿದೆ.


ನವದೆಹಲಿ: ವೊಡಾಫೋನ್ ಐಡಿಯಾ  ಭಾರತದಲ್ಲಿ ಯಾವ ಸದ್ದಿಲ್ಲದೇ  5G ಸೇವೆಯನ್ನು ಆರಂಭಿಸಿದೆ. 2025ಕ್ಕೂ ಮೊದಲೇ ಭಾರತದ 17 ನಗರಗಳಲ್ಲಿ  5G ಸೇವೆ ಆರಂಭಿಸುವ ಮೂಲಕ ಮೊದಲ ಮತ್ತು  ಎರಡನೇ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ  ಮತ್ತು ಏರ್‌ಟೆಲ್‌ಗೆ ಬಿಗ್ ಶಾಕ್ ನೀಡಿದೆ. ಸದ್ಯದಲ್ಲೇ  5G ಸೇವೆಯನ್ನು ದೇಶದ ಇನ್ನಿತರ ನಗರಗಳಲ್ಲಿ ಆರಂಭಿಸುವ ಗುರಿಯನ್ನು ಹೊಂದಿದೆ. ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಮುಂಬೈ ಸೇರಿದಂತೆ 17 ನಗರಗಳಲ್ಲಿ ವೊಡಾಫೋನ್ ಐಡಿಯಾ  5G ಸೇವೆ ಅರಂಭಿಸಿದೆ.  ವೊಡಾಫೋನ್  ಐಡಿಯಾ ಭಾರತದಲ್ಲಿ ಆರರಿಂದ ಏಳು ತಿಂಗಳೊಳಗೆ 5G ರೋಲ್‌ಔಟ್ ಆರಂಭಿಸಲಿದೆ ಎಂದು ಜನವರಿಯಲ್ಲಿ ಕಂಪನಿಯ ಸಿಇಒ ಹೇಳಿಕೆಯನ್ನು ನೀಡಿದ್ದರು.

ರಿಲಯನ್ಸ್  ಜಿಯೋ  ಮತ್ತು  ಏರ್‌ಟೆಲ್ ತೀವ್ರ  ಸ್ಪರ್ಧೆ ನಡುವೆ 5G ರೋಲ್‌ಔಟ್ ಆರಂಭಿಸಲು ವೊಡಾಫೊನ್ ಐಡಿಯಾಗೆ ಸ್ವಲ್ಪ ಕಾಲಾವಕಾಶ ಬೇಕಾಯ್ತು. ಇದೀಗ ಮೊದಲ ಹಂತದಲ್ಲಿಯೇ 17 ನಗರಗಳಲ್ಲಿ 5G ಸೇವೆ ಆರಂಭಿಸುವಲ್ಲಿ ಯಶಸ್ವಿಯಾಗಿದೆ. 

Tap to resize

Latest Videos

undefined

ವೊಡಾಫೋನ್ ಐಡಿಯಾ 17 ಪರವಾನಗಿ ಪಡೆದ ಸೇವಾ ಪ್ರದೇಶಗಳಲ್ಲಿ (LSA) 5G ಸೇವೆಯನ್ನು ಆರಂಭಿಸಿದೆ. ಆದರೆ ಈ ನಗರಗಳ ಕೆಲವು ಸೀಮಿತ ಪ್ರದೇಶದಲ್ಲಿ ಮಾತ್ರ 5G ಸೇವೆ ಲಭ್ಯವಾಗಲಿದೆ ಎಂದು ವೊಡಾಫೋನ್ ಐಡಿಯಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ವೊಡಾಫೋನ್ ಐಡಿಯಾ 3.3GHz ಮತ್ತು 26GHz ಸ್ಪೆಕ್ಟ್ರಮ್ ಎರಡರಲ್ಲೂ 5G ಸೇವೆಯನ್ನು ನಿಯೋಜಿಸಿದ್ದು, ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಬಳಕೆದಾರರು ಬಳಸಬಹುದು.  ವೊಡಾಫೋನ್ ಐಡಿಯಾ ಬಳಕೆದಾರರು ತಮ್ಮ ಡಿವೈಸ್‌ನಲ್ಲಿ 5G ನೆಟ್‌ವರ್ಕ್ ಆಕ್ಟಿವೇಟ್ ಮಾಡಿಕೊಳ್ಳಬಹುದು.

ವೊಡಾಫೋನ್ ಐಡಿಯಾದ  5G ಸೇವೆ ಲಭ್ಯವಿರೋ ಪ್ರದೇಶಗಳು

  1. ರಾಜಸ್ಥಾನದ ಜೈಪುರ (ಗ್ಯಾಲಕ್ಸಿ ಚಿತ್ರಮಂದಿರದ ಹತ್ತಿರ, ಮಾನಸ ಸರೋವರ ಕೈಗಾರಿಕಾ ಪ್ರದೇಶ, RIICO)
  2. ಹರಿಯಾಣದ ಕರ್ನಾಲ್ (HSIIDC,ಇಂಡಸ್ಟ್ರಿಯಲ್ ಏರಿಯಾ, ಸೆಕ್ಟರ್-3)
  3. ಸೆಕ್ಟರ್ V, ಕೋಲ್ಕತ್ತಾದ ಸಾಲ್ಟ್ ಲೇಕ್
  4. ತೃಕ್ಕಾಕರ, ಕೇರಳದ ಕಾಕ್ಕನಾಡ್
  5. ಪೂರ್ವ ಉತ್ತರ ಪ್ರದೇಶದ ಲಕ್ನೋ (ವಿಭೂತಿ ಖಂಡ, ಗೋಮ್ತಿನಗರ).
  6. ಪಶ್ಚಿಮ ಯುಪಿಯಲ್ಲಿರುವ ಆಗ್ರಾ (ಜೆಪಿ ಹೋಟೆಲ್ ಹತ್ತಿರ, ಫತೇಹಾಬಾದ್ ರಸ್ತೆ)
  7. ಮಧ್ಯಪ್ರದೇಶದ ಇಂದೋರ್ (ಎಲೆಕ್ಟ್ರಾನಿಕ್ ಕಾಂಪ್ಲೆಕ್ಸ್, ಪರದೇಶಿಪುರ).
  8. ಗುಜರಾತ್‌ನ ಅಹಮದಾಬಾದ್ (ದಿವ್ಯಾ ಭಾಸ್ಕರ್ ಹತ್ತಿರ, ಕಾರ್ಪೊರೇಟ್ ರಸ್ತೆ, ಮಕರ್ಬಾ, ಪ್ರಹ್ಲಾದನಗರ)
  9. ಆಂಧ್ರಪ್ರದೇಶದ ಹೈದರಾಬಾದ್ (ಐದಾ ಉಪಲ್, ರಂಗಾ ರೆಡ್ಡಿ)
  10. ಪಶ್ಚಿಮ ಬಂಗಾಳದ ಸಿಲಿಗುರಿ (ಸಿಟಿ ಪ್ಲಾಜಾ ಸೆವೋಕ್ ರಸ್ತೆ).
  11. ಬಿಹಾರದ ಪಾಟ್ನಾ (ಅನಿಶಾಬಾದ್ ಗೋಲಂಬರ್).
  12. ವರ್ಲಿ, ಮುಂಬೈನ ಮರೋಲ್ ಅಂಧೇರಿ ಪೂರ್ವ
  13. ಕರ್ನಾಟಕದಲ್ಲಿ ಬೆಂಗಳೂರು (ಡೈರಿ ಸರ್ಕಲ್).
  14. ಪಂಜಾಬ್‌ನಲ್ಲಿ ಜಲಂಧರ್ (ಕೋಟ್ ಕಲಾನ್).
  15. ತಮಿಳುನಾಡಿನ ಚೆನ್ನೈ (ಪೆರುಂಗುಡಿ, ನೆಸಪಕ್ಕಂ).
  16. ಮಹಾರಾಷ್ಟ್ರದ ಪುಣೆ (ಶಿವಾಜಿ ನಗರ).
  17. ಓಖ್ಲಾ ಇಂಡಸ್ಟ್ರಿಯಲ್ ಏರಿಯಾ (ಹಂತ 2), ಇಂಡಿಯಾ ಗೇಟ್, ದೆಹಲಿಯ ಪ್ರಗತಿ ಮೈದಾನ

ಇದನ್ನೂ ಓದಿ: ಮುಕೇಶ್ ಅಂಬಾನಿಗೆ ನಡುಕ ಹುಟ್ಟಿಸಿದ ವೊಡಾಫೋನ್ ಐಡಿಯಾ; ಫ್ರೀ ಇಂಟರ್‌ನೆಟ್‌ನ ಸೂಪರ್ ಹೀರೋ ಪ್ಲಾನ್ ತಂದ Vi

ಪೋಸ್ಟ್‌ಪೇಯ್ಡ್ ಮತ್ತು  ಪ್ರಿಪೇಯ್ಡ್ ಪ್ಲಾನ್
ವೊಡಾಫೋನ್ ಐಡಿಯಾ ಪ್ರಿಪೇಯ್ಡ್ ಬಳಕೆದಾರರು  5G ಸೇವೆಯನ್ನು ಪಡೆದುಕೊಳ್ಳಲು 475 ರೂಪಾಯಿ ಪ್ಲಾನ್ ಆಕ್ಟಿವೇಟ್ ಮಾಡಿಕೊಳ್ಳಬೇಕಾಗುತ್ತದೆ. ಪೋಸ್ಟ್‌ಪೇಯ್ಡ್ ಬಳಕೆದಾರರು 5G ಸಂಪರ್ಕಕ್ಕಾಗಿ REDX 1101 ಯೋಜನೆಯನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು.

ಇದನ್ನೂ ಓದಿ: ಅಂಬಾನಿ ಜಿಯೋಗೆ ಆಘಾತ ಕೊಟ್ಟ ಹೊಸ ರಿಪೋರ್ಟ್; ಏನಿದು  OpenSignal ವರದಿ? ಬಚ್ಚಿಟ್ಟ ಸತ್ಯ ಬಯಲು

click me!