MSME Association Strike: ಸೋಮವಾರ ದೇಶಾದ್ಯಂತ ಕೈಗಾರಿಕೆಗಳು ಬಂದ್‌: 35 ಸಾವಿರ ಕೋಟಿ ನಷ್ಟ ಸಾಧ್ಯತೆ!

By Kannadaprabha News  |  First Published Dec 20, 2021, 8:07 AM IST

*ಕಚ್ಚಾವಸ್ತು ಬೆಲೆ ಏರಿಕೆ ವಿರುದ್ಧ ಮುಷ್ಕರ
*ಒಂದು ಗಂಟೆ ಕಾಲ ಶಾಂತಿಯುತ ಪ್ರತಿಭಟನೆ
*35 ಸಾವಿರ ಕೋಟಿ ಉತ್ಪಾದನೆ ನಷ್ಟ?


ನವದೆಹಲಿ (ಡಿ. 20) : ದೇಶದಲ್ಲಿ ಎಲ್ಲಾ ರೀತಿಯ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿರುವುದನ್ನು ವಿರೋಧಿಸಿ ಕಿರು, ಸಣ್ಣ ಮತ್ತು ಮಧ್ಯಮ ವಲಯದ (MSME) ಉದ್ಯಮಗಳು ಡಿ.20ರ ಸೋಮವಾರ ಒಂದು ದಿನ ಬೃಹತ್‌ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿವೆ. ಒಂದು ದಿನದ ಮಟ್ಟಿಗೆ ಈ ಕೈಗಾರಿಕೆಗಳು ಸ್ಥಗಿತಗೊಳ್ಳುವ ಕಾರಣ (closure of industries) ಅಂದಾಜು 35,000 ಕೋಟಿ ರು.ನಷ್ಟುಉತ್ಪಾದನಾ ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.

ಕಚ್ಚಾ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. 

Tap to resize

Latest Videos

undefined

ಈ ಕುರಿತು ಹೇಳಿಕೆ ನೀಡಿರುವ 170 ಎಂಎಸ್‌ಎಂಇ ಸಂಘಟನೆಗಳ ಒಕ್ಕೂಟವಾದ ‘ಅಖಿಲ ಭಾರತ ಎಂಎಸ್‌ಎಂಇ ಸಂಘಟನೆ’ (ಐಕಾ)ದ ಸದಸ್ಯ ಆರ್‌.ರಾಮಮೂರ್ತಿ, ‘ಕೈಗಾರಿಕೆಗಳಿಗೆ ಅಗತ್ಯವಾದ ಎಲ್ಲಾ ರೀತಿಯ ಕಚ್ಚಾ ವಸ್ತುಗಳ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಇದರ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಕೈಗಾರಿಕಾ ವಲಯದ ಉತ್ಪಾದನೆ ಮತ್ತು ದುಡಿಯುವ ಬಂಡವಾಳದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ’ ಎಂದಿದ್ದಾರೆ.

‘ಈ ವಿಷಯದಲ್ಲಿ ಗಮನ ಹರಿಸುವಂತೆ ನಾವು ಪ್ರಧಾನಿ ಮತ್ತು ಇತರೆ ಸಚಿವಾಲಯಗಳಿಗೆ ಹಲವು ಮನವಿ ಸಲ್ಲಿಸಿದ್ದೇವೆ. ಅದರೆ ಅದು ಯಾವುದೇ ಪರಿಣಾಮ ಬೀರಿಲ್ಲ. ಹೀಗಾಗಿ ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯಲು ಡಿ.20ರಂದು 10 ಲಕ್ಷ ಎಂಎಸ್‌ಎಂಇಗಳಿಗೆ ಎಲ್ಲಾ ರೀತಿಯ ಕೈಗಾರಿಕಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಕರೆ ಕೊಟ್ಟಿದ್ದೇವೆ. ಜೊತೆಗೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಕೈಗಾರಿಕೆಗಳ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಒಂದು ಗಂಟೆ ಕಾಲ ಶಾಂತಿಯುತ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಮುಖ ಬೇಡಿಕೆ ಏನು?:

ಅಲ್ಯುಮಿನಿಯಂ ಅಲಾಯ್‌, ಕ್ರಾಫ್ಟ್‌ ಪೇಪರ್‌, ತಾಮ್ರ ಮೊದಲಾದ ಕಚ್ಚಾ ವಸ್ತುಗಳ ಬೆಲೆ 2020ರ ಏಪ್ರಿಲ್‌ಗೆ ಹೋಲಿಸಿದರೆ 2021ರ ಅಕ್ಟೋಬರ್‌ಗೆ ಶೇ.100ರಷ್ಟುಹೆಚ್ಚಾಗಿದೆ. ಹೀಗಾಗಿ ದರವನ್ನು 2020ರ ಏಪ್ರಿಲ್‌ ಹಂತಕ್ಕೆ ಇಳಿಸಬೇಕು ಎಂಬುದು ಕೈಗಾರಿಕೆಗಳ ಪ್ರಮುಖ ಬೇಡಿಕೆಯಾಗಿದೆ.

ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ವಿತ್ತ ಸಚಿವರ ಬಜೆಟ್ ಪೂರ್ವ ಸಭೆ

ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಹಣಕಾಸು ವಲಯ ಹಾಗೂ ಕ್ಯಾಪಿಟಲ್ ಮಾರ್ಕೆಟ್ ಗೆ ಸಂಬಂಧಿಸಿದ ವಿವಿಧ ಪ್ರತಿನಿಧಿಗಳೊಂದಿಗೆ ಬಜೆಟ್ ಪೂರ್ವ  (Budget) ಸಮಾಲೋಚನೆಯನ್ನು ನಡೆಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ವರದಿ ಪ್ರಕಾರ ಈ ವಲಯಗಳ ಪ್ರತಿನಿಧಿಗಳು ಪ್ರಸ್ತಾವನೆಯೊಂದನ್ನು ಸಲ್ಲಿಸಿದ್ದಾರೆ ಹಾಗೂ ಅದ್ರಲ್ಲಿ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳ ನಿಯಂತ್ರಣದಲ್ಲಿ ಹೆಚ್ಚಿನ ಹೊಂದಾಣಿಕೆ ತರಬೇಕಾದ ಅಗತ್ಯವಿದೆ ಎಂಬ ವಿಷಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ.

ಆರ್ಥಿಕತೆಯ ಪ್ರಮುಖ ವಲಯಗಳಿಗೆ ಸುಸ್ಥಿರ ಹಣದ ಹರಿವು, ಕಾರ್ಪೋರೇಟ್ ಬಾಂಡ್ (Corporate bond) ಮಾರುಕಟ್ಟೆಯ ಅಭಿವೃದ್ಧಿ, ಬ್ಯಾಂಕ್(bank) ಹಾಗೂ ಇತರ ಹಣಕಾಸು ಸಂಸ್ಥೆಗಳ ನಡುವೆ ತೆರಿಗೆ ನಿಬಂಧನೆಗಳಿಗೆ ಸಂಬಂಧಿಸಿ ಸಮಾನತೆ ತರಬೇಕಾದ ಅಗತ್ದದ ಬಗ್ಗೆ ಕೂಡ ಸಮಾಲೋಚನಾ ಸಭೆಯಲ್ಲಿ ಚರ್ಚಿಸಲಾಯಿತು. ಹಣಕಾಸು ಸಚಿವರು(Finance Minister) ಕೈಗಾರಿಕಾ ಸಂಸ್ಥೆಗಳು(Industries) ಮೂಲಸೌಕರ್ಯ (Infrastructure)) ಹಾಗೂ ಹವಾಮಾನ ವೈಪರೀತ್ಯಕ್ಕೆ (Climate change) ಸಂಬಂಧಿಸಿದ ತಜ್ಞರ ಜೊತೆ ಕೂಡ ಸಭೆ ನಡೆಸಿದ್ದಾರೆ.

ಇದನ್ನೂ ಓದಿ:

1) Defence Salary Package Scheme ಭಾರತೀಯ ಸೇನಾ ಯೋಧರು, ಕುಟುಂಬದ ರಕ್ಷಣಾ ಪ್ಯಾಕೇಜ್ ನವೀಕರಿಸಿದ SBI!

2) Government Stake in PSU Banks: ಬ್ಯಾಂಕಿಂಗ್‌ ಕಾಯ್ದೆ ತಿದ್ದುಪಡಿಗೆ ಮೋದಿ ಪ್ಲಾನ್‌: ಸರ್ಕಾರದ ಪಾಲು 26%?

3) Income From Foreign Satellite:ವಿದೇಶಿ ಉಪಗ್ರಹ ಉಡಾವಣೆಯಿಂದ ಭಾರತಕ್ಕೆ 35 ಮಿಲಿಯನ್ ಡಾಲರ್ ಆದಾಯ

click me!