ಪಿಎಫ್‌ ಬಡ್ಡಿದರ ಶೇ. 8.25ಕ್ಕೆ ಹೆಚ್ಚಳ : 3 ವರ್ಷದ ಗರಿಷ್ಠ

By Kannadaprabha News  |  First Published Feb 11, 2024, 10:18 AM IST

2023-24ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15ರಿಂದ ಶೇ.8.25ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಶನಿವಾರ ತನ್ನ ನಿರ್ಧಾರ ಪ್ರಕಟಿಸಿದೆ. ಶೇ.8.25ರ ಬಡ್ಡಿ ದರವು 3 ವರ್ಷದ ಗರಿಷ್ಠವಾಗಿದೆ.


ನವದೆಹಲಿ: 2023-24ನೇ ಸಾಲಿಗೆ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.8.15ರಿಂದ ಶೇ.8.25ಕ್ಕೆ ಹೆಚ್ಚಿಸಲಾಗಿದೆ. ಈ ಕುರಿತು ನಿವೃತ್ತಿ ನಿಧಿ ಸಂಸ್ಥೆ ಇಪಿಎಫ್‌ಒ ಶನಿವಾರ ತನ್ನ ನಿರ್ಧಾರ ಪ್ರಕಟಿಸಿದೆ. ಶೇ.8.25ರ ಬಡ್ಡಿ ದರವು 3 ವರ್ಷದ ಗರಿಷ್ಠವಾಗಿದೆ.

2021-22ನೇ ಸಾಲಿನಲ್ಲಿ ಶೇ.8.10 ಇದ್ದ ಬಡ್ಡಿ ದರವನ್ನು ಇಪಿಎಫ್‌ಒ, 2022-23ರಲ್ಲಿ ಶೇ.8.15ಕ್ಕೆ ಹೆಚ್ಚಿಸಿತ್ತು. ಈಗ ಮತ್ತೆ ಶೇ.0.10ರಷ್ಟು ಹೆಚ್ಚಿಸಿ ಭವಿಷ್ಯ ನಿಧಿ ಚಂದಾದಾರರಿಗೆ ಖುಷಿಯ ಸಮಾಚಾರ ನೀಡಿದೆ. ಪರಿಷ್ಕೃತ ದರವನ್ನು ಒಪ್ಪಿಗೆಗಾಗಿ ಹಣಕಾಸು ಸಚಿವಾಲಯಕ್ಕೆ ಕಳಿಸಲಾಗುತ್ತದೆ. ಸರ್ಕಾರದ ಅನುಮೋದನೆಯ ನಂತರ, 2023-24ರ ಬಡ್ಡಿ ದರ 6 ಕೋಟಿ ಚಂದಾದಾರರ ಖಾತೆಗಳಿಗೆ ಜಮೆ ಆಗಲಿದೆ. ಇದಕ್ಕೂ ಮುನ್ನ 2022ರ ಮಾರ್ಚ್‌ನಲ್ಲಿ, ಶೇ.8.5 ಇದ್ದ ಬಡ್ಡಿ ದರವನ್ನು ಶೇ.8.1ಕ್ಕೆ ಇಪಿಎಫ್‌ಒ ಇಳಿಸಿತ್ತು. ಇದು 1977-78ರ ನಂತರದ ಅತಿ ಕನಿಷ್ಠ ಬಡ್ಡಿ ದರವಾಗಿತ್ತು. ಇದು ನೌಕರರ ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿತ್ತು.

Tap to resize

Latest Videos

ಪಿಎಫ್‌ ವಿತ್‌ಡ್ರಾ ವಿಚಾರವಾಗಿ ಬಿಗ್‌ ಅಪ್‌ಡೇಟ್‌ ನೀಡಿದ EPFO!

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) ಚಂದಾದಾರರಿಗೆ ದೊಡ್ಡ ಅಪ್‌ಡೇಟ್‌ ನೀಡಿದೆ. ಕೋವಿಡ್‌-19 ಸಂದರ್ಭದಲ್ಲಿ ಪ್ರಾರಂಭ ಮಾಡಲಾಗಿದ್ದ ದೊಡ್ಡ ಸೌಲಭ್ಯವನ್ನು ಇಪಿಎಫ್‌ಓ ಮುಚ್ಚಿದೆ. ಅದರೊಂದಿಗೆ, ಇಪಿಎಫ್‌ಒ ಪಿಎಫ್ ಖಾತೆಗಳನ್ನು ಫ್ರೀಜ್ ಮಾಡಲು ಮತ್ತು ಡಿ-ಫ್ರೀಜ್ ಮಾಡಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಅನ್ನು ಬಿಡುಗಡೆ ಮಾಡಿದೆ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು, ಸರ್ಕಾರವು ನೌಕರರಿಗೆ ಕೋವಿಡ್‌-19 ಮುಂಗಡ ಹಣವನ್ನು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ನೀಡಿತ್ತು. ಇದರ ಅಡಿಯಲ್ಲಿ, ಯಾವುದೇ ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯಿಂದ ಅಗತ್ಯವಿರುವ ಸಂದರ್ಭದಲ್ಲಿ ಕೋವಿಡ್ ಮುಂಗಡವಾಗಿ ಹಣವನ್ನು ಹಿಂಪಡೆಯಬಹುದಾಗಿತ್ತು. ಎಕನಾಮಿಕ್ ಟೈಮ್ಸ್ ವರದಿ ಮಾಡಿರುವ ಪ್ರಕಾರ,  ಈಗ ಈ ಸೌಲಭ್ಯವನ್ನು ನಿಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ಯಾವುದೇ ಅಧಿಸೂಚನೆಯನ್ನು ಹೊರಡಿಸದಿದ್ದರೂ, ಸಾಫ್ಟ್‌ವೇರ್‌ನಲ್ಲಿ ಮರುಪಾವತಿಸಲಾಗದ ಕೋವಿಡ್ ಮುಂಗಡ ಆಯ್ಕೆಯನ್ನು ನಿಲ್ಲಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಆದ್ದರಿಂದ ಖಾತೆದಾರರು ಅದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.

ನಿಮ್ಮ ವೇತನದಿಂದ ಕಡಿತಗೊಳಿಸಿದ ಪಿಎಫ್ ಮೊತ್ತವನ್ನು ಕಂಪನಿ ಇಪಿಎಫ್ ಒಗೆ ಜಮೆ ಮಾಡಿಲ್ವಾ? ಹಾಗಾದ್ರೆ ಹೀಗೆ ಮಾಡಿ..

ಕೋವಿಡ್-19 ಅಡ್ವಾನ್ಸ್ ಫಂಡ್ ಹಿಂಪಡೆಯುವಿಕೆಯೊಂದಿಗೆ, ಇಪಿಎಫ್‌ಒ ಮತ್ತೊಂದು ಹೊಸ ನಿಯಮವನ್ನು ಪರಿಚಯಿಸಿದೆ. ಸಂಸ್ಥೆಯು ಖಾತೆಗಳನ್ನು ಫ್ರೀಜ್ ಮಾಡಲು ಮತ್ತು ಡಿ-ಫ್ರೀಜ್ ಮಾಡಲು SOP ನೀಡಿದೆ. ಇದರ ಅಡಿಯಲ್ಲಿ, ಫ್ರೀಜ್ ಮಾಡಿದ ಖಾತೆಯನ್ನು ಪರಿಶೀಲಿಸುವ ಸಮಯ ಮಿತಿಯನ್ನು 30 ದಿನಗಳವರೆಗೆ ಸೀಮಿತಗೊಳಿಸಲಾಗಿದೆ. ಆದಾಗ್ಯೂ, ಈ ಗಡುವನ್ನು ಇನ್ನೂ 14 ದಿನಗಳವರೆಗೆ ವಿಸ್ತರಿಸಲು ಅವಕಾಶವಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಅವಧಿಯಲ್ಲಿ ಫ್ರೀಜ್ ಮಾಡಲು ಅಥವಾ ಡಿ-ಫ್ರೀಜ್ ಮಾಡಲು ನೀವು ಖಾತೆಯನ್ನು ಪರಿಶೀಲಿಸುವುದು ಕಡ್ಡಾಯವಾಗಿರುತ್ತದೆ.

ವಂಚನೆಯನ್ನು ನಿಲ್ಲಿಸಬಹುದು: ಖಾತೆಗಳ ಫ್ರೀಜ್ ಅಥವಾ ಡಿ-ಫ್ರೀಜಿಂಗ್‌ಗಾಗಿ ನೀಡಲಾದ SOP ಯೊಂದಿಗೆ ವಂಚನೆಯನ್ನು ತಡೆಯಬಹುದು. ಯಾವುದೇ ಖಾತೆಯಲ್ಲಿ ಹಣವನ್ನು ಸುರಕ್ಷಿತವಾಗಿರಿಸುವುದು ಅವಶ್ಯಕ ಎಂಬುದು ಮೊದಲ ಮತ್ತು ಪ್ರಮುಖ ವಿಷಯ ಎಂದು ಎಸ್ಒಪಿ ದಾಖಲೆಯಲ್ಲಿ ಹೇಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪರಿಶೀಲನೆಯ ನಂತರ, ಖಾತೆಯನ್ನು ಹೊಂದಿರುವ ವ್ಯಕ್ತಿ ಮಾತ್ರ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ.

ಲಾಭ ಗಳಿಸುವ government ಷೇರುಗಳಿವು, ಡಿವಿಡೆಂಡ್‌ಗೂ ಬೆಸ್ಟ್‌, ಗ್ರೋತ್‌ಗೂ ಬೆಸ್ಟ್‌!

click me!