ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ನಿಷೇಧ ಹೇರಿದ ಇಪಿಎಫ್ಒ; ಈ ಬ್ಯಾಂಕ್ ಖಾತೆ ಹೊಂದಿರೋ ಇಪಿಎಫ್ ಸದಸ್ಯರೇನು ಮಾಡ್ಬೇಕು?

By Suvarna NewsFirst Published Feb 10, 2024, 4:46 PM IST
Highlights

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಇಪಿಎಫ್ಒ ಕೂಡ ಈ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಕ್ಲೇಮ್ ಗಳನ್ನು ಸ್ವೀಕರಿಸದಂತೆ ಅಧಿಕಾರಿಗಳಿಗೆ ಸೂಚಿಸಿದೆ. 

ನವದೆಹಲಿ (ಫೆ.10): ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಆರ್ ಬಿಐ ನಿರ್ಬಂಧಗಳನ್ನು ವಿಧಿಸಿದ ಬೆನ್ನಲ್ಲೇ ಗ್ರಾಹಕರು ಈ ಬ್ಯಾಂಕ್ ಹಾಗೂ ಪೇಟಿಎಂ ಅಪ್ಲಿಕೇಷನ್ ನಿಂದ ದೂರ ಸರಿಯುತ್ತಿದ್ದಾರೆ. ಈ ನಡುವೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಅನ್ನು ನಿರ್ಬಂಧಿಸಲು ಮುಂದಾಗಿದ್ದು, ಇದು ಅನೇಕ ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಇಪಿಎಫ್ ಒ ಸುಮಾರು 30 ಕೋಟಿ ಅಧಿಕಾರಿಗಳನ್ನು ಒಳಗೊಂಡಿದ್ದು, ಪೇಟಿಎಂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಕ್ಲೇಮ್ ಗಳನ್ನು ಸ್ವೀಕರಿಸದಂತೆ ಸೂಚಿಸಿದೆ. ಫೆಬ್ರವರಿ 29ರ ಬಳಿಕ ಹೊಸ ಠೇವಣಿ ಸ್ವೀಕರಿಸೋದನ್ನು 
ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್ ಬಿಐ ಸೂಚಿಸಿದ ಬೆನ್ನಲ್ಲೇ ಇಪಿಎಫ್ಒ ಕೂಡ ಈ ಬ್ಯಾಂಕ್ ಖಾತೆಗಳಿಗೆ ಲಿಂಕ್ ಆಗಿರುವ ಕ್ಲೇಮ್ ನಿರಾಕರಣೆಗೆ ಮುಂದಾಗಿದೆ. ಒಂದು ವರ್ಷದ ಹಿಂದಷ್ಟೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹಾಗೂ ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಪಾವತಿ ಮಾಡಲು ಇಪಿಎಫ್ಒ ಅವಕಾಶ ಕಲ್ಪಿಸಿತ್ತು.

ಇಪಿಎಫ್ಒ ಚಂದಾದಾರರ ಮೇಲೆ ಪರಿಣಾಮವೇನು?
ಇಪಿಎಫ್ ಒ ನಿರ್ಬಂಧದಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಇಪಿಎಫ್ಒ ಸದಸ್ಯರಿಗೆ ವಿತ್ ಡ್ರಾ ಹಾಗೂ ಕ್ರೆಡಿಟ್ ವರ್ಗಾವಣೆ ಕಷ್ಟವಾಗುತ್ತದೆ. ಇಪಿಎಫ್ ಒ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹಾಗೂ ಏರ್ ಟೆಲ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಪಾವತಿಗೆ ಇಪಿಎಫ್ಒ ಅವಕಾಶ ನೀಡಿದ ಒಂದು ವರ್ಷದ ಬಳಿಕ ಇಂಥದೊಂದು ನಿರ್ಧಾರ ಕೈಗೊಂಡಿದೆ. ಇನ್ನು ಇಪಿಎಫ್ಒ ಠೇವಣಿ ಪಡೆಯಲು ಚಂದಾದಾರರು ಬ್ಯಾಂಕ್ ಖಾತೆ ಮಾಹಿತಿಗಳನ್ನು ಅಪ್ಡೇಟ್ ಮಾಡೋದು ಕೂಡ ಅಗತ್ಯ.

ಪೇಟಿಎಂಗೆ ವ್ಯಾಪಾರಿಗಳ ಗುಡ್ ಬೈ;ಬೇರೆ ಪೇಮೆಂಟ್ ಆ್ಯಪ್ ಬಳಸಲಾರಂಭಿಸಿದ ಶೇ.42ರಷ್ಟು ಕಿರಾಣಿ ಅಂಗಡಿಗಳು!

ಇನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಕೈಗೊಂಡಿರುವ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರೀಯ ಬ್ಯಾಂಕ್ ಗರ್ವನ್ ಶಕ್ತಿಕಾಂತ್ ದಾಸ್, 'ಈ ಕ್ಷಣದಲ್ಲಿ ವ್ಯವಸ್ಥೆಯ ಬಗ್ಗೆ ಯಾವುದೇ ಚಿಂತೆಯಿಲ್ಲ. ಇಲ್ಲಿ ನಾವು ನಿರ್ದಿಷ್ಟ ಸಂಸ್ಥೆ, ನಿರ್ದಿಷ್ಟ ಪಾವತಿ ಬ್ಯಾಂಕ್ ಬಗ್ಗೆ ಮಾತನಾಡುತ್ತಿದ್ದೇವೆ. ಇಂಥ ಮೇಲ್ವಿಚಾರಣಾ ಕ್ರಮಗಳು ಕೆಲವು ತಿಂಗಳುಗಳ ಕಾಲ ಇರುತ್ತವೆ. ಹಾಗೆಯೇ ಅನೇಕ ವರ್ಷಗಳ  ದ್ವಿಪಕ್ಷೀಯ ಕ್ರಮಗಳಅಗತ್ಯ ಕೂಡ ಇರುತ್ತದೆ. ಇಲ್ಲಿ ನಾವು ಕೇವಲ ಕೊರತೆಗಳನ್ನು ಮಾತ್ರ ಹುಡುಕಿ ಹೇಳೋದಿಲ್ಲ ಬದಲಿಗೆ ಸಮರ್ಪಕ ಕ್ರಮಗಳನ್ನು ಕೈಗೊಳ್ಳಲು ಅಗತ್ಯಕ್ಕಿಂತ ಹೆಚ್ಚಿನ ಸಮಯ ನೀಡುತ್ತೇವೆ' ಎಂದಿದ್ದಾರೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಡೆಪ್ಯುಟಿ ಗವರ್ನರ್ ಸ್ವಾಮಿನಾಥನ್ ಜೆ, ಈ ನಿರ್ಧಾರದಿಂದ ಪೇಟಿಎಂ ಆಪ್ ಗೆ ಯಾವುದೇ ತೊಂದರೆಯಾಗೋದಿಲ್ಲ. ಈ ಕ್ರಮ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ. ಇದನ್ನು ಪೇಟಿಎಂ ಆಪ್ ಜೊತೆಗೆ ಗೊಂದಲ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಈಗಾಗಲೇ ಪೇಟಿಎಂ ಆಪ್ ಬಳಕೆದಾರರು ಬೇರೆ ಪಾವತಿ ಆಪ್ ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಪೇಟಿಎಂ ಪಾವತಿ ಆಪ್ ಕೂಡ ಸಂಕಷ್ಟಕ್ಕೆ ಸಿಲುಕಿದೆ. 

ಆರ್‌ಬಿಐ ಕ್ರಮದ ಬೆನ್ನಲ್ಲಿಯೇ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ನಿರ್ದೇಶಕ ಮಂಡಳಿಯ ಸದಸ್ಯ ರಾಜೀನಾಮೆ!

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌, ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಿರುವ One 97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾಗಿದ್ದು, ಇದರಲ್ಲಿ ಶೇ. 49ರಷ್ಟು ಪಾಲನ್ನು ಹೊಂದಿದೆ. ಪೇಮೆಂಟ್ಸ್‌ ಬ್ಯಾಂಕ್‌ಗೆ 2 ಲಕ್ಷ ರೂಪಾಯಿ ತನಕ ಸಣ್ಣ ಠೇವಣಿಗಳನ್ನು ತೆಗೆದುಕೊಳ್ಳಲು ಅನುಮತಿಸಲಾಗಿದೆ. ಕೆಲವು ವರದಿಗಳ ಪ್ರಕಾರ ಈ ಘಟಕಗಳಿಗೆ ನೇರವಾಗಿ ಸಾಲ ನೀಡಲು ಅನುಮತಿಸಲಾಗುವುದಿಲ್ಲ, ಆದರೆ ಸಾಲದ ಉತ್ಪನ್ನಗಳನ್ನು ಸುಗಮಗೊಳಿಸಬಹುದು ಮತ್ತು ಮಾರಾಟ ಮಾಡಬಹುದು ಎಂದು ಹೇಳಲಾಗಿದೆ. 

click me!