ಹೊಸ ತಿಂಗಳ ಭರ್ಜರಿ ಶುಭಾರಂಭ: ಇಳಿದ ಚಿನ್ನ, ಬೆಳ್ಳಿ ಬೆಲೆ!

By Web Desk  |  First Published Oct 1, 2019, 2:48 PM IST

ಹೊಸ ತಿಂಗಳ ಮೊದಲ ದಿನವೇ ಇಳಿದ ಚಿನ್ನದ ಬೆಲೆ| MCXನಲ್ಲ ಶೇ.0.1ರಷ್ಟು ಕುಸಿತ ಕಂಡ ಚಿನ್ನದ ಬೆಲೆ| 22 ಕ್ಯಾರೆಟ್ ಚಿನ್ನದ ಬೆಲೆ ಇದೀಗ 37,280 ರೂ.| MCXನಲ್ಲ ಶೇ.0.1ರಷ್ಟು ಕುಸಿತ ಕಂಡ ಬೆಳ್ಳಿ ಬೆಲೆ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಶೇ.0.1ರಷ್ಟು ಇಳಿಕೆ| ಅಮೆರಿಕ-ಚೀನಾ ನಡುವಿನ ವಾಣಿಜ್ಯ ಯುದ್ಧದ ಭೀತಿ ಕಡಿಮೆ|


ನವದೆಹಲಿ(ಅ.01): ನಿರಂತರವಾಗಿ ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಹೊಸ ತಿಂಗಳ ಆರಂಭದ ದಿನದಲ್ಲೇ ಇಳಿಕೆ ಕಂಡು ಬಂದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್ ನಲ್ಲಿ ಚಿನ್ನದ ಬೆಲೆಯಲ್ಲಿ ಶೇ.0.1ರಷ್ಟು ಕುಸಿತ ಕಂಡಿದೆ.

ಅದರಂತೆ 22 ಕ್ಯಾರೆಟ್ ಚಿನ್ನದ ಬೆಲೆ ಇದೀಗ 37,280 ರೂ. ಆಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವಚ ನಿರೀಕ್ಷೆ ಇದೆ ಎನ್ನಲಾಗಿದೆ.

Latest Videos

ಇನ್ನು ಬೆಳ್ಳಿ ಬೆಲೆಯಲ್ಲೂ ಶೇ.0.1ರಷ್ಟು ಇಳಿಕೆ ಕಂಡು ಬಂದಿದ್ದು, ಒಂದು ಕೆಜಿ ಬೆಳ್ಳಿ ಬೆಲೆ 44,070 ರೂ. ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಶೇ.0.1ರಷ್ಟು ಕಡಿಮೆಯಾಗಿದ್ದು, ಪ್ರತಿ ಔನ್ಸ್ ಚಿನ್ನದ ಬೆಲೆ 1,470.28  ಡಾಲರ್ ಆಗಿದೆ.

ಅಮೆರಿಕ-ಚೀನಾ ನಡುವಿನ ವಾಣಿಜ್ಯ ಯುದ್ಧದ ಭೀತಿ ಕಡಿಮೆಯಾಗುತ್ತಿದ್ದು, ಅಂತಾರಾಷ್ಟ್ರೀಯ ವಹಿವಾಟಿನಲ್ಲಿ ಚೇತರಿಕೆ ಕಂಡುಬರುವ ಲಕ್ಷಣಗಳು ಗೋಚರವಾಗುತ್ತಿದೆ.

ಅಕ್ಟೋಬರ್ 01ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

click me!