
ಸತತ ಪರಿಶ್ರಮ, ಹೋರಾಟದಿಂದ ಗೆಲುವು ಸಾಧ್ಯ ಎಂಬ ಮಾತನ್ನು ನೀವು ಎಲ್ಲರ ಬಾಯಿಂದ ಕೇಳಬಹುದು. ಸಲಹೆ ಪುಕ್ಕಟ್ಟೆ ಸಿಗುತ್ತೆ. ಅದೇ ಅದನ್ನು ಜಾರಿಗೆ ತರೋದು ಸುಲಭವಲ್ಲ. ಎಷ್ಟು ಬಾರಿ ಬಿದ್ದರೂ ಎದ್ದು ನಿಂತು, ಬಟ್ಟೆಗಾದ ಕೊಳೆಯನ್ನು ಕೊಡವಿ ಮತ್ತೆ ಬೀಳೋದು ಹೇಳಿದಷ್ಟು ಸುಲಭವೇ ಅಲ್ಲ. ಒಬ್ಬ ವ್ಯಕ್ತಿಯ ಬಳಿ ನಾವು ಸಹಾಯ ಕೇಳಿದಾಗ ಆತ ನೋ ಅಂದ್ರೆ ನಮಗೆ ಅವಮಾನವಾಗುತ್ತೆ. ಇನ್ನೊಬ್ಬರ ಬಳಿ ಹೋಗುವ ಧೈರ್ಯ ಮಾಡೋದಿಲ್ಲ. ನಮ್ಮ ಆಲೋಚನೆಯನ್ನು ಮೂರ್ನಾಲ್ಕು ಜನರು ಅಲ್ಲಗಳೆದ್ರೆ, ಅದಕ್ಕೆ ಮಾನ್ಯತೆ ನೀಡದೆ ಹೋದ್ರೆ ಅಲ್ಲಿಗೆ ನಮ್ಮ ಪ್ಲಾನ್ ಸಮಾಧಿ ಆದಂತೆ. ನಾಲ್ಕೈದು ಜನರಿಂದ ತಿರಸ್ಕರಿಸಿದೆ ಅಂದ್ಮೇಲೆ ಅದು ಸರಿಯಿಲ್ಲ ಎನ್ನುವ ನಿರ್ಧಾರಕ್ಕೆ ನಾವೇ ಬರ್ತೇವೆ. ಮತ್ತೊಮ್ಮೆ ನಮ್ಮ ಆ ಆಲೋಚನೆ ಬಗ್ಗೆ ಯೋಚನೆ ಮಾಡಲು ಹೋಗೋದಿಲ್ಲ. ಆದ್ರೆ ಈ ವ್ಯಕ್ತಿ ತನ್ನ ಆಲೋಚನೆ, ನಿರ್ಧಾರಕ್ಕೆ ಗಟ್ಟಿಯಾಗಿ ನಿಂತಿದ್ದ. ಅದೆಷ್ಟೋ ಮಂದಿ ಆಸಕ್ತಿ ತೋರದೆ ಇದ್ರೂ ಒಂದಲ್ಲ ಒಂದು ದಿನ ನನ್ನ ನಿರ್ಧಾರವೇ ಗೆಲ್ಲೋದು ಎಂಬ ಅಚಲ ನಂಬಿಕೆ ಆತನಲ್ಲಿತ್ತು. ಅದು ನೂರಕ್ಕೆ ನೂರು ಸತ್ಯವೂ ಆಯ್ತು. ಹಣ ಹೂಡಲು ಒಂದಲ್ಲ ಎರಡಲ್ಲ ನೂರಾ ಐವತ್ತು ಜನರ ಬಳಿ ಹೋಗಿದ್ದ ವ್ಯಕ್ತಿ ಈಗ 64 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯದ ಕಂಪನಿ ಆಳ್ತಿದ್ದಾರೆ.
ನಾವು ಹೇಳ್ತಿರೋದು Dream11 ಕಂಪನಿ ಸಂಸ್ಥಾಪಕ ಹರ್ಷ ಜೈನ್ (Harsh Jain) ಬಗ್ಗೆ. 2008 ರಲ್ಲಿ ದೇಶದಲ್ಲಿ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಶುರುವಾದಾಗ ಹರ್ಷ ಜೈನ್ ಅವರಿಗೆ ಇದ್ರ ಬಗ್ಗೆ ಆಲೋಚನೆ ಬಂತು. ತಮ್ಮ ಪ್ಲಾನ್ ಹಿಡಿದು ಅನೇಕ ಹೂಡಿಕೆದಾರರ ಬಳಿ ಹೋದ್ರು. ಒಂದು, ಎರಡು ಹೀಗೆ ನೂರಾ ಐವತ್ತು ಮಂದಿ ಅವರ ಪ್ಲಾನ್ ಗೆ ಹಣ ಹೂಡಲು ನಿರಾಕರಿಸಿದರು. ಇದ್ರಿಂದ ಹರ್ಷ ಜೈನ್ ಬೇಸರಗೊಳ್ಳಲಿಲ್ಲ. ತಮ್ಮ ಯೋಜನೆ ಫಲ ನೀಡುತ್ತದೆ ಎನ್ನುವ ದೃಢ ವಿಶ್ವಾಸದಲ್ಲಿದ್ದ ಅವರು, ತಾವು ಕೂಡಿಟ್ಟ ಹಣವನ್ನೇ ಹೂಡಿಕೆ ಮಾಡಿ Dream11 ಶುರು ಮಾಡಿದ್ರು. 2014 ರಲ್ಲಿ ಮೊದಲ ಬಾರಿಗೆ Dream11 ಶುರುವಾಯ್ತು. ಇದು ಫ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್ ಆಗಿದೆ. ಇದ್ರಲ್ಲಿ ಬಳಕೆದಾರರು, ಕ್ರಿಕೆಟ್, ಫುಟ್ಬಾಲ್, ಹಾಕಿ ಸೇರಿದಂತೆ ಅನೇಕ ಆಟಗಳನ್ನು ಆಡಬಹುದಾಗಿದೆ.
ನದಿ ಸ್ವಚ್ಛಗೊಳಿಸುವ ಈ ಯಂತ್ರ ರೆಡಿ ಮಾಡೋರಿದ್ದೀರಾ: ಇನ್‌ವೆಸ್ಟ್ ಮಾಡ್ತಾರಂತೆ ಆನಂದ್ ಮಹೀಂದ್ರಾ
ಫ್ಯಾಂಟಸಿ ಗೇಮಿಂಗ್ ಅಪ್ಲಿಕೇಶನ್ Dream11 ಶುರುವಾದ ಮೊದಲ ವರ್ಷವೇ ಅದ್ಭುತ ಯಶಸ್ಸು ಕಂಡಿತು. ಮೊದಲ ವರ್ಷದಲ್ಲೇ ಬಳಕೆದಾರರ ಸಂಖ್ಯೆ 10 ಲಕ್ಷ ತಲುಪಿತ್ತು. 2018 ರ ಹೊತ್ತಿಗೆ ಬಳಕೆದಾರರ ಸಂಖ್ಯೆ 4.5 ಕೋಟಿ ದಾಟಿತ್ತು. ಪ್ರಸ್ತುತ ಬಳಕೆದಾರರ ಸಂಖ್ಯೆ 20 ಕೋಟಿಯಷ್ಟಿದೆ. ಹರ್ಷ ಜೈನ್ ಮುಂಬೈನಲ್ಲಿ ನೆಲೆಸಿದ್ದಾರೆ. ಮುಂಬೈನ ಪೆದ್ದಾರ್ ರಸ್ತೆಯಲ್ಲಿ 72 ಕೋಟಿ ಮೌಲ್ಯದ ಐಷಾರಾಮಿ ಡ್ಯೂಪ್ಲೆಕ್ಸ್ ಮನೆಯನ್ನು ಹರ್ಷ ಜೈನ್ ಹೊಂದಿದ್ದಾರೆ.
ಮಗನ ಕಾರಣಕ್ಕೆ ಅರೆ ಕ್ಷಣದಲ್ಲಿ ಲಕ್ಷಾಧಿಪತಿಯಾದ ತಂದೆ! ಹಣ ಖರ್ಚು ಮಾಡೋದನ್ನು ಇವನಿಂದ ಕಲಿಬೇಕು
ಹರ್ಷ ಜೈನ್ ಕಂಪನಿ Dream11 ಗೆ ಭವಿತ್ ಪಾಲುದಾರರಾಗಿದ್ದಾರೆ. 2019ರಲ್ಲಿ ಕಂಪನಿ ಮಾರುಕಟ್ಟೆ ಮೌಲ್ಯ ಒಂದು ಬಿಲಿಯನ್ ಡಾಲರ್ ದಾಟಿದ ಕಾರಣಕ್ಕೆ ಕಂಪನಿ ಯುನಿಕಾರ್ನ್ ಆಯ್ತು. ಹರ್ಷ ಜೈನ್ ಅಲ್ಲಿಗೇ ತಮ್ಮ ಕೆಲಸ ನಿಲ್ಲಿಸಲಿಲ್ಲ. 2020ರಲ್ಲಿ ಅವರು ಐಪಿಎಲ್ ಪ್ರಾಯೋಜಕತ್ವ ಪಡೆದರು. ಈಗ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಸ್ಪಾನ್ಸರ್ ಮಾಡುವ ಹಕ್ಕು ಪಡೆದಿದೆ. Dream11 ಮಾರುಕಟ್ಟೆ ಮೌಲ್ಯ 64 ಸಾವಿರ ಕೋಟಿ ಇದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.