ಷೇರು ಮಾರುಕಟ್ಟೆಯಲ್ಲಿ ಪಾತಾಳಕ್ಕೆ ಕುಸಿದ ಪೇಟಿಎಂ, 'ಭಯಬೇಡ..' ಎಂದ ಸಿಇಒ!

By Santosh Naik  |  First Published Feb 2, 2024, 12:44 PM IST

ಆರ್‌ಬಿಐ ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಮೇಲೆ ಪ್ರಮುಖ ವ್ಯಾಪಾರ ನಿರ್ಬಂಧ ವಿಧಿಸಿದ ಬೆನ್ನಲ್ಲಿಯೇ ಷೇರು ಮಾರುಕಟ್ಟೆಯಲ್ಲಿ ಸತತ 2ನೇ ದಿನ ಪೇಟಿಎಂ ಕಂಪನಿಯ ಷೇರುಗಳು ಲೋವರ್‌ ಸರ್ಕ್ಯೂಟ್‌ ಮುಟ್ಟಿವೆ. 
 


ಬೆಂಗಳೂರು (ಫೆ.2): ಜನವರಿ 31ರ ವೇಳೆಗೆ ಪ್ರತಿ ಷೇರಿಗೆ 762 ರೂಪಾಯಿಯಂತೆ ಮಾರಾಟವಾಗುತ್ತಿದ್ದ ಪೇಟಿಎಂ ಪೇರುಗಳು ಶುಕ್ರವಾರದ ವೇಳೆಗೆ 487ರ ಹಾಗೆ ಮಾರಾಟವಾಗುತ್ತಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಪೇಟಿಎಂನಲ ಪೇಮೆಂಟ್ಸ್‌ ಬ್ಯಾಂಕ್‌ ಮೇಲೆ ಪ್ರಮುಖ ವ್ಯಾಪಾರ ನಿರ್ಬಂಧ ವಿಧಿಸಿದ ಬೆನ್ನಲ್ಲಿಯೇ ಸತತ 2ನೇ ದಿನ ಪೇಟಿಎಂ ಕಂಪನಿಯ ಷೇರುಗಳು ಲೋವರ್‌ ಸರ್ಕ್ಯೂಟ್‌ ಮುಟ್ಟಿದೆ. ಕಳೆದ ಐದು ದಿನಗಳಲ್ಲಿ ಪೇಟಿಎಂ ಕಂಪನಿಯ ಷೇರುಗಳು ಶೇ. 36ರಷ್ಟು ಅಂದರಡ 274 ರೂಪಾಯಿಯಷ್ಟು ಕುಸಿದಿದ್ದು, ಹೆಚ್ಚಿನ ರಿಟೇಲ್‌ ಹೂಡಿಕೆದಾರರು ನಷ್ಟ ಅನುಭವಿಸಿದ್ದಾರೆ. ಎರಡೂವರೆ ವರ್ಷಗಳ ಹಿಂದೆ ಪೇಟಿಎಂನ ಮಾತೃ ಕಂಪನಿ ಷೇರು ಮಾರುಕಟ್ಟೆಯಲ್ಲಿ ಕಂಪನಿಯನ್ನು ಲಿಸ್ಟ್‌ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲಿಯೇ ಪ್ರತಿ ಷೇರಿಗೆ 2150 ರೂಪಾಯಿ ಬೆಲೆ ನಿಗದಿ ಮಾಡಿತ್ತು. ಪೇಟಿಎಂ ಕಂಪನಿಯ ಮೌಲ್ಯಕ್ಕೆ ಇದು ಹೆಚ್ಚಿನ ಬೆಲೆ ಎಂದು ಹೆಚ್ಚಿನ ಹೂಡಿಕೆದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದರಂತೆ ಲಿಸ್ಟಿಂಗ್‌ ಆದ ವರ್ಷವೇ ಭಾರೀ ಕುಸಿದ ಕಂಡಿದ್ದ ಪೇಟಿಎಂ, ಎರಡು ತಿಂಗಳ ಹಿಂದೆ ಕಂಪನಿಯ ದೊಡ್ಡ ಹೂಡಿಕೆದಾರರಾಗಿದ್ದ ವಾರನ್‌ ಬಫೆಟ್‌ ನೇತೃತ್ವದ ಬರ್ಕ್‌ಷೈರ್‌ ಹಾಥ್‌ವೇ ಕಂಪನಿ ನಿರ್ಗಮಿಸಿದಾಗ ಇನ್ನಷ್ಟು ಆಘಾತ ಕಂಡಿತ್ತು. ಬರ್ಕ್‌ಷೈರ್‌ ಹಾಥ್‌ವೇ 600 ಕೋಟಿ ರೂಪಾಯಿ ನಷ್ಟದೊಂದಿಗೆ ಪೇಟಿಎಂನಿಂದ ನಿರ್ಗಮಿಸಿತ್ತು. ಇದರ ಬೆನ್ನಲ್ಲಿಯೇ ಈಗ ಆರ್‌ಬಿಐನ ನಿರ್ಬಂಧ ಬಂದಿದ್ದು ಪೇಟಿಎಂಗೆ ಇನ್ನಷ್ಟು ಆಘಾತ ನೀಡಿದಂತಾಗಿದೆ.

ಆರ್‌ಬಿಐ ವ್ಯಾಪಾರ ನಿರ್ಬಂಧದ ಬಗ್ಗೆ ಮಾತನಾಡಿರುವ ಪೇಟಿಎಂ ಕಂಪನಿಯ ಸಿಇಒ ವಿಜಯ್‌ ಶೇಖರ್‌, 'ನನ್ನ ಎಲ್ಲಾ ಪೇಟಿಎಂ ಗ್ರಾಹಕರಿಗೆ, ನಿಮ್ಮ ಫೇವರಿಟ್‌ ಅಪ್ಲಿಕೇಶನ್‌ ಕೆಲಸ ಮಾಡುತ್ತಿದ್ದೆ. ಫೆಬ್ರವರಿ 29ರ ಬಳಿಕವೂ ಎಂದಿನಂತೆ ಕೆಲಸ ಮಾಡಲಿದೆ. ನಿಮ್ಮ ನಿರಂತರ ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬ ಪೇಟಿಎಂ ತಂಡದ ಸದಸ್ಯರೊಂದಿಗೆ ನಿಮ್ಮನ್ನು ಅಭಿನಂದಿಸುತ್ತೇನೆ. ಪ್ರತಿ ಸವಾಲಿಗೆ, ಒಂದು ಪರಿಹಾರವಿದೆ ಮತ್ತು ನಾವು ನಮ್ಮ ರಾಷ್ಟ್ರವನ್ನು ಪೂರ್ಣ ಅನುಸರಣೆಯಲ್ಲಿ ಪೂರೈಸಲು ಪ್ರಾಮಾಣಿಕವಾಗಿ ಬದ್ಧರಾಗಿದ್ದೇವೆ. ಪೇಮೆಂಟ್‌ ಇನೋವೇಷನ್‌ ಮತ್ತು ಹಣಕಾಸು ಸೇವೆಗಳಲ್ಲಿ ಸೇರ್ಪಡೆಗೊಳ್ಳುವಲ್ಲಿ ಭಾರತವು ಜಾಗತಿಕ ಪುರಸ್ಕಾರಗಳನ್ನು ಗೆಲ್ಲುತ್ತದೆ. ಪೇಟಿಎಂಕರೋ ಅದರ ದೊಡ್ಡ ಚಾಂಪಿಯನ್ ಆಗಿದೆ' ಎಂದು ಬರೆದುಕೊಂಡಿದ್ದಾರೆ.

ಇನ್ನೊಂದೆಡೆ ಪೇಟಿಎಂ ಮೇಲೆ ಹಣ ಹಾಕಿರುವ ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು ಕೂಡ ಕಂಗಾಲಾಗಿವೆ. ಗುರುವಾರ ತನ್ನ ಬೆಲೆಯಲ್ಲಿ ಶೇ. 20ರಷ್ಟು ಕುಸಿತ ಕಂಡಿದ್ದ ಪೇಟಿಎಂ, ಶುಕ್ರವಾರ ಕೂಡ ಇಷ್ಟೇ ಪ್ರಮಾಣದ ಕುಸಿತ ಕಂಡಿದೆ. ಪೇಟಿಎಂ ಷೇರಿನ ಮೇಲೆ ಅನಿಶ್ಚಿತತೆ ಹೆಚ್ಚುತ್ತಿರುವಂತೆ, ಮ್ಯೂಚುಯಲ್ ಫಂಡ್ ಹೂಡಿಕೆದಾರರು ತಾವು ಆಯ್ಕೆ ಮಾಡಿರುವ ಫಂಡ್‌ಗಳು ಪೇಟಿಎಂಅನ್ನು ಖರೀದಿಸಿವೆಯೇ ಎನ್ನುವುದನ್ನು ನೋಡುವ ಕುತೂಹಲದಲ್ಲಿದ್ದಾರೆ. ಪ್ರಮುಖ ಫಂಡ್‌ ಹೌಸ್‌ಗಳಾ ಮೀರೇ ಅಸೆಟ್‌ ಎಂಎಫ್‌, ಕ್ವಂಟ್‌ ಎಂಎಫ್‌ ಹಾಗೂ ನಿಪ್ಪಾನ ಇಂಡಿಯಾ ಎಮ್‌ಎಫ್‌ಗಳು ಡಿಸೆಂಬರ್‌ನಲ್ಲಿ ಪೇಟಿಎಂ ಷೇರುಗಳನ್ನು ಖರೀದಿ ಮಾಡಿದ್ದವು. ರುಪೀವೆಸ್ಟ್‌  ಮಾಹಿತಿಯ ಪ್ರಕಾರ 2023ರ ಡಿಸೆಂಬರ್‌ 31ರ ವೇಳೆಗೆ 68 ಮ್ಯೂಚುವಲ್‌ ಫಂಡ್‌ ಸ್ಕೀಮ್‌ಗಳು ಪೇಟಿಎಂನ 1995 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಹೊಂದಿವೆ. ಈ ಹಿಂದೆ 2.79% ಪಾಲನ್ನು ಹೊಂದಿದ್ದ 19 ಫಂಡ್‌ಗಳಿಗೆ ಹೋಲಿಸಿದರೆ 23 ಮ್ಯೂಚುಯಲ್ ಫಂಡ್‌ಗಳು ಡಿಸೆಂಬರ್ 2023 ರಲ್ಲಿ ಪೇಟಿಎಂನಲ್ಲಿ 4.99% ಪಾಲನ್ನು ಸಂಚಿತವಾಗಿ ಹೊಂದಿದ್ದವು ಎಂದು ಬಿಎಸ್‌ಇಯ ಡೇಟಾ ಸೂಚಿಸಿದೆ.

Tap to resize

Latest Videos

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಪ್ರಮುಖ ನಿರ್ಬಂಧ ವಿಧಿಸಿದ ಆರ್‌ಬಿಐ!

ಪೇಟಿಎಂ ಸಂಸ್ಥಾಪಕರೂ ಆಗಿರುವ ವಿಜಯ್ ಶೇಖರ್ ಶರ್ಮಾ ಮಾತ್ರ ಕಂಪನಿಯ ಬಗ್ಗೆ ಆಶಾವಾದಿಯಾಗಿದ್ದಾರೆ. ಆರ್‌ಬಿಐ ಕ್ರಮವನ್ನು ಸ್ಪೀಡ್‌ ಬಂಪ್‌ ಎಂದು ಹೇಳಿರುವ ಅವರು, ಇತರ ಬ್ಯಾಂಕ್‌ಗಳೊಂದಿಗೆ ಪಾಲುದಾರಿಕೆಯ ಮೂಲಕ ಸವಾಲುಗಳನ್ನು ಜಯಿಸುವಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಯೋಧ್ಯೆಯಲ್ಲಿಯೂ ಡಿಜಿಟಲ್ ಕ್ರಾಂತಿ;ಪ್ರತಿ ಅಂಗಡಿಯಲ್ಲೂ ಪೇಟಿಎಂ ಕ್ಯುಆರ್ ಕೋಡ್, ಸೌಂಡ್ ಬಾಕ್ಸ್

click me!