ನದಿ ಸ್ವಚ್ಛಗೊಳಿಸುವ ಈ ಯಂತ್ರ ರೆಡಿ ಮಾಡೋರಿದ್ದೀರಾ: ಇನ್‌ವೆಸ್ಟ್‌ ಮಾಡ್ತಾರಂತೆ ಆನಂದ್ ಮಹೀಂದ್ರಾ

By Anusha Kb  |  First Published Feb 2, 2024, 1:29 PM IST

ಉದ್ಯಮಿ ಆನಂದ್ ಮಹೀಂದ್ರ ಅವರು ನದಿಯೊಂದನ್ನು ಸ್ವಚ್ಛಗೊಳಿಸುವ ಮಿಷನ್ ಒಂದರ ವೀಡಿಯೋವನ್ನು ಪೋಸ್ಟ್‌ನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇಂತಹದ್ದೇ ಯಂತ್ರವನ್ನು ಯಾರಾದರೂ ಭಾರತದಲ್ಲಿ ನಿರ್ಮಾಣ ಮಾಡಲು ಬಯಸಿದರೆ ತಾನು ಅದಕ್ಕೆ ಬಂಡವಾಳ ಹೂಡುವುದಾಗಿ ಹೇಳಿದ್ದಾರೆ. 


ಬೆಂಗಳೂರು: ಮಾನವರ ಅವಾಂತರದಿಂದ ದಿನದಿಂದ ದಿನಕ್ಕೆ ನದಿಗಳು ಸೇರಿದಂತೆ ನೀರಿನ ಬಹುತೇಕ ಮೂಲಗಳು ಮಲಿನಗೊಳುತ್ತಿವೆ. ನದಿಯಲ್ಲಿ, ತೇಲಿ ಬುರವ ಸಾವಿರಾರು ಪ್ಲಾಸ್ಟಿಕ್‌ ಬಾಟಲ್‌ಗಳು, ಇತರ ತ್ಯಾಜ್ಯಗಳು ನೀರನ್ನು ಮಲಿನಗೊಳಿಸುವುದರ ಜೊತೆಗೆ ಅದರಲ್ಲಿರುವ ಜಲಚರಗಳಿಗೆ ಕಂಟಕವಾಗುತ್ತಿವೆ. ಇವುಗಳ ಸ್ವಚ್ಛತೆ ಇಂದು ದೊಡ್ಡ ಸವಾಲಾಗಿದೆ. ಹಲವು ಸುಂದರವೆನಿಸಿರುವ ಪ್ರವಾಸಿ ತಾಣಗಳು ಕೂಡ ಈ ಪ್ಲಾಸ್ಟಿಕ್ ಎಂಬ ರಾಕ್ಷಸನಿಂದ ತುಂಬಿ ತುಳುಕಿ ಮಲಿನಗೊಳ್ಳುತ್ತಿದ್ದು, ಇವುಗಳನ್ನು ಸ್ವಚ್ಛ ಮಾಡುವುದಕ್ಕೆ ಸ್ವಂತ ತಿಳುವಳಿಕೆ ಅರಿವಿನ ಜೊತೆ ದೊಡ್ಡ ಮಟ್ಟದ ಜಾಗೃತಿಯ ಅಗತ್ಯವಿದೆ. ಇಲ್ಲದೇ ಹೋದಲ್ಲಿ ಮುಂದಿನ ಪೀಳಿಗೆ ಪ್ಲಾಸ್ಟಿಕ್ ಎಂಬ ವಿಷದಿಂದ ಸಂಕಟ ಪಡಲಿದೆ ಎಂಬುದು ಕಹಿ ಸತ್ಯ. ಪರಿಸ್ಥಿತಿ ಹೀಗಿರುವಾಗ ಉದ್ಯಮಿ ಆನಂದ್ ಮಹೀಂದ್ರ ಅವರು ನದಿಯೊಂದನ್ನು ಸ್ವಚ್ಛಗೊಳಿಸುವ ಮಿಷನ್ ಒಂದರ ವೀಡಿಯೋವನ್ನು ಪೋಸ್ಟ್‌ನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಇಂತಹದ್ದೇ ಯಂತ್ರವನ್ನು ಯಾರಾದರೂ ಭಾರತದಲ್ಲಿ ನಿರ್ಮಾಣ ಮಾಡಲು ಬಯಸಿದರೆ ತಾನು ಅದಕ್ಕೆ ಬಂಡವಾಳ ಹೂಡುವುದಾಗಿ ಹೇಳಿದ್ದಾರೆ. 

ಆನಂದ್‌ ಮಹೀಂದ್ರ ಟ್ವಿಟ್ಟರ್‌ನಲ್ಲಿ ಇಂತಹ ಹಲವು ಸಮಾಜಮುಖಿ ವಿಚಾರಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಅವರು ಈಗ ಶೇರ್‌ ಮಾಡಿರುವ ವೀಡಿಯೋದಲ್ಲಿ ನೋಡುವುದಕ್ಕೆ ಬುಲ್ಡೋಜರ್‌ನಂತೆ ಕಾಣುವ ಯಂತ್ರವೊಂದು ನದಿ ಅಥವಾ ಕಾಲುವೆಯನ್ನು ಸ್ವಚ್ಛ ಮಾಡುತ್ತಿದ್ದು ನದಿ ಕಾಲುವೆಯಲ್ಲಿ ಸೇರಿಕೊಂಡು ತೇಲುತ್ತಿದ್ದ ಪ್ಲಾಸ್ಟಿಕ್ ಬಾಟಲ್‌ಗಳು ಪ್ಲಾಸ್ಟಿಕ್ ಕವರ್‌ಗಳು ಹೀಗೆ ಎಲ್ಲಾ ಪ್ಲಾಸ್ಟಿಕ್ ವಸ್ತುಗಳು ಈ ಯಂತ್ರದೊಳಗೆ ಬಂದು ಸೇರುತ್ತವೆ. ಈ ಮೂಲಕ ನದಿ ಸ್ವಚ್ಛವಾಗುತ್ತಿದೆ. 

Tap to resize

Latest Videos

Viral Video: ಅಯ್ಯಪ್ಪ...ಇಂಥಾ ಜಾಗದಲ್ಲೂ ಲೇಡೀಸ್ ಕ್ರಿಕೆಟ್ ಆಡ್ತಾರೆ ನೋಡಿ!

ಈ ವೀಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರ ಅವರು ನದಿಗಳನ್ನು ಸ್ವಚ್ಛಗೊಳಿಸಲು ಸ್ವಾಯತ್ತ ರೋಬೋಟ್, ಇದು ಚೈನೀಸ್ ಎಂಬಂತೆ ತೋರುತ್ತಿದೆಯೇ? ನಾವು ಕೂಡ ಇಂತಹ ಯಂತ್ರವನ್ನು ಈಗಲೇ ಇಲ್ಲಿಯೇ ಮಾಡಬೇಕಿದೆ. ಯಾವುದೇ ಸ್ಟಾರ್ಟಪ್‌ಗಳು ಇದನ್ನು ಈಗಾಗಲೇ ಮಾಡುತ್ತಿದ್ದರೆ ನಾನು ಹೂಡಿಕೆ ಮಾಡಲು ಸಿದ್ಧನಿದ್ದೇನೆ ಎಂದು ಆನಂದ್ ಮಹೀಂದ್ರ ಬರೆದುಕೊಂಡಿದ್ದಾರೆ. ಇನ್ನು ಆನಂದ್ ಮಹೀಂದ್ರ ಪೋಸ್ಟ್ ನೋಡಿದ ನೆಟ್ಟಿಗರು ಯಾರ್ಯಾರೋ ಏಕೆ ನೀವೇ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.  ಹೈದರಾಬಾದ್, ಬೆಂಗಳೂರು ಮುಂತಾದ ನಗರದ ನಡುವೆಯೇ ಕೆರೆ ಹೊಂದಿರುವ ನಗರಗಳಿಗೆ ಇವು ಅಗತ್ಯವಾಗಿ ಬೇಕಿವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೈದರಾಬಾದ್‌ನ ಮುಸಿ ಬೆಂಗಳೂರಿನ ವೃಷಭಾವತಿಗೆ ಇದು ಅತ್ಯಗತ್ಯವಾಗಿ ಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ಮಕ್ಕಳಲ್ಲಿ ಸ್ವಚ್ಛತಾ ಪ್ರಜ್ಞೆ ಬೆಳೆಸಲು ಬೆಸ್ಟ್ ಐಡಿಯಾ ಎಂದು ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ!

ಒಟ್ಟಿನಲ್ಲಿ ಮುಂದಿನ ಪೀಳಿಗೆಗೆ ಕನಿಷ್ಠ ಶುದ್ಧ ಕುಡಿಯುವ ನೀರು ಶುದ್ಧ ಮಣ್ಣನ್ನು ನಾವು ಸ್ವಚ್ಛವಾಗಿಯೇ ಉಳಿಸಿಕೊಳ್ಳುವುದಕ್ಕೆ ಇಂತಹದೊಂದು ತಂತ್ರಜ್ಞಾನ ಬಹಳ ಅಗತ್ಯವಾಗಿದೆ. ಅದಕ್ಕಿಂತಲೂ ಹೆಚ್ಚು ಪ್ರತಿಯೊಬ್ಬರು ಸ್ವಯಂ ಜವಾಬ್ದಾರಿ ತೆಗೆದುಕೊಂಡು ಸಾರ್ವಜನಿಕ ಸ್ಥಳ ಪ್ರವಾಸಿ ತಾಣಗಳಲ್ಲಿ ಇದು ನಮ್ಮ ಭೂಮಿ ನಮ್ಮ ನೆಲ ಮಲಿನ ಮಾಡಬಾರದು ಎಂಬ ಆಸ್ಥೆಯಿಂದ ಕೆಲಸ ಮಾಡಿದರೆ ನದಿಗಳನ್ನು ಕರೆಗಳನ್ನು ಈ ರೀತಿ ಸ್ವಛ ಮಾಡಬೇಕಾದ ಅನಿವಾರ್ಯತೆ ಬಾರದು. 

Autonomous robot for cleaning rivers.

Looks like it’s Chinese?

We need to make these….right here…right now..

If any startups are doing this…I’m ready to invest…

pic.twitter.com/DDB1hkL6G1

— anand mahindra (@anandmahindra)

 

 

click me!