ಜೆಟ್ ಏರ್’ವೇಸ್ ದುರ್ಗತಿಗೆ ಜೇಟ್ಲಿ, ಸಿನ್ಹಾ ಕಾರಣ: ಸ್ವಾಮಿ!

By Web DeskFirst Published Apr 25, 2019, 7:35 PM IST
Highlights

‘ಜೆಟ್ ಏರ್’ವೇಸ್ ಆರ್ಥಿಕ ಮುಗ್ಗಟ್ಟಿಗೆ ಜೇಟ್ಲಿ, ಸಿನ್ಹಾ ಕಾರಣ’| ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ| ವಿತ್ತ ಸಚಿವರಿಂದ ಅಧಿಕಾರ ದುರುಪಯೋಗದ ಆರೋಪ ಮಾಡಿದ ಸ್ವಾಮಿ| ಜೆಟ್ ಏರ್’ವೇಸ್ ಸಂಸ್ಥೆಯನ್ನು ಏರ್ ಇಂಡಿಯಾದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯ| ಪ್ರಧಾನಿ ಮಧ್ಯಪ್ರವೇಶಕ್ಕೆ ಸುಬ್ರಮಣಿಯನ್ ಸ್ವಾಮಿ ಆಗ್ರಹ| 

ನವದೆಹಲಿ(ಏ.25):  ಜೆಟ್‍ ಏರ್'ವೇಸ್‍ ಆರ್ಥಿಕ ಮುಗ್ಗಟ್ಟಿಗೆ ಕೇಂದ್ರ ಹಣಕಾಸು ಸಚಿವ ಅರುಣ್‍ ಜೇಟ್ಲಿ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್‍ ಸಿನ್ಹಾ ಕಾರಣ ಎಂದು ಬಿಜೆಪಿ ನಾಯಕ ಸುಬ್ರಮಣ್ಯನ್‍ ಸ್ವಾಮಿ ಆರೋಪಿಸಿದ್ದಾರೆ.

ಪಕ್ಷ ಮತ್ತು ಸರ್ಕಾರದ ಘನತೆ ಕುಗ್ಗಿಸಲು ಜೇಟ್ಲಿ ಮತ್ತು ಸಿನ್ಹಾ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಸ್ವಾಮಿ ಗಂಭೀರ ಆರೋಪ ಮಾಡಿದ್ದು, ಕೂಡಲೇ ಸಂಸ್ಥೆಯನ್ನು ಏರ್ ಇಂಡಿಯಾ ಸಂಸ್ಥೆಯೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

I urge Namo to tell Jaitely and Jayant Sinha to lay off trying to parcel off Jet Airways to Spice Jet. It smells of favouritism and misuse of official position that will damage BJP’s reputation

— Subramanian Swamy (@Swamy39)

ಈ ಕುರಿತು ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಆಗ್ರಹಿಸಿರುವ ಸ್ವಾಮಿ, ಪಕ್ಷ ಮತ್ತು ಸರ್ಕಾರದ ಘನತೆಯ ಉಳಿವಿಗಾಗಿ ಜೇಟ್ಲಿ ಮತ್ತು ಸಿನ್ಹಾ ಅವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದ್ದಾರೆ.

ದೇಶದಲ್ಲಿ ಏ.11ರಿಂದ ಮೇ.19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.
 

click me!