ಚೀನಾದ ಹಾಲು, ಹಾಲಿನ ಉತ್ಪನ್ನ ಬೇಡ ಎಂದ ಭಾರತ!

By Web DeskFirst Published Apr 24, 2019, 7:07 PM IST
Highlights

ಚೀನಾದ ಹಾಲು, ಹಾಲಿನ ಉತ್ಪನ್ನಗಳ ಮೇಲೆ ಭಾರತ ನಿಷೇಧ| ಈ ಹಿಂದಿನ ಆಮದು ನಿಷೇಧವನ್ನು ಮುಂದುವರೆಸಿದ ಭಾರತ| ಮೆಲಾಮೈನ್‌ ಎಂಬ ಹಾನಿಕಾರಕ ರಾಸಾಯನಿಕ ಅಂಶ ಪತ್ತೆ ಹಿನ್ನೆಲೆ| ಇಂದು ಸಂಜೆಯಿಂದಲೇ ಆಮದು ಮೇಲಿನ ನಿಷೇಧ ಆದೇಶ ಜಾರಿಗೆ| 

ನವದೆಹಲಿ(ಏ.24): ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದಿನ ಮೇಲಿದ್ದ ಈ ಹಿಂದಿನ ನಿಷೇಧವನ್ನು ಭಾರತ ಮುಂದುವರೆಸಿದೆ.

 ಮುಂದಿನ ಮೂರು ತಿಂಗಳ ವರೆಗೆ ಚೀನಾದ ಹಾಲು ಮತ್ತು ಹಾಲಿನ ಉತ್ಪನ್ನಗಳ ಆಮದು ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. 

ಚೀನಾದಿಂದ ಆಮದಾಗುವ ಕ್ಷೀರ ಉತ್ಪನ್ನಗಳಲ್ಲಿ ಪ್ಲಾಸ್ಟಿಕ್‌ ಹಾಗೂ ರಸಗೊಬ್ಬರಗಳ ತಯಾರಿಕೆಗೆ ಬಳಸುವ ಮೆಲಾಮೈನ್‌ ಎಂಬ ಹಾನಿಕಾರಕ ರಾಸಾಯನಿಕ ಅಂಶ ಕಂಡು ಬಂದಿರುವ ಹಿನ್ನೆಲೆಯಲ್ಲಿ ಆಮದನ್ನು ನಿಷೇಧಿಸಲಾಗಿತ್ತು.

ಮೊದಲ ಬಾರಿಗೆ 2008ರಲ್ಲಿ ಚೀನಾದಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ನಿಷೇಧಿಸಿದ್ದ ಭಾರತ, ಈ ಉತ್ಪನ್ನಗಳ ಮೇಲಿನ ನಿರ್ಬಂಧಗಳನ್ನು 2018ರ ಡಿಸೆಂಬರ್ 24ರಂದು ಹಿಂಪಡೆದಿತ್ತು. 

ಇದೀಗ ಮತ್ತೆ ನಿಷೇಧವನ್ನು ಮುಂದುವರೆಸಿರುವ ಭಾರತ, ಇಂದು ಸಂಜೆಯಿಂದಲೇ ನಿಷೇಧದ ಆದೇಶ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದೆ. ಆಮದು ನಿಷೇಧಕ್ಕೆ ಒಳಪಟ್ಟಿರುವ ಹಾಲಿನ ಉತ್ಪನ್ನಗಳಲ್ಲಿ ಚಾಕೊಲೇಟ್‌, ಕ್ಯಾಂಡಿ, ಕನ್ಫೆಕ್ಷನರಿ ಮತ್ತಿತರ ಪದಾರ್ಥಗಳು ಸೇರಿವೆ.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏ.18ರಂದು ಮುಗಿದಿದ್ದು, ಏ.23 ರಂದು ಎರಡನೇ ಹಂತದ ಮತದಾನ ಮುಕ್ತಾಯ ಕಂಡಿದೆ. ನಡೆಯಲಿದೆ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ. ಕರ್ನಾಟಕದಲ್ಲಿ 28.

click me!