
ಮುಂಬೈ/ವಾಷಿಂಗ್ಟನ್: ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಲು ಭಾರತ, ಚೀನಾ ಸೇರಿದಂತೆ ಕೆಲವೇ ಕೆಲವೇ ದೇಶಗಳಿಗೆ ನೀಡಿದ್ದ ವಿನಾಯ್ತಿಯನ್ನು ಅಮೆರಿಕಕ್ಕೆ ಹಿಂದಕ್ಕೆ ಪಡೆದಿದೆ. ಮೇ ಆರಂಭದಿಂದ ಜಾರಿಗೆ ಬರುವಂತೆ ಕೆಲ ದೇಶಗಳಿಗೆ ತೈಲ ಆಮದಿಗೆ ನೀಡಲಾಗಿದ್ದ ವಿಶೇಷ ಅವಕಾಶ ಹಿಂಪಡೆಯಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಅಮೆರಿಕದ ಈ ಘೋಷಣೆ, ತನ್ನ ತನ್ನ ಆದಾಯಕ್ಕೆ ಬಹುಪಾಲು ತೈಲೋತ್ಪನ್ನವೊಂದನ್ನೇ ನೆಚ್ಚಿಕೊಂಡಿರುವ ಇರಾನ್‌ಗೆ ಭಾರೀ ಹೊಡೆತ ನೀಡುವುದರ ಜೊತೆಗೆ, ಇರಾನ್‌ನಿಂದ ಭಾರೀ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುವ ಭಾರತ ಮತ್ತು ಚೀನಾಕ್ಕೂ ಭಾರೀ ಸಂಕಷ್ಟತಂದೊಡ್ಡುವ ಸಾಧ್ಯತೆ ಇದೆ. ಇರಾನ್‌ನಿಂದ ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. ಭಾರತ, ಇರಾನ್‌ನಿಂದ ನಿತ್ಯ 3 ಲಕ್ಷ ಬ್ಯಾರಲ್ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತದೆ.
ಈ ಸುದ್ದಿ ಹೊರಬೀಳುತ್ತಲೇ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಏರಿಕೆ ಉಂಟಾಗಿದ್ದು, ಮಾರುಕಟ್ಟೆಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಸೋಮವಾರ ಒಂದೇ ದಿನ 495.10 ಅಂಕಗಳ ಭಾರೀ ಕುಸಿತ ಕಂಡಿದೆ. ಇದರಿಂದಾಗಿ ಸೆನ್ಸೆಕ್ಸ್ 38,645.18 ಅಂಕಗಳೊಂದಿಗೆ ತನ್ನ ವಹಿವಾಟು ಮುಗಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.