Steel Stocks Fall: ಷೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಸ್ಟೀಲ್ ಕಂಪನಿಗಳ ಷೇರುಗಳು; ಶೇ.13.2ರಷ್ಟು ಕುಸಿದ JSW

By Suvarna NewsFirst Published May 23, 2022, 6:11 PM IST
Highlights

*ನಿಫ್ಟಿ 50 ಕಂಪನಿಗಳಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದ ಜೆಎಸ್ ಡಬ್ಲ್ಯು ಸ್ಟೀಲ್ 
*ಉಕ್ಕು ಉತ್ಪನ್ನಗಳ ಮೇಲೆ  ಶೇ.15ರಷ್ಟು ರಫ್ತು ಸುಂಕ ವಿಧಿಸಿದ ಕೇಂದ್ರ ಸರ್ಕಾರ
*ಟಾಟಾ ಸ್ಟೀಲ್, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳಿಗೂ ನಷ್ಟ

ಮುಂಬೈ (ಮೇ 23): ಭಾರತದ ಷೇರು ಮಾರುಕಟ್ಟೆಯಲ್ಲಿ (Stock Market) ಸೋಮವಾರ  ಉಕ್ಕಿನ ಕಂಪನಿಗಳ (Steel Companies) ಷೇರುಗಳು (Shares) ಭಾರೀ ಕುಸಿತ ದಾಖಲಿಸಿವೆ.  ಕೇಂದ್ರ ಸರ್ಕಾರ 11 ಕಬ್ಬಿಣ ಹಾಗೂ ಉಕ್ಕಿನ (iron and steel) ಉತ್ಪನ್ನಗಳ ಮೇಲೆ ರಫ್ತು ಸುಂಕ (Export duty) ವಿಧಿಸಿದ ಬೆನ್ನಲ್ಲೇ ಮುಂಬೈ ಷೇರು ಮಾರುಕಟ್ಟೆಯಲ್ಲಿ (BSE) ದಿನದ ಅಂತ್ಯಕ್ಕೆ  ಈ ಕಂಪನಿಗಳು ಶೇ.8ಕ್ಕಿಂತಲೂ ಹೆಚ್ಚು ಕುಸಿತ ದಾಖಲಿಸಿವೆ.  ನಿಫ್ಟಿ  50 ಕಂಪನಿಗಳಲ್ಲಿ ಜೆಎಸ್ ಡಬ್ಲ್ಯು ಸ್ಟೀಲ್ (JSW Steel) ಅತೀ ಹೆಚ್ಚು ನಷ್ಟ ಅನುಭವಿಸಿದ್ದು, ಈ ಕಂಪನಿಯ ಷೇರುಗಳು  ಶೇ.13.2ರಷ್ಟು ಕುಸಿತ ದಾಖಲಿಸಿವೆ.  

ಎಲ್ಲ ಪ್ರಮುಖ ಉಕ್ಕು ಉತ್ಪನ್ನಗಳ ಮೇಲೆ ಸರ್ಕಾರ ಶೇ.15ರಷ್ಟು ರಫ್ತು ಸುಂಕ (Export duty) ವಿಧಿಸಿದೆ. ದಿನದ ಅಂತ್ಯಕ್ಕೆ ಜೆಎಸ್ ಡಬ್ಲ್ಯು ಸ್ಟೀಲ್ (JSW Steel), ಟಾಟಾ ಸ್ಟೀಲ್ (Tata Steel) ಹಾಗೂ ಹಿಂಡಲ್ಕೋ ( Hindalco) ಷೇರುಗಳು ಶೇ.8ಕ್ಕಿಂತಲೂ ಹೆಚ್ಚು ಕುಸಿತ ಕಂಡಿವೆ. ನಿಫ್ಟಿ ನಷ್ಟ ಅನುಭವಿಸಿದ ಕಂಪನಿಗಳಲ್ಲಿ ಜೆಎಸ್ ಡಬ್ಲ್ಯು ಸ್ಟೀಲ್ (JSW Steel), ಟಾಟಾ ಸ್ಟೀಲ್ (Tata Steel),ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL), ಹಿಂಡಲ್ಕೋ ( Hindalco) ಸೇರಿವೆ.  ಬೆಳಗ್ಗಿನ ಅವಧಿಯ ವಹಿವಾಟಿನಲ್ಲಿ ಲೋಹ ಇಂಡೆಕ್ಸ್ (metal index) ಶೇ.9ರಷ್ಟು ಕುಸಿತ ಕಂಡು 5200 ಮಟ್ಟಕ್ಕೆ ತಲುಪಿತ್ತು. ಆ ಬಳಿಕ ಅದು ಚೇತರಿಕೆ ದಾಖಲಿಸಲಿಲ್ಲ. ಜೆಎಸ್ ಡಬ್ಲ್ಯು ಷೇರು 547.75ರೂ.ಗೆ ಅಂದರೆ ಹಿಂದಿನ ವಹಿವಾಟಿಗಿಂತ 83.35ರೂ. ಕಡಿಮೆ ಬೆಲೆಗೆ ಮಾರಾಟವಾಗಿದೆ. 

LPG Cylinder Subsidy:2 ವರ್ಷದ ಬಳಿಕ ಮತ್ತೆ ಸಬ್ಸಿಡಿ ಭಾಗ್ಯ; ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ? ಇಲ್ಲಿದೆ ಮಾಹಿತಿ

ಇಂದು ( ಮೇ 23) ಸೆನ್ಸೆಕ್ಸ್  (Sensex) 37.78 ಪಾಯಿಂಟ್ಸ್ ಅಥವಾ ಶೇ.0.07ರಷ್ಟು ಕುಸಿತ ಕಂಡು 54,288.61 ಪಾಯಿಂಟ್ಸ್ ನೊಂದಿಗೆ ಮುಕ್ತಾಯವಾದ್ರೆ, ನಿಫ್ಟಿ (Nifty) 51.45 ಪಾಯಿಂಟ್ಸ್ ಅಥವಾ ಶೇ.0.32 ಕುಸಿತದೊಂದಿಗೆ 16,214.70 ಪಾಯಿಂಟ್ಸ್ ನಲ್ಲಿ ದಿನದ ಆಟ ಮುಗಿಸಿದೆ. 

ಸ್ಟೀಲ್ ಕಂಪನಿಗಳ ಷೇರು ಕುಸಿತಕ್ಕೆ ಕಾರಣವೇನು?
ಕೋಕಿಂಗ್ ಕಲ್ಲಿದ್ದಲು ಸೇರಿದಂತೆ  ಉಕ್ಕು ಕೈಗಾರಿಕೆಗಳಲ್ಲಿ ಬಳಸುವ ಕೆಲವು ಕಚ್ಚಾ ವಸ್ತುಗಳ (Raw materials) ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶನಿವಾರ (ಮೇ 21) ಕಡಿತಗೊಳಿಸಿತ್ತು. ಇದ್ರಿಂದ ದೇಶೀಯ ಕೈಗಾರಿಕೆಗಳ ಉತ್ಪಾದನಾ ವೆಚ್ಚ ತಗ್ಗಿ ಬೆಲೆಯಲ್ಲಿ ಇಳಿಕೆಯಾಗಲಿದೆ.  ಇನ್ನು ಉಕ್ಕಿನ ಉತ್ಪನ್ನಗಳ ರಫ್ತಿನ ಮೇಲೆ ಶೇ.15ರಷ್ಟು ಸುಂಕವನ್ನು ವಿಧಿಸಿದೆ. ಇದು ಉಕ್ಕು ಕೈಗಾರಿಕಾ ವಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಕೂಡ. 

ಜಾಗತಿಕ ಬ್ರೋಕರೇಜ್ ಸಂಸ್ಥೆ ಸಿಎಲ್‌ಎಸ್‌ಎ (CLSA) ಮೂರು ಪ್ರಮುಖ ಉಕ್ಕಿನ ಕಂಪನಿಗಳಾದ ಟಾಟಾ ಸ್ಟೀಲ್ (TATA Steel) ಖರೀದಿಯಿಂದ ಕಡಿಮೆ ಕಾರ್ಯಕ್ಷಮತೆಗೆ), ಜೆಎಸ್‌ಡಬ್ಲ್ಯೂ ಸ್ಟೀಲ್ (ಕಡಿಮೆ ಕಾರ್ಯಕ್ಷಮತೆಯಿಂದ ಮಾರಾಟಕ್ಕೆ) ಮತ್ತು ಜೆಎಸ್‌ಪಿಎಲ್‌ (ಖರೀದಿಯಿಂದ ಕಡಿಮೆ ಕಾರ್ಯಕ್ಷಮತೆ) ಷೇರುಗಳನ್ನು ಡೌನ್‌ಗ್ರೇಡ್ ಮಾಡಿದೆ.

Rupee Value: ಡಾಲರ್‌ ಮುಂದೆ ಕೊಂಚ ಜಿಗಿದ ರೂಪಾಯಿ, ಇಂದಿನ ಮೌಲ್ಯವೆಷ್ಟು?

2020-21ನೇ ಆರ್ಥಿಕ ವರ್ಷದಲ್ಲಿ ಭಾರತ  10.8 ಮಿಲಿಯನ್‌ ಟನ್‌ ದ್ಧಪಡಿಸಿದ ಉಕ್ಕನ್ನು ರಫ್ತು ಮಾಡಿತ್ತು. 2021-22ರಲ್ಲಿ ಭಾರತವು 13.5 ಮಿಲಿಯನ್ ಟನ್ (ಎಂಟಿ) ಸಿದ್ಧಪಡಿಸಿದ ಉಕ್ಕನ್ನು ರಫ್ತು ಮಾಡಿದೆ. ಇದೇ ವೇಳೆ ದೇಶೀಯ ಉಕ್ಕಿನ ಬಳಕೆಯು 94 ಎಂಟಿನಿಂದ 106 ಎಂಟಿಗೆ ಏರಿಕೆಯಾಗಿತ್ತು. 2021-22ರಲ್ಲಿ ಭಾರತದ ಕಬ್ಬಿಣದ ಅದಿರು ರಫ್ತು 15.3 ಎಂಟಿ ಆಗಿದ್ದರೆ, ಕಬ್ಬಿಣದ ಅದಿರು ಉಂಡೆಗಳ ರಫ್ತು 11 ಎಂಟಿ ಇತ್ತು. 

click me!