LPG Cylinder Subsidy:2 ವರ್ಷದ ಬಳಿಕ ಮತ್ತೆ ಸಬ್ಸಿಡಿ ಭಾಗ್ಯ; ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ? ಇಲ್ಲಿದೆ ಮಾಹಿತಿ

Published : May 23, 2022, 01:39 PM IST
LPG Cylinder Subsidy:2 ವರ್ಷದ ಬಳಿಕ ಮತ್ತೆ ಸಬ್ಸಿಡಿ ಭಾಗ್ಯ; ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ? ಇಲ್ಲಿದೆ ಮಾಹಿತಿ

ಸಾರಾಂಶ

*ಬಡ ವರ್ಗದ ಜನರಿಗೆ ವಾರ್ಷಿಕ 12 ಸಿಲಿಂಡರ್ ಗಳ ಮೇಲೆ ಎಲ್ ಪಿಜಿ ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ *2020ರ ಜೂನ್ ಬಳಿಕ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಸ್ಥಗಿತ *ರಾಜ್ಯದ 31.45 ಲಕ್ಷ  ಮಂದಿಗೆ ಸಿಗಲಿದೆ ಇದರ ಪ್ರಯೋಜನ 

ನವದೆಹಲಿ (ಮೇ 23): ಅಡುಗೆ ಅನಿಲ ಸಿಲಿಂಡರ್ (LPG Cylinder) ದರ (Price) ಹೆಚ್ಚಳ ಸೇರಿದಂತೆ  ಹಣದುಬ್ಬರ (Inflation) ಏರಿಕೆಯಿಂದ ಕಂಗೆಟ್ಟಿರುವ ಜನಸಾಮಾನ್ಯರಿಗೆ ತುಸು ನೆಮ್ಮದಿ ನೀಡುವ ಸುದ್ದಿಯೊಂದನ್ನು ಕೇಂದ್ರ ಸರ್ಕಾರ (Central Government) ಘೋಷಿಸಿದೆ. ಬಡ ವರ್ಗದ ಜನರಿಗೆ ವಾರ್ಷಿಕ 12 ಸಿಲಿಂಡರ್ ಗಳ ಮೇಲೆ ಎಲ್ ಪಿಜಿ (LPG) ಸಬ್ಸಿಡಿಯನ್ನು (Subsidy) ಕೇಂದ್ರ ಸರ್ಕಾರ ಘೋಷಿಸಿದೆ. ಪೆಟ್ರೋಲ್  (Petrol) ಹಾಗೂ ಡೀಸೆಲ್ (Diesel)ಬೆಲೆಗಳ ಮೇಲಿನ ತೆರಿಗೆ ಕಡಿತದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.ಕರ್ನಾಟಕ ರಾಜ್ಯದ  31.45 ಲಕ್ಷ ಫಲಾನಭವಿಗಳು ಇದರ ಲಾಭ ಪಡೆಯಲಿದ್ದಾರೆ. 

ಎಲ್ಫಿಜಿ ಸಿಲಿಂಡರ್ ಸಬ್ಸಿಡಿ ಬಗ್ಗೆ ಇತ್ತೀಚೆಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ನಿರ್ಮಲಾ ಸೀತಾರಾಮನ್, ' ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (Pradhan Mantri Ujjwala Yojana) 9 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಪ್ರತಿ ಎಲ್ ಪಿಜಿ ಸಿಲಿಂಡರ್  (12 ಸಿಲಿಂಡರ್ ತನಕ) ಮೇಲೆ 200ರೂ. ಸಬ್ಸಿಡಿ (Subsidy)ನೀಡುತ್ತಿದ್ದೇವೆ. ಇದು ನಮ್ಮ ತಾಯಂದಿರು ಹಾಗೂ ಅಕ್ಕಂದಿರಿಗೆ ನೆರವು ನೀಡಲಿದೆ. ಈ ನಿರ್ಣಯದಿಂದ ಸರ್ಕಾರದ ಬೊಕ್ಕಸದಿಂದ ವಾರ್ಷಿಕ ಸುಮಾರು  6,100 ಕೋಟಿ ರೂ. ಖರ್ಚಾಗಲಿದೆ.

Personal Finance: ಸುಲಭವಾಗಿ ಸಾಲ ಸಿಗುತ್ತೆ ಅಂತಾ ಕಂಡ ಕಂಡಲ್ಲಿ ಸಾಲ ತೆಗೆದ್ಕೊಳ್ಬೇಡಿ

2020ರ ಜೂನ್ ಬಳಿಕ ಉಜ್ವಲ ಯೋಜನೆಯ ಫಲಾನುಭವಿಗಳು ಸೇರಿದಂತೆ ಎಲ್ಲ ಬಳಕೆದಾರರಿಗೂ ಸಬ್ಸಿಡಿ ನಿಲ್ಲಿಸಲಾಗಿದ್ದು, ಮಾರ್ಕೆಟ್ ದರದಲ್ಲೇ ಎಲ್‌ ಪಿಜಿ ಸಿಲಿಂಡರ್ ಖರೀದಿಸುತ್ತಿದ್ದರು. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14.2ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ  1,003 ರೂ. ಇದೆ.  ಸರ್ಕಾರದ ಸಬ್ಸಿಡಿ ನೀಡುವ ನಿರ್ಧಾರದಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಸಿಲಿಂಡರ್ ಮೇಲೆ 200ರೂ. ಸಬ್ಸಿಡಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಲಿದೆ. ಇದ್ರಿಂದ ಅವರಿಗೆ ಪ್ರತಿ 14.2 ಕೆ.ಜಿ. ಎಲ್ ಪಿಜಿ ಸಿಲಿಂಡರ್ ಗೆ 803ರೂ. ಬೆಲೆ ನೀಡಿದಂತಾಗುತ್ತದೆ. 

ರಾಜ್ಯ ದ 31.45 ಲಕ್ಷ ಫಲಾನಭವಿಗಳಿಗೆ ಪ್ರಯೋಜನ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಬ್ಸಿ ಡಿ ಹಣ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ದ 31.45 ಲಕ್ಷ ಫಲಾನುಭವಿಗಳಿಗೆ ಇದರ ಪ್ರಯೋಜನ ಸಿಗಲಿದೆ. ರಾಜ್ಯದಲ್ಲಿ ಸದ್ಯ 14.2 ಕೆಜಿ ಗ್ಯಾಸ್ ಸಿಲಿಂಡರ್ ದರ 1,002 ರೂ.ಇದೆ. ತಿಂಗಳ ಕೊನೆಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ಹಣವನ್ನು ಲೆಕ್ಕ ಹಾಕಿ ಗ್ಯಾಸ್ ಏಜೆನ್ಸಿಗಳಿಗೆ ಕಳುಹಿಸಲಿದೆ. ಆ ಬಳಿಕ ಗ್ರಾಹಕರ ಖಾತೆಗೆ 200 ರೂ. ಜಮೆಯಾಗಲಿದೆ. ರಾಜ್ಯದಲ್ಲಿ ಉಜ್ವ ಲ ಯೋಜನೆಯಡಿ ಇಂಡಿಯನ್ ಆಯಿಲ್ ಕಾಪೋರೇಷನ್ ಲಿ.ನಲ್ಲಿ (IOC) 13,93,748, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. (BPCL) 7,40,897, ಹಾಗೂ ಹಿಂದೂಸ್ತಾನ್ ಪೆಟ್ರೋ ಲಿಯಂ ಕಾರ್ಪೋರೇಷನ್  ಲಿ. ನಲ್ಲಿ (HPCL) 10,11,042 ಸೇರಿದಂತೆ ಒಟ್ಟು 31,45,687 ಗ್ರಾಹಕರಿದ್ದಾರೆ.

Rupee Value: ಡಾಲರ್‌ ಮುಂದೆ ಕೊಂಚ ಜಿಗಿದ ರೂಪಾಯಿ, ಇಂದಿನ ಮೌಲ್ಯವೆಷ್ಟು?

ಸಮರ್ಪಕ ಮಾಹಿತಿ ನೀಡಿ
ಈ ಹಿಂದೆ ಗ್ಯಾಸ್ ಏಜೆನ್ಸಿಗಳು ಹಾಗೂ ಬ್ಯಾಂಕುಗಳ ಎಡವಟ್ಟಿನಿಂದ ಅನೇಕ ಗ್ರಾಹಕರ ಬ್ಯಾಂಕ್ ಖಾತೆಗೆ ಸಬ್ಸಿಡಿ ಹಣ ಜಮೆ ಆಗದೆ ತೊಂದರೆಯಾಗಿತ್ತು. ಹೀಗಾಗಿ ಗ್ಯಾಸ್ ಸಂಪರ್ಕ ಹೊಂದಿರುವ ಫಲಾನುಭವಿಗಳು ಅವರ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ವಿವರಗಳು ಹಾಗೂ ಆಧಾರ್ ಸಂಖ್ಯೆಯನ್ನು ಸರಿಯಾಗಿ ನೀಡಬೇಕು. ಬ್ಯಾಂಕ್ ಐಎಫ್ ಸಿ ಕೋಡ್ ಕೂಡ ನೀಡಬೇಕು. ಈ ಎಲ್ಲ ಮಾಹಿತಿ ಸಮರ್ಪಕವಾಗಿದ್ದರೆ ಗ್ರಾಹಕರ ಖಾತೆಗೆ ಸಬ್ಸಿಡಿ ಹಣ ಬರುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!