ಸೆನ್ಸೆಕ್ಸ್‌ ಒಂದೇ ದಿನ 800 ಅಂಕ ಪತನ: ₹ 2.25 ಲಕ್ಷ ಕೋಟಿ ನಷ್ಟ!

By Kannadaprabha News  |  First Published Apr 13, 2024, 7:01 AM IST

ಅಮೆರಿಕದಲ್ಲಿನ ಹಣದುಬ್ಬರದ ಪರಿಣಾಮ ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಕೆಂಪು ಬಣ್ಣದಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್‌ ಒಂದೇ ದಿನ 793.25 ಅಂಕಗಳ ಪತನದಿಂದ 74,244.90ಕ್ಕೆ ತಲುಪಿತು. ಇದರಿಂದಾಗಿ ಹೂಡಿಕೆದಾರರು ಬರೋಬ್ಬರಿ 2.25 ಲಕ್ಷ ಕೋಟಿ ರು.ನಷ್ಟ ಅನುಭವಿಸಿದರು.


ನವದೆಹಲಿ/ಮುಂಬೈ (ಏ.13): ಅಮೆರಿಕದಲ್ಲಿನ ಹಣದುಬ್ಬರದ ಪರಿಣಾಮ ಭಾರತದ ಷೇರು ಮಾರುಕಟ್ಟೆ ಶುಕ್ರವಾರ ಕೆಂಪು ಬಣ್ಣದಲ್ಲಿ ಮುಕ್ತಾಯಗೊಂಡಿತು. ಸೆನ್ಸೆಕ್ಸ್‌ ಒಂದೇ ದಿನ 793.25 ಅಂಕಗಳ ಪತನದಿಂದ 74,244.90ಕ್ಕೆ ತಲುಪಿತು. ಇದರಿಂದಾಗಿ ಹೂಡಿಕೆದಾರರು ಬರೋಬ್ಬರಿ 2.25 ಲಕ್ಷ ಕೋಟಿ ರು.ನಷ್ಟ ಅನುಭವಿಸಿದರು.

ಸೆನ್ಸೆಕ್ಸ್‌ ದಿನದ ಮಧ್ಯದಲ್ಲಿ 848.84 ಅಂಕ ಕುಸಿತದಿಂದ 74,189.31ಕ್ಕೆ ಕುಸಿದಿತ್ತು. ಆದರೆ ದಿನದಾಂತ್ಯಕ್ಕೆ 74,244.90ಕ್ಕೆ ಏರಿತು.

Tap to resize

Latest Videos

ಸೆನ್ಸೆಕ್ಸ್‌ನಲ್ಲಿ ಟಾಟಾ ಮೋಟರ್ಸ್‌, ಟಿಸಿಎಸ್‌ ಲಾಭ ಗಳಿಸಿದರೆ, ಸನ್‌ಫಾರ್ಮ, ಮಾರುತಿ, ಪವರ್‌ ಗ್ರಿಡ್‌, ಟೈಟಾನ್‌, ಟೆಕ್‌ ಮಹೀಂದ್ರಾ ಕಂಪನಿಗಳು ನಷ್ಟದಲ್ಲಿ ಮುಕ್ತಾಯಗೊಂಡಿತು.

ಒಟ್ಟು 2373 ಷೇರುಗಳು ನಷ್ಟದಲ್ಲಿ, 1466 ಷೇರುಗಳು ಲಾಭದಲ್ಲಿ ಹಾಗೂ 104 ಷೇರುಗಳು ಸ್ಥಿರವಾಗಿದ್ದವು.

ಸೆನ್ಸೆಕ್ಸ್‌ 75,000: ಮೋದಿ ಪ್ರಧಾನಿಯಾದ ಬಳಿಕ 50,000 ಏರಿಕೆ..!

click me!