Stock Market Crash:ವಾರದ ಮೊದಲ ದಿನವೇ ದಾಖಲೆ ಕುಸಿತ ಕಂಡ ಸೆನ್ಸೆಕ್ಸ್ , ಷೇರು ಹೂಡಿಕೆದಾರರಿಗೆ ಆತಂಕ

Suvarna News   | Asianet News
Published : Dec 20, 2021, 04:12 PM ISTUpdated : Dec 20, 2021, 04:13 PM IST
Stock Market Crash:ವಾರದ ಮೊದಲ ದಿನವೇ  ದಾಖಲೆ ಕುಸಿತ ಕಂಡ ಸೆನ್ಸೆಕ್ಸ್ , ಷೇರು ಹೂಡಿಕೆದಾರರಿಗೆ ಆತಂಕ

ಸಾರಾಂಶ

*ಒಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಹೂಡಿಕೆ ಹಿಂಪಡೆಯುತ್ತಿರೋ ವಿದೇಶಿ ಸಾಂಸ್ಥಿಕ ಹೂಡಿಕೆದಾರರು *ಸೋಮವಾರ (ಡಿ.20) ದಿನದ ಆರಂಭದಲ್ಲೇ ಕುಸಿತ ಕಂಡ ಸೆನ್ಸೆಕ್ಸ್ *ಕಳೆದ ಕೆಲವು ದಿನಗಳಿಂದ ಹೂಡಿಕೆದಾರರಲ್ಲಿ ಮನೆ ಮಾಡಿರೋ ಆತಂಕ   

ಮುಂಬೈ (ಡಿ.20): ಒಮಿಕ್ರಾನ್ ಭೀತಿ ಭಾರತದ ಷೇರುಮಾರುಕಟ್ಟೆ ಮೇಲೆ ಕಳೆದ ಕೆಲವು ದಿನಗಳಿಂದ ಪ್ರಭಾವ ಬೀರುತ್ತಿದೆ. ಐರೋಪ್ಯ ರಾಷ್ಟ್ರಗಳಲ್ಲಿ ಒಮಿಕ್ರಾನ್ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರೋದು ಆತಂಕ ಸೃಷ್ಟಿಸುತ್ತಿದ್ದು, ಇದ್ರಿಂದ ಸೋಮವಾರ (ಡಿ. 20)  ಪ್ರಾರಂಭದ ವಹಿವಾಟಿನಲ್ಲೇ ಮುಂಬೈ ಷೇರುಪೇಟೆಯ (BSE) ಸಂವೇದಿ ಸೂಚ್ಯಂಕ (Sensex) 1000 ಪಾಯಿಂಟ್ ಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ದಿನದ ಪ್ರಾರಂಭದಲ್ಲಿ 1,182.53 ಪಾಯಿಂಟ್ಸ್ ಅಂದ್ರೆ ಶೇ.2.3ಕ್ಕಿಂತ ಕೆಳಗೆ ಕುಸಿತ ಕಂಡ ಸೆನ್ಸೆಕ್ಸ್ 55,829.21ಕ್ಕೆ ಇಳಿಕೆ ಕಂಡಿತು. ನಿಫ್ಟಿ(  nifty ) 50 ಸೂಚ್ಯಂಕಕ್ಕಿಂತ ಕೆಳಗೆ 366 ಅಂಕಗಳಷ್ಟು ಇಳಿಕೆ ಕಂಡುಬಂದು 16,618ರಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ಕಳೆದ ವಾರದ ಕೊನೆಯ ವಹಿವಾಟಿನ ದಿನವಾದ ಶುಕ್ರವಾರ  ಸೆನ್ಸೆಕ್ಸ್ 889.40 ಪಾಯಿಂಟ್ಸ್ ಅಂದ್ರೆ ಶೇ.1.54ರಷ್ಟು ಕುಸಿತ ಕಂಡು 57,011.74 ಪಾಯಿಂಟ್ಸ್​ಗೆ ಇಳಿಕೆಯಾಗಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು(FPI) ಭಾರತೀಯ ಮಾರುಕಟ್ಟೆಗಳಿಂದ ಡಿಸೆಂಬರ್ ತಿಂಗಳಲ್ಲಿ ಈ ತನಕ 17,696 ಕೋಟಿ ರೂ. ಸಂಪಾದಿಸಿದ್ದಾರೆ. ಪರಿಣಾಮ ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲಿ(Foreign Exchange Reserve)  ಕುಸಿತ ದಾಖಲಾಗಿದ್ದು, ಆರ್ ಬಿಐ(RBI) ಅಂಕಿಅಂಶಗಳು ಇದನ್ನು ದೃಢಪಡಿಸಿವೆ ಕೂಡ. ತಜ್ಞರ ಪ್ರಕಾರ ಇನ್ನೂ ಕೆಲವು ದಿನಗಳ ತನಕ ಷೇರು ಸಂವೇದಿ ಸೂಚ್ಯಂಕ(sensex) ಇಳಿಕೆ ದಾಖಲಿಸಿದೆ. ಜೆಎಸ್ಡಬ್ಲ್ಯೂ, ಸ್ಟೀಲ್ , ಟಾಟಾ ಸ್ಟೀಲ್, ಬಜಾಜ್ ಫೈನಾನ್ಸ್ , ಎಸ್ ಬಿಐ, ಟಾಟಾ ಮೋಟಾರ್ಸ್, ಬಿಪಿಸಿಎಲ್ ಸೋಮವಾರ ನಷ್ಟ ಅನುಭವಿಸಿರೋ ಪಟ್ಟಿಯಲ್ಲಿರೋ ಪ್ರಮುಖ ಕಂಪನಿಗಳು. ಇನ್ನು ಸನ್ ಫಾರ್ಮಾದ ಷೇರುಗಳು ಮಾತ್ರ ಈ ವ್ಯತಿರಿಕ್ತ ಪರಿಸ್ಥಿತಿಯಲ್ಲೂ ಲಾಭ ಗಳಿಸಿವೆ. 

Bombay Stock Exchange: ಒಮಿಕ್ರಾನ್ ಭೀತಿಯಿಂದ ಹೊರಬಂದ ಷೇರುಮಾರುಕಟ್ಟೆ, ಮತ್ತೆ ಪುಟಿದ್ದೆದ್ದ ಸೆನ್ಸೆಕ್ಸ್

ಜಗತ್ತಿನಾದ್ಯಂತ ಕೊರೋನಾ ಹೊಸ ರೂಪಾಂತರಿ ಒಮಿಕ್ರಾನ್(Omicron ) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಲವು ರಾಷ್ಟ್ರಗಳು ಈಗಾಗಲೇ ಲಾಕ್ ಡೌನ್ ಜಾರಿಗೂ ಮುಂದಾಗಿವೆ. ಇದ್ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಸಂಚಲನ ಸೃಷ್ಟಿಯಾಗಿದ್ದು, ಇದು ಭಾರತದ ಷೇರುಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ. ಇನ್ನು ವಿದೇಶಿ ಷೇರುಮಾರುಕಟ್ಟೆಗಳಲ್ಲಿ ಕೂಡ ಇಂದು ಒಮಿಕ್ರಾನ್ ಭೀತಿ ನೆರಳು ಕಾಣಿಸಿದೆ. ಶಾಂಘೈ, ಹಾಂಕಾಂಗ್, ಟೋಕಿಯೋ ಮತ್ತು ಸಿಯೋಲ್ ಮಾರುಕಟ್ಟೆಗಳಲ್ಲಿ ಮಧ್ಯದ ಸೆಷನ್ ಅವಧಿಯಲ್ಲಿ ಭಾರಿ ನಷ್ಟದ ವಹಿವಾಟು ನಡೆದಿದೆ. 

ಈ ತಿಂಗಳಲ್ಲೇ ಅಧಿಕ ಹೊಡೆತ
2021ರ ಡಿಸೆಂಬರ್ ಹೂಡಿಕೆದಾರರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಡಿಸೆಂಬರ್ 10ರಿಂದ ಇಲ್ಲಿಯ ತನಕ ಮಾರುಕಟ್ಟೆ ಹೂಡಿಕೆದಾರರು 15ಲಕ್ಷ ಕೋಟಿ ರೂ.ಗಿಂತಲೂ ಅಧಿಕ ನಷ್ಟ ಅನುಭವಿಸಿದ್ದಾರೆ. ಅಂಕಿಅಂಶಗಳ ಪ್ರಕಾರ ಡಿಸೆಂಬರ್ 10ರ ತನಕ ಬಿಎಸ್ ಇ (BSE) ಮಾರ್ಕೆಟ್ ಕ್ಯಾಪ್ 2,67,68,264.40 ಕೋಟಿ ರೂ. ಆಗಿದ್ದು, ಸೋಮವಾರ ಅದು 2,52,26,317.82 ಕೋಟಿ ರೂ. ತಲುಪಿದೆ. ಪ್ರಸ್ತುತ ಷೇರು ಮಾರುಕಟ್ಟೆ ಟ್ರೆಂಡ್ ನೋಡಿದ್ರೆ ನಷ್ಟ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ.

Celebrity Investors : ಹೂಡಿಕೆಯಲ್ಲಿ ಹಿಂದೆ ಬಿದ್ದಿಲ್ಲ ಬಾಲಿವುಡ್ ಕಲಾವಿದರು!

ಕಾರಣಗಳೇನು?
ಕಳೆದ ಬಾರಿ ಕೊರೋನಾ ರೂಪಾಂತರಿ ಡೆಲ್ಟಾ ಭಾರತೀಯ ಷೇರು ಮಾರುಕಟ್ಟೆಗೆ ಸಿಕ್ಕಾಪಟ್ಟೆ ಹೊಡೆತ ನೀಡಿತ್ತು. ಈ ಮಧ್ಯೆ ಭಾರತದಲ್ಲಿ ವ್ಯಾಕ್ಸಿನೇಷನ್ ಕಾರ್ಯಕ್ರಮ ವೇಗ ಪಡೆದುಕೊಂಡ ಪರಿಣಾಮ ಕೊರೋನಾ ಭೀತಿ ದೂರವಾಗಿ ಷೇರುಮಾರುಕಟ್ಟೆ ಮತ್ತೆ ಚೇತರಿಕೆ ಹಾದಿಗೆ ಬಂದಿತ್ತು. ಆದ್ರೆ ಕೊರೋನಾ ಹೊಸ ರೂಪಾಂತರಿ ಒಮಿಕ್ರಾನ್ ವೈರಸ್ ಪ್ರಕರಣಗಳು ಜಗತ್ತಿನಾದ್ಯಂತ ಹೆಚ್ಚುತ್ತಿರೋದು ಮತ್ತೆ ಮಾರುಕಟ್ಟೆ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ. ಯುರೋಪ್ ರಾಷ್ಟ್ರಗಳಲ್ಲಿ ಕಠಿಣ ನಿರ್ಬಂಧಗಳು ಜಾರಿಗೆ ಬರೋ ಸಾಧ್ಯತೆ ಕೂಡ ಇದೆ.  ಈ ಭೀತಿಯಲ್ಲೇ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರು ಮಾರುಕಟ್ಟೆಯಿಂದ ಹಣ ಹಿಂಪಡೆಯುತ್ತಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇನ್ನು ಅಮೆರಿಕದಲ್ಲಿ ಚಿಲ್ಲರೆ ಹಣದುಬ್ಬರ ಏರಿಕೆ ಕಾಣುತ್ತಿರೋ ಬೆನ್ನಲ್ಲೇ ಫೆಡರಲ್ ಬ್ಯಾಂಕ್ ಕಠಿಣ ಕ್ರಮಗಳಿಗೆ ಮುಂದಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!