Ban On Future Trading: 7 ಕೃಷಿ ಉತ್ಪನ್ನಗಳ ಭವಿಷ್ಯದ ವ್ಯಾಪಾರಕ್ಕೆ ನಿರ್ಬಂಧ ; ಹಣದುಬ್ಬರ ತಡೆಗೆ ಸರ್ಕಾರದಿಂದ ಈ ಕ್ರಮ

By Suvarna NewsFirst Published Dec 20, 2021, 1:54 PM IST
Highlights

*ಭತ್ತ, ಗೋಧಿ, ಕಡಲೆ, ಸಾಸಿವೆ ಕಾಳು, ಸೋಯಾಬಿನ್,  ಕಚ್ಚಾ ಪಾಮ್ ಆಯಿಲ್, ಹೆಸರು ಕಾಳು ವ್ಯಾಪಾರದಲ್ಲಿ ಹೊಸ ಒಪ್ಪಂದಕ್ಕೆ ಅವಕಾಶವಿಲ್ಲ
*ಡಿ.20ರಿಂದಲೇ ಆದೇಶ ಜಾರಿಗೆ, ಒಂದು ವರ್ಷಗಳ ಅವಧಿಗೆ ಅನ್ವಯ
*ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿರೋ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾದ ಸರ್ಕಾರ

ನವದೆಹಲಿ (ಡಿ.20): ಏರಿಕೆಯಾಗುತ್ತಿರೋ ಹಣದುಬ್ಬರ ( inflation)ನಿಯಂತ್ರಿಸೋ ಉದ್ದೇಶದಿಂದ ಭತ್ತ(Paddy),ಗೋಧಿ(Wheat)ಸೇರಿದಂತೆ 7 ಕೃಷಿ ಉತ್ಪನ್ನಗಳ ( agricultural commodities)ಭವಿಷ್ಯದ ವ್ಯಾಪಾರಗಳನ್ನು ಕೇಂದ್ರ ಸರ್ಕಾರ ಒಂದು ವರ್ಷಗಳ ಅವಧಿಗೆ ರದ್ದುಪಡಿಸಿದೆ (suspended).ಈ ಬಗ್ಗೆ ಸೋಮವಾರ (ಡಿ.20) ಅಧಿಸೂಚನೆ ಮೂಲಕ ಮಾಹಿತಿ ನೀಡಿರೋ ಸೆಬಿ (SEBI),ರದ್ದತಿ ಆದೇಶ ಡಿಸೆಂಬರ್ 20, 2021ರಿಂದಲೇ ಜಾರಿಗೆ ಬರಲಿದ್ದು, ಒಂದು ವರ್ಷಗಳ ಅವಧಿಗೆ ಮುಂದುವರಿಯಲಿದೆ ಎಂದು ತಿಳಿಸಿದೆ. 

ವ್ಯಾಪಾರ ರದ್ದತಿಗೆ ಒಳಪಟ್ಟ ಏಳು ಕೃಷಿ ಉತ್ಪನ್ನಗಳಲ್ಲಿ ಭತ್ತ (ಬಾಸುಮತಿ ಹೊರತುಪಡಿಸಿ), ಗೋಧಿ(wheat), ಕಡಲೆ(chana), ಸಾಸಿವೆ ಕಾಳು (mustard seeds) ಹಾಗೂ ಅದರ ಉತ್ಪನ್ನಗಳು, ಸೋಯಾಬಿನ್(soya bean) ಹಾಗೂ ಅದರ ಉತ್ಪನ್ನಗಳು, ಕಚ್ಚಾ ಪಾಮ್ ಆಯಿಲ್ (crude palm oil) ಹಾಗೂ ಹೆಸರು ಕಾಳು (moong )ಭವಿಷ್ಯದ ವಹಿವಾಟುಗಳನ್ನು ಮುಂದಿನ ಆದೇಶದ ತನಕ ರದ್ದುಪಡಿಸಲಾಗಿದೆ. 'ಮುಂದಿನ ಆದೇಶದ ತನಕ ಯಾವುದೇ ಹೊಸ ಒಪ್ಪಂದಗಳನ್ನು ಬಿಡುಗಡೆ ಮಾಡೋದಿಲ್ಲ. ಈಗಾಗಲೇ ಇರೋ ಒಪ್ಪಂದಗಳನ್ನು ಹಾಗೆಯೇ ಮುಂದುವರಿಸಲಾಗೋದು. ಆದ್ರೆ ಅವುಗಳಲ್ಲಿ ಯಾವುದೇ ಹೊಸ ವ್ಯಾಪಾರ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ.ಈ ನಿರ್ದೇಶನ ತಕ್ಷಣದಿಂದಲೇ ಜಾರಿಗೆ ಬರಲಿದೆ. ಅಲ್ಲದೆ, ಈ ಮೇಲೆ ವಿವರಿಸಲಾದ ನಿರ್ದೇಶನಗಳು ಒಂದು ವರ್ಷಗಳ ಅವಧಿಗೆ ಅನ್ವಯಿಸಲಿದೆ ಎಂದು ಸೆಬಿ ಹೇಳಿದೆ.

MSME Association Strike: ಸೋಮವಾರ ದೇಶಾದ್ಯಂತ ಕೈಗಾರಿಕೆಗಳು ಬಂದ್‌: 35 ಸಾವಿರ ಕೋಟಿ ನಷ್ಟ ಸಾಧ್ಯತೆ

ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿರೋ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಬಂಧ ವಿಧಿಸಿದೆ. ನವೆಂಬರ್ ನಲ್ಲಿ ಭಾರತದ ಚಿಲ್ಲರೆ ಹಣದುಬ್ಬರ ( retail inflation) ಶೇ.4.91ಕ್ಕೆ ಏರಿಕೆ ಕಂಡಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಗದಿಪಡಿಸಿರೋ ಉನ್ನತ ಮಿತಿಯತ್ತ ಹಣದುಬ್ಬರ ಏರಿಕೆ ಓಟ ಮುಂದುವರಿಸಿರೋದು ಸರ್ಕಾರದ ಚಿಂತೆಗೆ ಕಾರಣವಾಗಿದೆ. ದೇಶದಲ್ಲಿ ಹಣ್ಣುಗಳು ಹಾಗೂ ತರಕಾರಿಗಳ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿರೋದನ್ನು ಸರ್ಕಾರದ ಅಂಕಿಅಂಶಗಳು ದೃಢಪಡಿಸಿವೆ. ಗ್ರಾಹಕರ ಬೆಲೆ ಹಣದುಬ್ಬರ (CPI) ಅಕ್ಟೋಬರ್ ನಲ್ಲಿ ಶೇ.4.48 ರಷ್ಟಿದ್ದು, ನವೆಂಬರ್ ನಲ್ಲಿ ಶೇ.6.93 ತಲುಪಿದೆ.

ವಾರ್ಷಿಕ ಸಗಟು ಬೆಲೆ ಆಧಾರಿತ ಹಣದುಬ್ಬರ (wholesale price-based inflation ) ಕೂಡ ನವೆಂಬರ್ ನಲ್ಲಿ ಶೇ. 14.23 ಏರಿಕೆ ಕಂಡಿದೆ. ಇದು  ಇದು 30 ವರ್ಷಗಳಲ್ಲೇ ಗರಿಷ್ಠ ಮಟ್ಟದಾಗಿದೆ. ಅಕ್ಟೋಬರ್ ನಲ್ಲಿ ಸಗಟು ಹಣದುಬ್ಬರ ಶೇ.12.54 ರಷ್ಟಿತ್ತು ಎಂಬುದು ಸರ್ಕಾರದ ಅಂಕಿಅಂಶಗಳಿಂದ ತಿಳಿದು ಬಂದಿದೆ. ಬ್ಲೂಮ್‌ಬರ್ಗ್ ಪ್ರಕಾರ, ಹೆಚ್ಚಿನ ಸರಕುಗಳ ಬೆಲೆ ಮತ್ತು ಕಡಿಮೆ ಪೂರೈಕೆಗಳಿಂದಾಗಿ ಇನ್‌ಪುಟ್ ವೆಚ್ಚಗಳ ಮೇಲಿನ ಭಾರತದ ಸಗಟು ಹಣದುಬ್ಬರವು ಮೂರು ದಶಕಗಳಲ್ಲಿ ಅತ್ಯಂತ ವೇಗದಲ್ಲಿ ಬೆಳೆದಿದೆ.  9 ಅರ್ಥಶಾಸ್ತ್ರಜ್ಞರ ಬ್ಲೂಮ್‌ಬರ್ಗ್ ಸಮೀಕ್ಷೆಯಲ್ಲಿ ಇದು ಸರಾಸರಿ ಅಂದಾಜು ಶೇಕಡಾ 12 ಕ್ಕಿಂತ ಹೆಚ್ಚಾಗಿದೆ. ಡಿಸೆಂಬರ್ 1991 ರಲ್ಲಿ, ಸಗಟು ಹಣದುಬ್ಬರವು ಶೇಕಡಾ 14.3 ರಷ್ಟಿತ್ತು.

ಜನ ಸಾಮಾನ್ಯರಿಗೆ ಡಬಲ್ ಶಾಕ್, 30 ವರ್ಷದ ಗರಿಷ್ಠಕ್ಕೆ Wholesale Inflation!

ಜಾಗತಿಕ ಸರಕುಗಳ ಬೆಲೆ ಮತ್ತು ಪೂರೈಕೆ ಬಿಕ್ಕಟ್ಟಿನ ಮಧ್ಯೆ ಕಂಪನಿಗಳು ಕಚ್ಚಾ ವಸ್ತುಗಳಿಗೆ ಹೆಚ್ಚು ಪಾವತಿಸುವುದರಿಂದ ಏಪ್ರಿಲ್‌ನಲ್ಲಿ ಪ್ರಾರಂಭವಾದ ಈ ಹಣಕಾಸು ವರ್ಷದಲ್ಲಿ ಫ್ಯಾಕ್ಟರಿ-ಗೇಟ್ ಹಣದುಬ್ಬರವು ಎರಡಂಕಿಯಲ್ಲಿದೆ. ಆಹಾರದ ಬೆಲೆಗಳು ಶೇಕಡಾ 4.9 ರಷ್ಟು, ಇಂಧನ ಮತ್ತು ವಿದ್ಯುತ್ ಬೆಲೆಗಳು ಶೇಕಡಾ 39.8 ರಷ್ಟು ಮತ್ತು ತಯಾರಿಸಿದ ಉತ್ಪನ್ನಗಳ ಬೆಲೆಗಳು ಶೇಕಡಾ 11.9 ರಷ್ಟು ಏರಿಕೆಯಾಗಿದೆ. 'ಮುಂದಿನ ವರ್ಷ ಹಣದುಬ್ಬರ ದರ ಏರಿಕೆಯ ಮಟ್ಟದಲ್ಲೇ ಇರಲಿದೆ. ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರ ಗರಿಷ್ಠ ಏರಿಕೆ ಕಾಣೋ ಸಾಧ್ಯತೆಯಿದೆ' ಎಂದು ಆರ್ ಬಿಐ ಹೇಳಿದೆ. 
 

click me!