Gold Silver Price: ವಾರದ ಮೊದಲ ದಿನ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಇಳಿಕೆಯಾದ ಬೆಳ್ಳಿ ದರ

Suvarna News   | Asianet News
Published : Dec 20, 2021, 12:05 PM ISTUpdated : Dec 20, 2021, 12:39 PM IST
Gold Silver Price: ವಾರದ ಮೊದಲ ದಿನ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಇಳಿಕೆಯಾದ ಬೆಳ್ಳಿ ದರ

ಸಾರಾಂಶ

ಚೆನ್ನೈ ಹೊರತುಪಡಿಸಿ ದೇಶದ ಪ್ರಮುಖ ನಗರಗಳಲ್ಲಿ ಕಳೆದೆರಡು ದಿನಗಳಿಂದ ಚಿನ್ನದ ದರದಲ್ಲಿ ಸ್ಥಿರತೆ ಕಂಡುಬಂದಿದೆ. ಆದ್ರೆ ಬೆಳ್ಳಿ ಬೆಲೆಯಲ್ಲಿ ಮಾತ್ರ ಕೊಂಚ ಇಳಿಕೆಯಾಗಿದೆ. 

ಬೆಂಗಳೂರು (ಡಿ.20): ಚಿನ್ನ(Gold)ಹಾಗೂ  ಬೆಳ್ಳಿ (Silver)ಖರೀದಿಸಲು ಕೆಲವರು ಅನೇಕ ದಿನಗಳಿಂದ ಸಿದ್ಧತೆ ನಡೆಸಿರುತ್ತಾರೆ. ವರ್ಷದಿಂದ ತಿಂಗಳ ಆದಾಯದಲ್ಲಿ ಒಂದು ಭಾಗವನ್ನು ಇದಕ್ಕಾಗಿಯೇ ಎತ್ತಿಟ್ಟಿರುತ್ತಾರೆ. ಹೀಗಾಗಿ ಚಿನ್ನ ಖರೀದಿ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ದುಬಾರಿ ವೆಚ್ಚವೇ ಸರಿ, ಹೀಗಿರೋವಾಗ ಚಿನ್ನ ಹಾಗೂ ಬೆಳ್ಳಿ ದರ ಕಡಿಮೆಯಾಗೋ ಸಮಯಕ್ಕಾಗಿ ಕಾಯೋದು ಸಹಜ. ಆದ್ರೆ ಕೊರೋನಾ(Corona) ಬಳಿಕ ಚಿನ್ನದ ದರದಲ್ಲಿ ಅತ್ಯಧಿಕ ಏರಿಕೆ ಕಂಡುಬಂದಿತ್ತು. ಮಧ್ಯಮ ವರ್ಗಕ್ಕೆ ಚಿನ್ನ ಕೈಗೆಟುಕದ ವಸ್ತುವೇ ಆಗಿ ಬಿಟ್ಟಿತ್ತು. ಆದ್ರೆ ಈ ವರ್ಷದ ಪ್ರಾರಂಭದಲ್ಲಿ ಚಿನ್ನದ ದರ ಇಳಿಕೆ ಕಂಡಿತು.  ಕೊರೋನಾ ಪ್ರಕರಣಗಳು ತಗ್ಗಿದ್ದ ಕಾರಣ ಮದುವೆ(Wedding) ಸೇರಿದಂತೆ ಶುಭ ಕಾರ್ಯಕ್ರಮಗಳು ಮತ್ತೆ ಪ್ರಾರಂಭಗೊಂಡ ಕಾರಣ ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆಯೂ ಹೆಚ್ಚಿತು. ಈ ನಡುವೆ ಬೆಳ್ಳಿ ಬೆಲೆ ನಿರಂತರ ಹಾವೇಣಿ ಆಟ ಮುಂದುವರಿಸಿದೆ.  ಚಿನ್ನದ ಬೆಲೆ ಈ ತಿಂಗಳಲ್ಲಿ ಕೊಂಚ ಏರುಮುಖ ದಾಖಲಿಸಿದೆ. ಒಮಿಕ್ರಾನ್(Omicron) ವೈರಸ್ ಭೀತಿ, ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ದೇಶದ ಆರ್ಥಿಕತೆಯಲ್ಲಿನ ಬದಲಾವಣೆಗಳು ಈ ಏರಿಕೆಗೆ ಕಾರಣವಾಗಿವೆ. ಆದ್ರೆ ಎರಡು ದಿನದಿಂದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು (ಡಿ.20) ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ?

ಬೆಂಗಳೂರಿನಲ್ಲಿ(Bengaluru) ದರ ಎಷ್ಟಿದೆ?
ಬೆಂಗಳೂರಿನಲ್ಲಿ (Bengaluru)ಚಿನ್ನದ ಬೆಲೆ ಇಂದು ಸ್ಥಿರವಾಗಿದೆ. ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  45,700ರೂ. ಇದ್ದು, ಇಂದು ಕೂಡ ಅಷ್ಟೇ ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 49,850ರೂ. ಇದ್ದು, ಇಂದು ಕೂಡ ಅಷ್ಟೇ ಇದೆ.  ಒಂದು ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಇಂದು 300ರೂ. ಇಳಿಕೆ ಕಂಡುಬಂದಿದೆ.  ಒಂದು ಕೆ.ಜಿ.ಬೆಳ್ಳಿಗೆ ನಿನ್ನೆ 62,200ರೂ. ಇದ್ರೆ ಇಂದು  61,900ರೂ. ಇದೆ.

Petrol Diesel Rate: ವಾರದ ಮೊದಲ ದಿನ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

ದೆಹಲಿಯಲ್ಲಿ ಹೇಗಿದೆ?
ದೆಹಲಿಯಲ್ಲಿ ಚಿನ್ನದ ಬೆಲೆ ಇಂದು ಸ್ಥಿರವಾಗಿದೆ.  ನಿನ್ನೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ  47,850ರೂ. ಇತ್ತು. ಇಂದು  ಕೂಡ ಅಷ್ಟೇ ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರದಲ್ಲಿ ಕೂಡ ಯಾವುದೇ ಬದಲಾವಣೆ ಆಗಿಲ್ಲ. ನಿನ್ನೆ 52, 200ರೂ. ಇದ್ದ ಚಿನ್ನದ ದರ ಇಂದು ಕೂಡ ಅಷ್ಟೇ ಇದೆ.  ಒಂದು ಕೆ.ಜಿ. ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು 300ರೂ. ಇಳಿಕೆಯಾಗಿದೆ. ನಿನ್ನೆ  62 ,200ರೂ. ಆಗಿದ್ದ ಬೆಳ್ಳಿ ಬೆಲೆ ಇಂದು 61,900ರೂ. ಆಗಿದೆ. 

ಮುಂಬೈನಲ್ಲಿ ಎಷ್ಟಿದೆ?
ಮುಂಬೈನಲ್ಲಿ ಕೂಡ ಇಂದು ಚಿನ್ನದ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನಿನ್ನೆ 47,680ರೂ.ಇದ್ದು, ಇಂದು ಕೂಡ ಅಷ್ಟೇ ಇದೆ.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 48,680ರೂ. ಇತ್ತು, ಇಂದು ಕೂಡ ಅಷ್ಟೇ ಇದೆ.  ಬೆಳ್ಳಿ ದರದಲ್ಲಿಇಂದು 300ರೂ. ಇಳಿಕೆಯಾಗಿದೆ.  ಒಂದು ಕೆ.ಜಿ. ಬೆಳ್ಳಿಗೆ ನಿನ್ನೆ  62,200ರೂ.  ಇದ್ದು, ಇಂದು  61,900ರೂ. ಆಗಿದೆ.  

Celebrity Investors : ಹೂಡಿಕೆಯಲ್ಲಿ ಹಿಂದೆ ಬಿದ್ದಿಲ್ಲ ಬಾಲಿವುಡ್ ಕಲಾವಿದರು!

ಚೆನ್ನೈಯಲ್ಲಿ ದರ ಹೀಗಿದೆ
ಚೆನ್ನೈಯಲ್ಲಿ ಇಂದು ಚಿನ್ನದ ದರದಲ್ಲಿ30ರೂ. ಇಳಿಕೆಯಾಗಿದೆ.  22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ಇಂದು  45,910ರೂ.ಇದೆ. ನಿನ್ನೆ 45,940ರೂ. ಇತ್ತು.  24 ಕ್ಯಾರಟ್ 10 ಗ್ರಾಂ ಚಿನ್ನದ ದರ ನಿನ್ನೆ 50, 120ರೂ. ಇದ್ದು, ಇಂದು 20ರೂ. ಇಳಿಕೆಯಾಗಿ  50, 100ರೂ.ಇದೆ.  ಬೆಳ್ಳಿ ದರದಲ್ಲಿ ನಿನ್ನೆಗಿಂತ ಇಂದು  40ರೂ. ಇಳಿಕೆಯಾಗಿದ್ದು, ಒಂದು ಕೆ.ಜಿ. ಬೆಳ್ಳಿಗೆ 65,960ರೂ.ಇದೆ.   

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌