15 ರಿಂದ 20 ಕಿಲೋ ಮೀಟರ್ ಪ್ರಯಾಣಿಸಿ ಆಫೀಸಿಗೆ ಹೋಗೋದಕ್ಕೆ ಅನೇಕರು ಸುಸ್ತಾಗಿ ಹೋಗುತ್ತಾರೆ. ಅಂತಹದ್ದರಲ್ಲಿ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಬ್ರಿಯಾನ್ ನಿಕೋಲ್ ಪ್ರತಿದಿನವೂ ತಮ್ಮ ಮನೆಯಿಂದ ಕಚೇರಿ ತಲುಪಲು 1600 ಕಿಲೋ ಮೀಟರ್ ದೂರ ಪ್ರಯಾಣ ಮಾಡ್ತಾರಂತೆ.
ನ್ಯೂಯಾರ್ಕ್: 15 ರಿಂದ 20 ಕಿಲೋ ಮೀಟರ್ ಪ್ರಯಾಣಿಸಿ ಆಫೀಸಿಗೆ ಹೋಗೋದಕ್ಕೆ ಅನೇಕರು ಸುಸ್ತಾಗಿ ಹೋಗುತ್ತಾರೆ. ಅಂತಹದ್ದರಲ್ಲಿ ಸ್ಟಾರ್‌ಬಕ್ಸ್‌ನ ನೂತನ ಸಿಇಒ ಬ್ರಿಯಾನ್ ನಿಕೋಲ್ ಪ್ರತಿದಿನವೂ ತಮ್ಮ ಮನೆಯಿಂದ ಕಚೇರಿ ತಲುಪಲು 1600 ಕಿಲೋ ಮೀಟರ್ ದೂರ ಪ್ರಯಾಣ ಮಾಡ್ತಾರಂತೆ. ಬ್ರಿಯಾಮ್ ನಿಕೋಲ್ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ವಾಸ ಮಾಡ್ತಿದ್ದಾರೆ. ಆದರೆ ಸ್ಟಾರ್‌ಬಕ್ಸ್‌ನ ಮುಖ್ಯ ಕಚೇರಿ ವಾಷಿಂಗ್ಟನ್‌ನ ಸಿಯಾಟಲ್‌ನಲ್ಲಿದೆ. ಇಷ್ಟು ದೂರವಿದ್ದರು ಅವರು ಕಚೇರಿಗೆ ದಿನವೂ ಹೋಗಿ ಬರುತ್ತಾರೆ. ಇದಕ್ಕಾಗಿ ಅವರ ಬಳಿ ಒಂದು ಕಾರ್ಪೋರೇಟ್ ಜೆಟ್ ಇದೆ.
ಸ್ಟಾರ್‌ಬಕ್ಸ್‌ಗೆ ಸಿಇಒ ಆಗಿ ನಿಕೋಲಸ್ ಅವರಿಗೆ ಆಫರ್ ಮಾಡಿದ ಆಫರ್ ಲೆಟರ್‌ನಲ್ಲಿ ಇರುವಂತೆ, ನಿಕೋಲ್ ಅವರು ತಮ್ಮ ಪ್ರಯಾಣಕ್ಕೆ ಕಾರ್ಪೋರೇಟ್ ಜೆಟ್ ಅನ್ನು ಬಳಸುತ್ತಾರೆ. ಇವರು ಕೆಲಸಕ್ಕಾಗಿ ಟ್ರಾವೆಲ್ ಮಾಡದೇ ಇದ್ದರೆ ಹೇಗಿದ್ದರು 2023ರಿಂದಲೂ ಸ್ಟಾರ್‌ಬಕ್ಸ್ ಹೈಬ್ರೀಡ್ ವರ್ಕ್ ಪಾಲಿಸಿಯನ್ನು ಹೊಂದಿರುವುದರಿಂದ ಅವರು ವಾರದಲ್ಲಿ ಕನಿಷ್ಠ ಮೂರು ದಿನ ಸೀಯಾಟಲ್ ಕಚೇರಿಯಿಂದಲೇ ಕೆಲಸ ಮಾಡಬೇಕು ಎಂದು ಅವರಿಗೆ ನೀಡಿದ ಆಫರ್ ಲೆಟರ್‌ನಲ್ಲಿ ಉಲ್ಲೇಖಿಸಲಾಗಿದೆಯಂತೆ.
undefined
ಸ್ಟಾರ್ ಬಕ್ಸ್‌ನ ನೂತನ ಸಿಇಒ ಆಗಿರುವ 50 ವರ್ಷದ ನಿಕೋಲ್ ಅವರಿಗೆ ವಾರ್ಷಿಕವಾಗಿ 1.6 ಮಿಲಿಯನ್ ಡಾಲರ್ ವೇತನವಿದೆ. ಇದರ ಜೊತೆ ಅವರ ಸಾಮರ್ಥ್ಯವನ್ನು ಆಧರಿಸಿ 3.6 ಮಿಲಿಯನ್ ಡಾಲರ್‌ನಿಂದ 7.2 ಮಿಲಿಯನ್ ಡಾಲರ್‌ವರೆಗೆ ಕ್ಯಾಶ್ ಬೋನಸ್ ನೀಡಲಾಗುತ್ತದೆ. ಇದರ ಜೊತೆಗೆ ವಾರ್ಷಿಕವಾಗಿ ನೀಡಲಾಗುವ 23 ಮಿಲಿಯನ್ ಡಾಲರ್ ಮೊತ್ತದ ಇಕ್ವಿಟಿ ಅವಾರ್ಡ್‌ಗೂ ಅವರು ಅರ್ಹರಾಗಿರುತ್ತಾರೆ.
ಅಂದಹಾಗೆ ನಿಕೋಲ್ ಅವರಿಗೆ ಈ ರೀತಿ ಡೈಲಿ ವಿಮಾನದಲ್ಲೇ ಕೆಲಸಕ್ಕೆ ಹೋಗುವ ಅವಕಾಶ ಸಿಗುತ್ತಿರುವುದು ಇದೇ ಮೊದಲೇನಲ್ಲ, ಇವರು 2018ರಲ್ಲಿ ಚಿಪೊಟಲ್(Chipotle)ಯ ಸಿಇಒ ಆಗಿದ್ದಾಗಲೂ ಇಂತಹದ್ದೇ ರೀತಿಯ ಅವಕಾಶಕ್ಕಾಗಿ ಸಂಸ್ಥೆಯ ಜೊತೆ ಡೀಲ್ ಮಾಡಿಕೊಂಡಿದ್ದರು. ಚಿಪೋಟಲ್ ಕೊಲೆರಾಡೋದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿತ್ತು. ನಿಕೋಲ್ ಅವರ ಕೊನೆಯ ಕೆಲಸದ ಸ್ಥಳಕ್ಕಿಂತ 15 ನಿಮಿಷ ಪ್ರಯಾಣ ದೂರದಲ್ಲಿ ಈ ಕಚೇರಿ ಇತ್ತು. ಆದರೆ ಈ ಮೆಕ್ಸಿಕಾನ್ ಫಾಸ್ಟ್ ಫುಡ್ ಜಾಲಕ್ಕೆ ನಿಕೋಲ್ ಸಿಇಒ ಆದ ನಂತರ ತನ್ನ ಹೆಡ್‌ಕ್ವಾರ್ಟರ್‌ನ್ನು ಡೆನೆವೆರ್‌ನಿಂದ (Denver) ಕ್ಯಾಲಿಫೋರ್ನಿಯಾಗೆ ಸ್ಥಳಾಂತರಿಸಲಾಗಿತ್ತು.
ಅತೀ ಕಿರಿಯ ವಯಸ್ಸಲ್ಲಿ ಬರೋಬ್ಬರಿ 2602 ಕೋಟಿ ಸಂಸ್ಥೆಯ ಒಡತಿ ಅವನಿ ದಾವ್ಡಾ; ಟಾಟಾ ಜೊತೆ ಇರೋ ಸಂಬಂಧವೇನು?
ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂಪನಿ ವಕ್ತಾರರೊಬ್ಬರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬ್ರಿಯಾನ್ ನಿಕೋಲ್ ಅವರ ಪ್ರಾಥಮಿಕ ಕಚೇರಿ ಹಾಗೂ ಅವರ ಹೆಚ್ಚಿನ ಸಮಯವೂ ಸಿಯಾಟಲ್‌ನ ಸಪೋರ್ಟ್ ಸೆಂಟರ್‌ನಲ್ಲಿ ಅಥವಾ ವಿಸಿಟಿಂಗ್ ಪಾರ್ಟನರ್ ಹಾಗೂ ನಮ್ಮ ಸ್ಟೋರ್‌ನ ಕಸ್ಟಮರ್, ರೋಸ್ಟರೀಸ್, ರೋಸ್ಟಿಂಗ್ ಫೇಸಿಲಿಟಿ ಹಾಗೂ ವಿಶ್ವದೆಲ್ಲೆಡೆ ಇರುವ ನಮ್ಮ ಕಚೇರಿಗಳಲ್ಲಿ ಕಳೆಯುತ್ತದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಕಂಪನಿಗಳ ಅತೀ ಉನ್ನತ ಹುದ್ದೆಯಲ್ಲಿರುವ ಎಕ್ಸಿಕ್ಯೂಟಿವ್‌ಗಳಿಗೆ ಇಂತಹ ಸೌಲಭ್ಯಗಳು ಸಾಮಾನ್ಯ ಎನಿಸಿವೆ. ಏಕೆಂದರೆ ಅವರು ಇತರ ಉದ್ಯೋಗಿಗಳಿಗೆ ಹೋಲಿಸಿದರೆ ಸವಲತ್ತಿಗಾಗಿ ಅಥವಾ ವ್ಯವಹಾರದ ವಿಚಾರವೇ ಆಗಿರಲಿ ಅತೀ ಹೆಚ್ಚು ಚರ್ಚೆ ಮಾಡುವ ಗುಣವನ್ನು ಹೊಂದಿದ್ದಾರೆ.