World Senior Citizens Day 2024: ನಿವೃತ್ತಿಯ ಸಂತಸ ನೀಡುವ 5 ಬುದ್ಧಿವಂತ ಹೂಡಿಕೆಗಳು

By Santosh Naik  |  First Published Aug 21, 2024, 10:34 AM IST

ನಿವೃತ್ತಿ ನಂತರದ ಜೀವನದಲ್ಲಿ ಆರ್ಥಿಕ ಸ್ಥಿರತೆಗಾಗಿ ಬುದ್ಧಿವಂತ ಹೂಡಿಕೆಗಳು ಅತ್ಯಗತ್ಯ. ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಆಯ್ಕೆಗಳ ಕುರಿತು ತಿಳಿಯಿರಿ.


Senior Citizen Day: ನಿವೃತ್ತಿನ ನಂತರ ಸಂತೋಷದಿಂದ ಯಾವುದೇ ಚಡಪಡಿಕೆ ಇಲ್ಲದ ಜೀವನಕ್ಕೆ ಅತ್ಯಂತ ಪ್ರಮುಖವಾಗಿರುವುದು ಬುದ್ದಿವಂತ ಹೂಡಿಕೆ ಮತ್ತು ಸೇವಿಂಗ್ಸ್‌ನ ನಿರ್ಧಾರಗಳು. ತಮ್ಮಲ್ಲಿರುವ ಸಂಚಿತ ನಿಧಿಯಿಂದ ನಿಯಮಿತ ಆದಾಯವನ್ನು ಖಚಿತಪಡಿಸಿಕೊಂಡು ಹಿರಿಯ ನಾಗರೀಕರು ತಮ್ಮ ಇನ್ವೆಸ್ಟ್‌ಮೆಂಟ್‌ಗಳನ್ನು ಅತ್ಯಂತ ಬುದ್ಧಿವಂತಿಕೆಯಿಂದ ಆರಿಸಬೇಕಾಗುತ್ತದೆ. ಹಿರಿಯ ಜೀವಗಳು ತಾವು ಕಷ್ಟಪಟ್ಟು ಗಳಿಸಿದ ಹಣವನ್ನು ಸುರಕ್ಷಿತವಾಗಿರಿಸಲು ಸಂಪ್ರದಾಯವಾದಿ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ. ಹಿರಿಯ ನಾಗರಿಕರ ದಿನದ ಸಂದರ್ಭದಲ್ಲಿ, ಹೆಚ್ಚಿನ ಸುರಕ್ಷತೆ, ಉತ್ತಮ ಆದಾಯ ಮತ್ತು ಅವರ ಹಣದ ಹೆಚ್ಚಿನ ಲಿಕ್ವಿಡಿಟಿಗಾಗಿ ಹಿರಿಯ ಜೀವಗಳಿಗೆ ಉನ್ನತ ಹೂಡಿಕೆಯ ಆಯ್ಕೆಗಳು ಇಲ್ಲಿವೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS): ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಸರ್ಕಾರಿ ಬೆಂಬಲಿತ ಉಳಿತಾಯ ಯೋಜನೆಯಾಗಿದೆ. ಭಾರತೀಯ ಹಿರಿಯ ನಾಗರಿಕರಿಗಾಗಿ ಈ ಯೋಜನೆಯು ಯಾವುದೇ ಅಪಾಯವನ್ನು ತೆಗೆದುಕೊಳ್ಳದೆ ಹೆಚ್ಚಿನ ಆದಾಯವನ್ನು ಗಳಿಸಲು ಉತ್ತಮ ಮಾರ್ಗವಾಗಿದೆ. ಈ ಯೋಜನೆಯು ಬ್ಯಾಂಕ್ ಸ್ಥಿರ ಠೇವಣಿಗಳಿಗಿಂತ (ಎಫ್‌ಡಿ) ಹೆಚ್ಚಿನ ಬಡ್ಡಿದರವನ್ನು ಒದಗಿಸುತ್ತದೆ. ಯೋಜನೆಯು ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಹಾಗಿದ್ದರೂ, ವ್ಯಕ್ತಿಗಳು ಮೊದಲ ವರ್ಷದ ನಂತರ ಸ್ವಲ್ಪ ಮೊತ್ತವನ್ನು ದಂಡವಾಗಿ ಪಾವತಿಸುವ ಮೂಲಕ ತಮ್ಮ ಹಣವನ್ನು ವಾಪಾಸ್‌ ಪಡೆಯಬಹುದು. ಹೆಚ್ಚಿನ ಆದಾಯವನ್ನು ಗಳಿಸಲು ಬಯಸುವ ಹಿರಿಯ ನಾಗರಿಕರಿಗೆ ಈ ಯೋಜನೆಯು ಉತ್ತಮ ಆಯ್ಕೆಯಾಗಿದೆ.

Tap to resize

Latest Videos

undefined

ಅಂಚೆ ಕಛೇರಿ ಮಾಸಿಕ ಆದಾಯ ಯೋಜನೆ (POMS): ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ಕಡಿಮೆ ಅಪಾಯದ ಮಾಸಿಕ ಆದಾಯ ಯೋಜನೆಯಾಗಿದೆ. ಇದು ಗಣನೀಯ ಬಂಡವಾಳ ರಕ್ಷಣೆಯನ್ನು ನೀಡುತ್ತದೆ, ನಿವೃತ್ತಿಯ ಆರಂಭಿಕ ವರ್ಷಗಳಲ್ಲಿ ವ್ಯಕ್ತಿಗಳನ್ನು ರಕ್ಷಿಸುತ್ತದೆ.

ಹಿರಿಯ ನಾಗರಿಕರ ಸ್ಥಿರ ಠೇವಣಿ: ಫಿಕ್ಸೆಡ್ ಡೆಪಾಸಿಟ್ ಸ್ಕೀಮ್‌ಗಳು (ಎಫ್‌ಡಿಗಳು) ಕಡಿಮೆ ಅಪಾಯದ ನಿರೀಕ್ಷೆ ಹೊಂದಿರುವ ವ್ಯಕ್ತಿಗಳಿಗೆ ಜನಪ್ರಿಯ ಹೂಡಿಕೆ ಆಯ್ಕೆಗಳಾಗಿವೆ. ಎಫ್‌ಡಿಗಳನ್ನು ಬ್ಯಾಂಕ್‌ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ) ಒದಗಿಸುತ್ತವೆ. ಈ ಆಯ್ಕೆಗಳು ಅವುಗಳ ಸರಳತೆ, ವಿಶ್ವಾಸಾರ್ಹತೆ ಮತ್ತು ಸ್ಥಿರವಾದ ಆದಾಯದಿಂದಾಗಿ ಜನಪ್ರಿಯವಾಗಿವೆ. ನಿಶ್ಚಿತ ಠೇವಣಿಯಲ್ಲಿನ ಹೂಡಿಕೆಯು ಸುರಕ್ಷಿತವಾಗಿರಬಹುದು, ಆದರೆ ಠೇವಣಿ ಮಾಡಿದ ಮೊತ್ತವು ನಿಶ್ಚಿತ ಅವಧಿಯವರೆಗೆ ವಾಪಾಸ್‌ ಪಡೆದುಕೊಳ್ಳಲು ಸಾಧ್ಯವಿಲ್ಲ.

ಮ್ಯೂಚುಯಲ್ ಫಂಡ್ ಯೋಜನೆ: ಹೆಚ್ಚಿನ ಆದಾಯದ ಸಾಧನಗಳಲ್ಲಿ ತಮ್ಮ ಹಣದ ಒಂದು ಭಾಗವನ್ನು ಹೂಡಿಕೆ ಮಾಡಲು ಸಿದ್ಧರಿರುವ ಹಿರಿಯ ನಾಗರಿಕರು ಸಾಲ-ಆಧಾರಿತ ಮ್ಯೂಚುಯಲ್ ಫಂಡ್‌ಗಳು ಅಥವಾ ಹೈಬ್ರಿಡ್ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆಯ ಆಯ್ಕೆಗಳು ಹೆಚ್ಚಿನ ಆದಾಯ ಮತ್ತು ಬಂಡವಾಳದ ಅವಕಾಶಗಳನ್ನು ತೆರೆದಿರಿಸುತ್ತದೆ.

ಟೆಸ್ಲಾದಲ್ಲಿ ಕೆಲಸ ಖಾಲಿ ಇದೆ, ಗಂಟೆಗೆ 28 ಸಾವಿರ ಸಂಬಳ!

ಚಿನ್ನದ ಫಂಡ್‌ಗಳು: ಹೂಡಿಕೆದಾರರ ವಯಸ್ಸನ್ನು ಲೆಕ್ಕಿಸದೆಯೇ ಚಿನ್ನದ ನಿಧಿಗಳು ಅತ್ಯಂತ ವಿಶ್ವಾಸಾರ್ಹ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಬದಲಾಗುತ್ತಿರುವ ಸಮಯ ಮತ್ತು ಡಿಜಿಟಲ್ ಯುಗದ ಏರಿಕೆಯೊಂದಿಗೆ, ಹಿರಿಯ ನಾಗರಿಕರು ಡಿಜಿಟಲ್ ಚಿನ್ನ, ಚಿನ್ನದ ಇಟಿಎಫ್‌ಗಳು ಮತ್ತು ಚಿನ್ನದ ನಿಧಿಗಳಲ್ಲಿಯೂ ಸಹ ಆಯ್ಕೆ ಮಾಡಬಹುದು.

ಏನಿದು ಇಂಡಿಗೋ Cute fee? ಏರ್‌ಲೈನ್‌ನ ಪ್ರತಿಕ್ರಿಯೆಗೆ ಕಿಡಿಕಿಡಿಯಾದ ವಕೀಲ!

click me!