6 ಸಾವಿರದ ಈ ಚಡ್ಡಿ ಮೇಲೆ  ಹೆಚ್ಚಾದ ವ್ಯಾಮೋಹ; ಖರೀದಿಗೆ ಸರತಿ ಸಾಲಿನಲ್ಲಿ ನಿಂತ ಜನರು!

Published : Dec 16, 2024, 07:03 PM IST
6 ಸಾವಿರದ ಈ ಚಡ್ಡಿ ಮೇಲೆ  ಹೆಚ್ಚಾದ ವ್ಯಾಮೋಹ; ಖರೀದಿಗೆ ಸರತಿ ಸಾಲಿನಲ್ಲಿ ನಿಂತ ಜನರು!

ಸಾರಾಂಶ

ಈ ವಿಶೇಷ ಒಳ ಉಡುಪನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಚೈನ್ ಮತ್ತು ಬೆಲ್ಟ್ ಹೊಂದಿರುವ ಈ ಒಳಉಡುಪು ಸುಮಾರು ₹6,000 ಬೆಲೆಬಾಳುತ್ತದೆ.

ನವದೆಹಲಿ: ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಮತ್ತು ವಿಭಿನ್ನ ಒಳಉಡುಪಿಗೆ ಸಂಬಂಧಿಸಿದ ವಿಷಯ ವ್ಯಾಪಕ ಚರ್ಚೆಯಲ್ಲಿದೆ. ಈ ಕಪ್ಪು ಬಣ್ಣದ ಒಳಉಡುಪು ಚೈನ್ ಮತ್ತು ಬೆಲ್ಟ್ ಸಹ ಹೊಂದಿದೆ. ನೋಡಲು ವಿಭಿನ್ನವಾಗಿ ಕಾಣುವ ಈ ಒಳಉಡುಪು ಹೆಚ್ಚು ಸೆಕ್ಯೂರಿಟಿಯನ್ನು ಹೊಂದಿದೆ. ಆದ್ರೆ ಈ ಅಂಡರ್‌ವೇರ್ ಯಾರಿಗೆ? ಮಹಿಳೆಯರಿಗಾ ಅಥವಾ ಪುರುಷರಿಗಾ ಎಂಬುದರ ಬಗ್ಗೆ  ಹಲವರಲ್ಲಿ ಗೊಂದಲವಿದೆ. ವಿವಿಧ  ಶೀರ್ಷಿಕೆಯಡಿಯಲ್ಲಿ  ಚೈನ್ ಮತ್ತು ಬೆಲ್ಟ್ ಹೊಂದಿರುವ ಒಳಉಡುಪಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೆಲ ವರದಿಗಳ ಪ್ರಕಾರ, ಈ ಉಡುಪು ಮಾರುಕಟ್ಟೆಗೆ ಬಂದ ಮರುದಿನವೇ ಎಲ್ಲವೂ ಮಾರಾಟವಾಗಿದ್ದು, ಬೇಡಿಕೆ ದುಪ್ಪಟ್ಟುಗೊಂಡಿದೆ. ಜನರು ಈ ವಿಶೇಷ  ಒಳಉಡುಪು ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು  ವ್ಯಾಪಾರಸ್ಥರು ಹೇಳುತ್ತಿದ್ದಾರೆ. ಗ್ರಾಹಕರಿಗೆ ಕಂಪನಿಯಿಂದ ಬರೋವರೆಗೂ ಕಾಯುವಂತೆ ಹೇಳಲಾಗುತ್ತಿದೆ. ಹಾಗಾದ್ರೆ ಈ ಒಳಉಡುಪಿನ ವಿಶೇಷತೆ ಏನು? ಯಾಕೆ ಇಷ್ಟು ಬೇಡಿಕೆ? ಬೆಲೆ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.

ಮ್ಯೂಸಿಕ್ ಕೇಳುತ್ತಿರುವಾಗ ಕೇಳುಗರಿಗೆ ಬಾತ್‌ರೂಮ್‌ಗೆ ಹೋಗಲು ಇಷ್ಟವಿರಲ್ಲ. ಆದ್ರೆ ನೈಸರ್ಗಿಕ ಕ್ರಿಯೆ ಪೂರ್ಣಗೊಳಿಸಲು 'ಮೆಟಲ್ ಮ್ಯೂಸಿಕ್' ಕಂಪನಿ 'ಪಿಟ್ ಡೈಪರ್' ಹೆಸರಿನ ಒಳಚಡ್ಡಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.  ಸಂಗೀತ  ಕೇಳುತ್ತಲೇ ಬಾತ್ರೂಮ್‌ಗೆ ಹೋಗಿ ಬರಬಹುದು.  ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಒಳಉಡುಪಿನ ಬೆಲೆ 59 ಪೌಂಡ್  (ಅಂದಾಜು  6,336.18 ರೂಪಾಯಿ). 

ಇದನ್ನೂ ಓದಿ: ಛಾವಣಿಯಿಂದ ಇಳಿದು ಬಂತು 80 ಕೆಜಿ ತೂಕದ ಹೆಬ್ಬಾವು - ವಿಡಿಯೋ ನೋಡಿ

ಮ್ಯೂಸಿಕ್ ಅಭಿಮಾನಿಗಳಿಗಾಗಿಯೇ ಸಿದ್ಧಪಡಿಸಲಾಗಿರುವ ಈ ಪಿಟ್ ಡೈಪರ್ ಒಳಉಡುಪು, ತನ್ನ ವಿಶೇಷ  ಡಿಸೈನ್‌ನಿಂದಾಗಿ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುತ್ತಿದೆ. ಇದು  ಓಪನ್ ಕ್ವಿಲ್ಟೆಡ್ ಲೆದರ್‌ನಿಂದ ತಯಾರಿಸಲ್ಪಟ್ಟಿದ್ದು, ಚೈನ್ ಮತ್ತು ಬೆಲ್ಟ್ ಒಳಗೊಂಡಿದೆ. ಹಾಗೆ ಮುಂಭಾಗದಲ್ಲಿ ಘರ್ಜಿಸುತ್ತಿರುವ ಸಿಂಹದ ಫೋಟೋ ಕಾಣಬಹುದು. ಇದು ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಸೋರಿಕೆ ಮತ್ತು ವಾಸನೆಯೂ ಬರಲ್ಲ. ಧರಿಸುವ ಗ್ರಾಹಕರಿಗೆ ಆರಾಮದಾಯಕ ಅನುಭವವನ್ನು ನೀಡುತ್ತದೆ. ಹಾಗಾಗಿ  ಇದನ್ನು ಅಡಲ್ಟ್ ಡೈಪರ್  ಎಂದು ಕರೆಯಲಾಗುತ್ತದೆ. ತನ್ನ ವಿಶೇಷ  ಡಿಸೈನ್‌ನಿಂದಾಗಿ ಸೋಶಿಯಲ್ ಮೀಡಿಯಾ ಮೂಲಕ ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ  ಟ್ರೆಂಡ್‌ನಲ್ಲಿರೋ ಒಳಉಡುಪು  ಇದಾಗಿದ್ದು,  ಜನರು ಖರೀದಿಸಲು ಉತ್ಸುಕರಾಗಿರೋದಂತು ಸತ್ಯ.

ಮೆಟಲ್ ಮ್ಯೂಸಿಕ್ ಮತ್ತು ಲಿಕ್ವಿಡ್ ಡೆತ್ ಮತ್ತು ಡಿಪೆಂಡ್ ಎಂಬ ಎರಡು ಬ್ರ್ಯಾಂಡ್‌ಗಳು ಜೊತೆಯಾಗಿ ಪಿಟ್ ಡೈಪರ್‌ನ್ನು ಡಿಸೈನ್ ಮಾಡಲಾಗಿದೆ. ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾದ ಸಂದರ್ಭದಲ್ಲಿ ಅಥವಾ ಸಿನಿಮಾ ನೋಡುವಾಗ ಮಧ್ಯದಲ್ಲಿಯೇ ಎದ್ದು ಹೋಗೋದನ್ನು ಈ ಪಿಟ್ ಡೈಪರ್ ತಡೆಯುತ್ತದೆ. ಹಾಗಾಗಿಯೇ ಈ ಪಿಟ್ ಡೈಪರ್‌ಗೆ ಬೇಡಿಕೆ ಹೆಚ್ಚಾಗಿದೆ ಎಂದು  ಹೇಳಲಾಗಿದೆ.

ಇದನ್ನೂ ಓದಿ: Google Search 2024: ಪಾಕಿಸ್ತಾನಿಯರು ಗೂಗಲ್ ಸರ್ಚ್ ಮಾಡಿದ್ದೇನು? ಕೇಳಿದ್ರೆ ಭಾರತೀಯರಿಗೆ ಹೆಮ್ಮೆ ಆಗುತ್ತೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!