
ಬೆಂಗಳೂರು(ನ.05): ಫಾರ್ಚೂನ್ ಇಂಡಿಯಾ ಪ್ರಕಟಿಸಿರುವ ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ಕನ್ನಡತಿ ಸ್ನೇಹಾ ರಾಕೇಶ್ ಸ್ಥಾನ ಪಡೆದಿದ್ದಾರೆ.
ಉದ್ಯಮ ವಲಯದಲ್ಲಿ ಉತ್ತಮ ಸಾಧನೆ ಮಾಡಿದ ಆರು ಮಹಿಳಾ ಉದ್ಯಮಿಗಳನ್ನು ಪರಿಚಯಿಸಲಾಗಿದೆ. ಅದರಲ್ಲಿ ಸ್ನೇಹಾ ಅವರ ಹೆಸರು ಕೂಡ ಸೇರಿದ್ದು, ಈ ಪಟ್ಟಿಯಲ್ಲಿ ಕನ್ನಡತಿ ಹಾಗೂ ಬೆಂಗಳೂರಿನ ಆಕರ್ಮಾಕ್ಸ್ ಸಂಸ್ಥೆಯ ಮುಖ್ಯಸ್ಥೆ ಸ್ನೇಹಾ ರಾಕೇಶ್ ಸ್ಥಾನ ಪಡೆದಿರುವುದು ವಿಶೇಷವಾಗಿದೆ.
ಮಹಿಳಾ ಉದ್ಯಮಿಗಳ ಪರ ರಾಜೀವ್ ಚಂದ್ರಶೇಖರ್ ವಕಾಲತ್ತು. ವಿತ್ತ ಸಚಿವರಿಗೆ ಸಲಹೆಗಳು
ಯೂರೋಪ್ ಸಂಸತ್ತಿನಲ್ಲಿ ಮಾತನಾಡಿದ ಮೊದಲ ಕನ್ನಡತಿ ಎಂಬ ಹೆಗ್ಗಳಿಕೆಯೊಂದಿಗೆ ಇತ್ತೀಚೆಗೆ ಫೋಬ್ಸ್‌ರ್ ಪತ್ರಿಕೆ ಸ್ನೇಹಾ ಅವರನ್ನು ಗುರುತಿಸಲಾಗಿತ್ತು. ಫಾರ್ಚೂನ್ ಇಂಡಿಯಾ ನಿಯತಕಾಲಿಕೆ 2020ರ ಅಗ್ರಗಣ್ಯ 50 ಮಹಿಳಾ ಉದ್ಯಮಿಗಳ ಪಟ್ಟಿಪ್ರಕಟಿಸಿದೆ. ಈ ಪಟ್ಟಿಯಲ್ಲಿ ರಿಲಯಸ್ಸ್ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಬೆಂಗಳೂರು ಮೂಲದ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಬೈಜೂಸ್ ಸಂಸ್ಥೆಯ ದಿವ್ಯಾ ಗೋಕಾಲ್‌ನಾಥ್ ಸ್ಥಾನ ಪಡೆದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.