ಚಿನ್ನದ ಬೆಲೆ 350 ರೂ. ಏರಿಕೆ, ಬೆಳ್ಳಿಯೂ ದುಬಾರಿ: ಇಲ್ಲಿದೆ ನ. 04ರ ರೇಟ್!

Published : Nov 04, 2020, 03:15 PM ISTUpdated : Nov 04, 2020, 03:44 PM IST
ಚಿನ್ನದ ಬೆಲೆ 350 ರೂ. ಏರಿಕೆ, ಬೆಳ್ಳಿಯೂ ದುಬಾರಿ: ಇಲ್ಲಿದೆ ನ. 04ರ ರೇಟ್!

ಸಾರಾಂಶ

ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತೆ ಏರಿಕೆ| ಬೆಳ್ಳಿ ದರವೂ ಏರಿಕೆ| ಇಲ್ಲಿದೆ ನ. 04ರ ಚಿನ್ನ, ಬೆಳ್ಳಿ ದರ

ಬೆಂಗಳೂರು(ನ. 04): ಕೊರೋನಾ ನಡುವೆ ಚಿನ್ನದ ದರ ಏರಿಕೆ ಗ್ರಾಹಕರನ್ನ ಕಂಗಾಲು ಮಾಡಿತ್ತು. ನಿಗಧಿಯಾಗಿದ್ದ ಶುಭ ಕಾರ್ಯದ ಸಂದರ್ಭದಲ್ಲಿ ಬೆಲೆ ಏರಿಕೆ ದೊಡ್ಡ ಪೆಟ್ಟು ನೀಡಿತ್ತು. ಅಚ್ಚರಿ ಎಂಬಂತೆ ಚಿನ್ನದ ಬೇಡಿಕೆ ಭಾರೀ ಕಡಿಮೆ ಇದ್ದರೂ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಉದ್ಯಮಗಳು ನೆಲ ಕಚ್ಚಿದ ಹಿನ್ನೆಲೆ ಅನೇಕ ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು. ಹೀಗಿರುವಾಗಲೇ ಚಿನ್ನ, ಬೆಳ್ಳಿ ದರ ಏರಿಕೆ, ಇಳಿಕೆ ಆಟ ಆರಂಭಸಿದ್ದು, ಗ್ರಾಹರನ್ನು ಗೊಂದಲಕ್ಕೀಡು ಮಾಡಿದೆ. ಇಲ್ಲಿದೆ ನೋಡಿ ಇಂದಿನ ಗೋಲ್ಡ್‌ ಆಂಡ್ ಸಿಲ್ವರ್ ರೇಟ್.

ಇಂದು ಮಂಗಳವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 350 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,600 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 370 ರೂಪಾಯಿ ಏರಿಕೆ ಕಂಡಿದ್ದು, 51,920 ರೂಪಾಯಿ ಆಗಿದೆ. 

ಆದರೆ ಇತ್ತ ಬೆಳ್ಳಿ ದರ 400 ರೂ.ಏರಿಕೆಯಾಗಿದ್ದು, ಒಂದು ಕೆ. ಜಿ ಬೆಳ್ಳಿಯ ಬೆಲೆ 62,300 ರೂ ಆಗಿದೆ.

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

'

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಬ್ಯಾಂಕ್ ಆಫ್ ಇಂಡಿಯಾಗೆ ₹19.30 ಕೋಟಿ ವಂಚನೆ: 'ನಟರಾಜ್ ರೈಸ್ ಮಿಲ್ಸ್' ವಿರುದ್ಧ ಸಿಬಿಐ ಎಫ್‌ಐಆರ್ ದಾಖಲು
ದೇಶದ ಮನೆಮನೆಯ ಬ್ರ್ಯಾಂಡ್‌ ಆಗಿದ್ದ Videocon ದಿವಾಳಿ, ಕಂಪನಿ ಮಾಲೀಕ ವೇಣುಗೋಪಾಲ್‌ ಧೂತ್ ಆಸ್ತಿಗಳೆಲ್ಲಾ ಮುಟ್ಟುಗೋಲು!