ಹಬ್ಬ ಅಂತ, ಬಟ್ಟೆ, ಸ್ವೀಟ್, ಐಷಾರಾಮಿ ವಸ್ತುಗಳನ್ನು ಖರೀದಿಸಿದ್ದಾಗಿದೆ. ಬ್ಯಾಂಕ್ ಬ್ಯಾಲೆನ್ಸ್ ನೋಡಿದ್ರೆ ತಲೆ ಸುತ್ತುತ್ತಿದೆ. ಮತ್ತೆ ಹಣ ಕೂಡಿಡೋದು ಹೇಗೆ ಎಂಬ ಚಿಂತೆ ಕಾಡ್ತಿದೆ ಎನ್ನುವವರು ಈ ಟಿಪ್ಸ್ ಫಾಲೋ ಮಾಡಿ.
ಒಂದಾದ್ಮೇಲೆ ಒಂದರಂತೆ ಬಂದ ಹಬ್ಬ ಮುಗಿದಿದೆ. ಮಕ್ಕಳು ರಜೆ ಕಳೆದು ಶಾಲೆಗೆ ಮರಳಿದ್ದಾರೆ. ಗಣೇಶನ ಹಬ್ಬ, ದೀಪಾವಳಿ ಅಂತ ಹಬ್ಬಕ್ಕೆ ಸಾಕಷ್ಟು ಖರ್ಚು ಮಾಡಿರ್ತೀರಿ. ವಾರಗಟ್ಟಲೆ ರಜೆ ಬಂದಿದ್ದರಿಂದ ಅಲ್ಲಿ ಇಲ್ಲಿ ಸುತ್ತಾಡಿದ್ದೀರಿ. ಇದ್ರಿಂದ ಜೇಬು ಮಾತ್ರವಲ್ಲ ಬ್ಯಾಂಕ್ ಖಾತೆ ಕೂಡ ಖಾಲಿಯಾಗ್ತಿದೆ. ಖರ್ಚು ಮಾಡಿದ್ದು ಸಾಕು, ಇನ್ಮುಂದೆ ಉಳಿತಾಯದ ಪ್ಲಾನ್ ಮಾಡಿ. ನವೆಂಬರ್ ನಲ್ಲಿ ಹಣ ಉಳಿಸಲು ಶುರು ಮಾಡಿ. ಮತ್ತೊಂದು ಹಬ್ಬ ಬರೋದ್ರೊಳಗೆ ಒಂದಿಷ್ಟು ಹಣ ಕೂಡಿಡುವ ಪ್ರಯತ್ನ ನಡೆಸಿ. ನವೆಂಬರ್ ನಲ್ಲಿ ಹಣ ಹೇಗೆ ಉಳಿಸೋದು ಅನ್ನೋದನ್ನು ನಾವು ಹೇಳ್ತೇವೆ.
ನವೆಂಬರ್ (November) ನಲ್ಲಿ ಶುರು ಮಾಡಿ ಈ ಉಳಿತಾಯ (Saving) :
ದಿನಕ್ಕೆ 100 ರೂಪಾಯಿಯಿಂದ 1000 ರೂಪಾಯಿವರೆಗೆ ಹೀಗೆ ಉಳಿಸಿ : ಖರ್ಚು ಗೊತ್ತಿಲ್ಲದೆ ಆಗಿರುತ್ತೆ. ಆದ್ರೆ ಉಳಿತಾಯ ಮಾಡೋದು ಸುಲಭವಲ್ಲ. ಹಣ (Money) ಉಳಿಸುವ ದೃಢ ನಿರ್ಧಾರ ಮಾಡುವುದು ಮುಖ್ಯ. ಪ್ರತಿ ದಿನ ಪಿಗ್ಗಿ ಬ್ಯಾಂಕ್ ಅಥವಾ ಬಾಕ್ ಖಾತೆಗೆ 100 ರಿಂದ 1000 ರೂಪಾಯಿ ಹಾಕುವ ಪಣತೊಡಿ. ಬಜೆಟ್ ಏನೇ ಇರಲಿ, ಬಜೆಟ್ ಗೆ ತಕ್ಕಂತೆ ನೀವು ಹಣವನ್ನು ಉಳಿತಾಯ ಮಾಡ್ಲೇಬೇಕು. ಯಾವುದೇ ಕಾರಣಕ್ಕೂ ಬ್ಯಾಂಕ್ ಖಾತೆಯಲ್ಲಿ ಹಾಕಿರುವ ಹಾಗೂ ಪಿಗ್ಗಿ ಬ್ಯಾಂಕ್ ನಲ್ಲಿ ಹಾಕಿರುವ ಹಣವನ್ನು ತೆಗೆಯಬೇಡಿ. ಅರ್ಧದಲ್ಲಿಯೇ ಇದನ್ನು ನಿಲ್ಲಿಸಬೇಡಿ. ಪ್ರತಿದಿನ ನಿರ್ಧರಿತ ಮೊತ್ತವನ್ನು ಸೇರಿಸಿ. ಒಂದು ತಿಂಗಳು ಪ್ರತಿ ದಿನ ನೀವು 100 ರೂಪಾಯಿ ಉಳಿಸಿದ್ರೂ 3000 ರೂಪಾಯಿ ಉಳಿಸಿದಂತೆ ಆಗುತ್ತದೆ. ಅದೇ ನೀವು ಪ್ರತಿ ದಿನ 1000 ರೂಪಾಯಿ ಉಳಿಸಿದ್ರೆ 30000 ರೂಪಾಯಿ ಉಳಿತಾಯವಾಗುತ್ತದೆ. ನಿಮಗೆ ತಿಳಿಯದೆ ಹಣ ಉಳಿದಿರುತ್ತದೆ. ಇದು ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ.
ಬಜೆಟ್ ಅಪ್ಲಿಕೇಶನ್ ಬಹಳ ಪರಿಣಾಮಕಾರಿ : ಈಗ ಎಲ್ಲದಕ್ಕೂ ಅಪ್ಲಿಕೇಷನ್ ಲಭ್ಯವಿದೆ. ನೀವು ಹಣ ಉಳಿಸಲು ಕೂಡ ಬಜೆಟ್ ಅಪ್ಲಿಕೇಶನ್ ಬಳಸಬಹುದು. ಈ ಅಪ್ಲಿಕೇಶನ್ ನಲ್ಲಿ ಎಷ್ಟು ಉಳಿತಾಯ ಮಾಡಿದ್ದೀರಿ, ತಿಂಗಳಾದ್ಯಂತ ಎಷ್ಟು ಖರ್ಚು ಮಾಡಿದ್ದೀರಿ ಎಂಬ ಮಾಹಿತಿ ಸಿಗುತ್ತದೆ. ಫುಡ್ ಅಪ್ಲಿಕೇಶನ್ ನಲ್ಲಿ ಎಷ್ಟು ಖರ್ಚು ಮಾಡಿದ್ದೀರಿ, ಶಾಪಿಂಗ್‌ಗೆ ಎಷ್ಟು ಖರ್ಚು ಮಾಡಿದ್ದೀರಿ ಎಂಬೆಲ್ಲ ಮಾಹಿತಿ ನಿಮಗೆ ಸಿಗುತ್ತದೆ. ಅಲ್ಲದೆ ಉಳಿತಾಯ ಹೇಗೆ ಮಾಡಬೇಕು ಎಂಬ ಬಗ್ಗೆ ಸಲಹೆಯೂ ನಿಮಗೆ ಸಿಗುತ್ತದೆ.
ಉಳಿತಾಯಕ್ಕೆ ಈ ನಿಯಮ ಬೆಸ್ಟ್ : 50-30-20 ಈ ನಿಯಮವನ್ನು ನೀವು ಪಾಲನೆ ಮಾಡಬೇಕು. ನಿಮ್ಮ ಆದಾಯದ ಶೇಕಡಾ 50ರಷ್ಟು ಅಗತ್ಯಗಳಿಗೆ ಖರ್ಚು ಮಾಡಬೇಕು. ಶೇಕಡಾ 20ರಷ್ಟನ್ನು ಉಳಿತಾಯ ಮಾಡಬೇಕು. ನಿಮ್ಮ ಹವ್ಯಾಸಗಳಿಗೆ ಆದಾಯದ ಶೇಕಡಾ 30ರಷ್ಟನ್ನು ಬಳಸಬೇಕು. ಈ ನಿಯಮವನ್ನು ಪಾಲನೆ ಮಾಡಿದ್ರೆ ಯಾವುದೇ ಸಮಸ್ಯೆ ನಿಮಗೆ ಕಾಡೋದಿಲ್ಲ.
Personal Finance : ಸ್ವಂತ ಉದ್ಯೋಗ ಬಯಸುವ ಬಡವರಿಗೆ ಇಲ್ಲಿ ಸಿಗ್ತಿದೆ ನೆರವು
ದೊಡ್ಡ ವೆಚ್ಚ ಕಡಿಮೆ ಮಾಡಿ : ದೀಪಾವಳಿಗೆ ಹೆಚ್ಚು ಖರ್ಚಾಗಿದೆ. ಹಾಗಾಗಿ ನವೆಂಬರ್ ತಿಂಗಳಿನಲ್ಲಿ ಯಾವುದೇ ದೊಡ್ಡ ಖರ್ಚಿಗೆ ಕೈ ಹಾಕಬೇಡಿ. ಟಿವಿ, ಕಾರು, ಮನೆ ಇತ್ಯಾದಿಗಳಂತಹ ದೊಡ್ಡ ವಸ್ತು ಖರೀದಿಗೆ ಹೋಗಬೇಡಿ.
ಪ್ರಯಾಣ ಮತ್ತು ಮನರಂಜನಾ ವೆಚ್ಚದ ಮೇಲೆ ನಿಗಾ ಇಡಿ : ಪ್ರಯಾಣ ಮತ್ತು ಮನರಂಜನೆಗಾಗಿ ಹಿಂದಿನ ತಿಂಗಳು ಖರ್ಚಾಗಿದೆ. ಹಾಗಾಗಿ ನವೆಂಬರ್ ನಲ್ಲಿ ಅನಿವಾರ್ಯತೆ ಬಿಟ್ಟು ಮತ್ತ್ಯಾವ ಪ್ರಯಾಣ, ಮನರಂಜನೆ ಸುದ್ದಿಗೆ ಹೋಗ್ಬೇಡಿ. ಓಲಾ ಅಥವಾ ಉಬರ್ ಕ್ಯಾಬ್‌ಗಳಿಗಿಂತ ಮೆಟ್ರೋ ಅಥವಾ ಸಾರ್ವಜನಿಕ ಬಸ್‌ನಲ್ಲಿ ಪ್ರಯಾಣ ಬೆಳೆಸಿ.
Personal Finance: ಗೃಹಿಣಿಯರಿಗೆ ಇಲ್ಲಿದೆ ಬ್ಯುಸಿನೆಸ್ ಟಿಪ್ಸ್
ಆನ್ಲೈನ್ ಅಪ್ಲಿಕೇಶನ್ ಅನ್‌ಇನ್‌ಸ್ಟಾಲ್ ಮಾಡಿ : ಆನ್ಲೈನ್ ಅಪ್ಲಿಕೇಷನ್ ನಲ್ಲಿ ಸಾಕಷ್ಟು ಆಫರ್ ಬರ್ತಿರುತ್ತದೆ. ಅದನ್ನು ನೋಡಿ ಮನಸ್ಸು ಸೆಳೆಯುತ್ತದೆ. ಗೊತ್ತಿಲ್ಲದೆ ಆರ್ಡರ್ ಆಗಿರುತ್ತದೆ. ಅದ್ರ ಬದಲು ಆ ಅಪ್ಲಿಕೇಷನ್ ಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಆಗ ಖರ್ಚನ್ನು ನಿಯಂತ್ರಿಸಬಹುದು.