ಭೂಮಿ, ಭೂಮಿ ಅಂತ ಕಿತ್ತಾಡುವ ಜನರು ಒಂದು ಭೂಮಿಯನ್ನು ಹಾಗೆ ಬಿಟ್ಟಿದ್ದಾರೆ. ಅಲ್ಲಿ ವಾಸ ಮಾಡೋರಿಲ್ಲ. ಇದು ನನ್ನ ದೇಶ ಅಂತಾ ಘೋಷಣೆ ಮಾಡಿದೋರೆಲ್ಲ ಹಿಂದೆ ಬಂದಿದ್ದಾರೆ. ಅಷ್ಟಕ್ಕೂ ಈ ದೇಶದ ವಿಶೇಷವೇನು ಗೊತ್ತಾ?
ಆಸ್ತಿ ಯಾರಿಗೆ ಬೇಡ ಹೇಳಿ ? ತುಂಡು ಜಮೀನಿದ್ರೂ ಜನರು ನಂದು ನಂದು ಅಂತಾ ಕಚ್ಚಾಡ್ತಾರೆ. ಸಣ್ಣ ಜಾಗಕ್ಕೆ ಕೊಲೆಯೇ ನಡೆದ ಉದಾಹರಣೆ ಸಾಕಷ್ಟಿದೆ. ಎಷ್ಟೋ ದೇಶಗಳ ಮಧ್ಯೆ ಜಮೀನಿಗಾಗಿ ಯುದ್ಧ ನಡೆದಿದೆ. ಜಾಗ ಸಿಗುತ್ತೆ ಅಂದ್ರೆ ಯಾರೂ ಬಿಡ್ತಾರೆ ಹೇಳಿ. ಆದ್ರೆ ವಿಶ್ವದ ಒಂದು ಜಾಗವಿದೆ. ಅಲ್ಲಿಗೆ ಯಾರೂ ಹೋಗೋದಿಲ್ಲ. ದೊಡ್ಡ ದೇಶವೂ ಹೋಗಲು ಹಿಂಜರಿಯುವ ಸ್ಥಳ ಅದು. ಕೆಲವರು ಆ ದೇಶಕ್ಕೆ ಹೋಗಿ ತಮ್ಮ ಧ್ವಜ ನೆಟ್ಟು ಬಂದಿದ್ದರು. ಆದ್ರೆ ಸ್ವಲ್ಪ ದಿನದಲ್ಲಿಯೇ ವಾಪಸ್ ಬಂದರು. ಅಷ್ಟಕ್ಕೂ ಆ ದೇಶ ಯಾವುದು ಎಂಬುದನ್ನು ನಾವಿಂದು ಹೇಳ್ತೇವೆ.
ಈ ದೇಶ (Country) ಕ್ಕೆ ಯಾರೂ ಬರಲ್ಲ ಯಾಕೆ ಗೊತ್ತಾ? : ನಾವು ಈಗ ಹೇಳ್ತಿರುವ ದೇಶದ ಹೆಸರು ಬಿರ್ ತಾವಿಲ್ (Bir Tawil) . ಈ ಸ್ಥಳವು ಈಜಿಪ್ಟ್ (Egypt) ಮತ್ತು ಸುಡಾನ್ (Sudan) ಗಡಿಯಲ್ಲಿದೆ. ಇದು 2060 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿಯವರೆಗೆ ಯಾವುದೇ ದೇಶವು ಈ ಭೂಮಿಯ ಮೇಲೆ ಹಕ್ಕು ಸಾಧಿಸಿಲ್ಲ ಎನ್ನುವುದೇ ವಿಶೇಷ. ಬಿರ್ ತಾವಿಲ್ ಉತ್ತರ ಆಫ್ರಿಕಾದ ಪ್ರದೇಶವಾಗಿದ್ದರೂ ಯಾವುದೇ ದೇಶಕ್ಕೆ ಇದು ಸೇರೋದಿಲ್ಲ. ಹಾಗಾಗಿ ಇದಕ್ಕೆ ನೋ ಮ್ಯಾನ್ಸ್ ಲ್ಯಾಂಡ್ ಎಂದೇ ಇದು ಹೆಸರು ಪಡೆದಿದೆ. ಬಿರ್ ತಾವಿಲ್ ಅನ್ನು 20 ನೇ ಶತಮಾನದ ಆರಂಭದಲ್ಲಿ ಈಜಿಪ್ಟ್ ಮತ್ತು ಸುಡಾನ್ ಗಡಿಯಾಗಿ ಗುರುತಿಸಲಾಯಿತು. ಈ ಪ್ರದೇಶ ಯಾರ ವ್ಯಾಪ್ತಿಗೂ ಬರದ ರೀತಿಯಲ್ಲಿ ಎರಡೂ ದೇಶಗಳ ಗಡಿಗಳನ್ನು ಮಾಡಲಾಗಿದೆ. ಎರಡೂ ದೇಶಗಳು ಬೀರ್ ತಾವಿಲ್ ನಿಂದ ದೂರ ಸರಿಯಲು ಇಲ್ಲಿನ ಬಂಜರು ಭೂಮಿ ಮುಖ್ಯ ಕಾರಣವಾಗಿದೆ. ಭೂಮಿ (Land) ಯಲ್ಲಿ ಏನೂ ಬೆಳೆಯೋದಿಲ್ಲ ಅಂದ್ರೂ ಜನ ವಾಣಿಜ್ಯದ ದೃಷ್ಟಿಯಿಂದ ಭೂಮಿ ಖರೀದಿ ಮಾಡ್ತಾರೆ. ಆದ್ರೆ ಅದಕ್ಕೂ ಈ ಭೂಮಿ ಯೋಗ್ಯವಾಗಿಲ್ಲ. ಕಣ್ಣು ಹಾಯಿಸಿದಷ್ಟು ದೂರದಲ್ಲಿ ಮರಳು ಮಾತ್ರ ಕಾಣುತ್ತದೆ. ಒಂದೇ ಒಂದು ಗಿಡ ಕೂಡ ಇಲ್ಲಿ ಕಾಣೋದಿಲ್ಲ.
Business Idea : ಅಮೂಲ್ ಫ್ರಾಂಚೈಸಿ ಪಡೆದು ಹೀಗೆ ಗಳಿಕೆ ಶುರು ಮಾಡಿ
ಭಾರತದ ಯುವಕನೊಬ್ಬ ಬೀರ್ ತಾವಿಲ್ ನನ್ನದು ಎಂದಿದ್ದ : ಭಾರತ ಮೂಲದ ಯುವಕ ಸುಯಾಶ್ ದೀಕ್ಷಿತ್ 2017 ರಲ್ಲಿ ಬಿರ್ ತಾವಿಲ್ ಭೂಮಿ ಮೇಲೆ ತನ್ನ ಹಕ್ಕು ಸಾಧಿಸಲು ಮುಂದಾಗಿದ್ದ. ಕಿಂಗ್ಡಮ್ ಆಫ್ ದೀಕ್ಷಿತ್ ಎಂದು ಘೋಷಣೆ ಮಾಡಿದ್ದ. ತನ್ನ ಫೋಟೋವನ್ನು ಫೇಸ್ಬುಕ್ ನಲ್ಲಿ ಫೋಸ್ಟ್ ಕೂಡ ಮಾಡಿದ್ದ. ನಂತ್ರ ಆತ ಅಲ್ಲಿಗೆ ಹೋಗಿಲ್ಲ. ಬಿರ್ ತಾವಿಲ್ ತನ್ನದು ಎಂದು ಘೋಷಿಸಿದವರಲ್ಲಿ ಸುಯಾಶ್ ಮೊದಲಿಗನಲ್ಲ. ಜೂನ್ 2014 ರಲ್ಲಿ ಅಮೆರಿಕದ ಜೆರೆಮಿಯಾ ಹಿಟ್ಟನ್ ಸಹ ಈ ಹಕ್ಕು ಪಡೆಯಲು ಮುಂದಾಗಿದ್ದ. ಕಿಂಗ್ಡಮ್ ಆಫ್ ನಾರ್ತ್ ಸುಡಾನ್ ಎಂದು ಹೆಸರಿಟ್ಟಿದ್ದ. ಅವನು ತನ್ನ ಮಗಳನ್ನು ಈ ಸಾಮ್ರಾಜ್ಯದ ರಾಜಕುಮಾರಿಯನ್ನಾಗಿ ಮಾಡಿದ್ದ. ಹಿಟ್ಟನ್ ತನ್ನ ಧ್ವಜವನ್ನು ಇಲ್ಲಿ ನೆಟ್ಟಿದ್ದ. ತನ್ನ ದೇಶದ ಪೌರತ್ವವನ್ನೂ ಮಾರಿದ್ದ.
undefined
ಹೊಸ ಮನೆ ಖರೀದಿಸುತ್ತಿದ್ದೀರಾ? ಹಾಗಾದ್ರೆ ಆಸ್ತಿ ತೆರಿಗೆ ಬಗ್ಗೆ ನೀವು ತಿಳಿಯಲೇಬೇಕು!
ಈತ ಮಾತ್ರವಲ್ಲ 2014ರಲ್ಲಿಯೇ ರಷ್ಯಾದ ಡಿಮಿಟ್ರಿ ಝಿಖಾರೆವ್ ಕೂಡ ಬಿರ್ ತಾವಿಲ್ ಅನ್ನು ತಮ್ಮ ಆಸ್ತಿ ಎಂದು ಘೋಷಿಸಿದ್ದ. ದಿ ಕಿಂಗ್‌ಡಮ್ ಆಫ್ ಮಧ್ಯಪ್ರಾಚ್ಯ ಎಂದು ಹೆಸರಿಟ್ಟರು. ಯಾರೇ ಬಂದ್ರೂ ಇಲ್ಲಿ ಉಳಿಯೋದಿಲ್ಲ. ಇದು ಉಳಿಯಲು ಯೋಗ್ಯವಾಗಿಲ್ಲ. ಹಾಗಾಗಿಯೇ ಯಾವುದೇ ದೇಶ ನಮ್ಮ ಹಕ್ಕು ಸಾಧಿಸಲು ಮುಂದಾಗ್ತಿಲ್ಲ. ಇದೇ ಕಾರಣಕ್ಕೆ ಇದನ್ನು ಗಡಿಯಾಗಿ ಘೋಷಣೆ ಮಾಡಿವೆ. ಮರಳಿದ್ದು, ಬಂಜರು ಭೂಮಿಯಾಗಿದ್ರೂ ಇದಕ್ಕೆ ಕೆಲವರು ಆಕರ್ಷಿತರಾಗ್ತಿರುತ್ತಾರೆ.