ಸಿಂಗ್ ಮಾತು ಕೇಳಿ: ಮೋದಿಗೆ ಅಡ್ವೈಸ್ ಮಾಡೋದು ಶಿವಸೇನೆ ಚಾಳಿ!

Published : Sep 04, 2019, 03:53 PM ISTUpdated : Sep 04, 2019, 04:53 PM IST
ಸಿಂಗ್ ಮಾತು ಕೇಳಿ: ಮೋದಿಗೆ ಅಡ್ವೈಸ್ ಮಾಡೋದು ಶಿವಸೇನೆ  ಚಾಳಿ!

ಸಾರಾಂಶ

ಆರ್ಥಿಕ ಪುನಶ್ಚೇತನಕ್ಕೆ ಮಾಜಿ ಪ್ರಧಾನಿ ಮಾತು ಕೇಳಿ ಎಂದ ಶಿವಸೇನೆ| ಡಾ. ಮನಮೋಹನ್ ಸಿಂಗ್ ಸಲಹೆ ಸ್ವೀಕರಿಸುವಂತೆ ಮೋದಿ ಸರ್ಕಾರಕ್ಕೆ ಸಲಹೆ| ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪುತ್ತಿದೆ ಎಂದ ಶಿವಸೇನೆ| ಸಿಂಗ್ ಮಾರ್ಗದರ್ಶನ ಪಡೆದು ಅರ್ಥ ವ್ಯವಸ್ಥೆ ಸರಿದಾರಿಗೆ ತರುವಂತೆ ಮೋದಿಗೆ ಸಲಹೆ|

ಮುಂಬೈ(ಸೆ.04): ದೇಶದ ಅರ್ಥ ವ್ಯವಸ್ಥೆ ಹಳಿ ತಪ್ಪಿದ್ದು, ಈ ಕುರಿತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೀಡಿರುವ ಸಲಹೆಗಳನ್ನು ಸ್ವೀಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮಿತ್ರಪಕ್ಷ ಶಿವಸೇನೆ ಸಲಹೆ ನೀಡಿದೆ.

ಈ ಕುರಿತು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಸಂಪದಕೀಯ ಬರೆಯಲಾಗಿದ್ದು, ಅರ್ಥ ವ್ಯವಸ್ಥೆ ಸುಧಾರಣೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೀಡಿರುವ ಸಲಹೆಗಳು ಅಮೂಲ್ಯವಾದವು ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

ಭವಿಷ್ಯದಲ್ಲಿ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂಬ ಡಾ. ಸಿಂಗ್ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿರುವ ಶಿವಸೇನೆ, ಅವರು ನೀಡಿರುವ ಸಲಹೆಗಳನ್ನು ಸ್ವೀಕರಿಸುವಂತೆ ಮೋದಿ ಸರ್ಕಾರಕ್ಕೆ ಮನವಿ ಮಾಡಿದೆ.

ದೇಶದ ಆರ್ಥಿಕ ಕ್ಷೇತ್ರದ ಕುಸಿತಕ್ಕೆ ತೀವ್ರ ಕುಸಿತಕ್ಕೆ ಕಳವಳ ವ್ಯಕ್ತಪಡಿಸಿದ್ದ ಡಾ. ಸಿಂಗ್, ತಪ್ಪು ಆರ್ಥಿಕ ನೀತಿಗಳೇ ಈ ಕುಸಿತಕ್ಕೆ ಕಾರಣ ಎಂದು ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಅಲ್ಲದೇ ರಾಜಕೀಯ ಹಗೆತನ ಬದಿಗಿರಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದರು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌