
ನವದೆಹಲಿ(ಸೆ.04): ಮುಂದಿನ ಐದು ವರ್ಷಗಳಲ್ಲಿ ದೇಶದ ಆರ್ಥಿಕತೆ ಐದು ಟ್ರಿಲಿಯನ್ ಡಾಲರ್‌ಗೆ ವಿಸ್ತರಣೆಯಾಗುವುದು ಖಚಿತ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಪುತ್ರ ಶೌರ್ಯ ಧೋವಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ಅಜಿತ್ ಧೋವಲ್ ಪುತ್ರ, ಆರ್ಥಿಕ ತಜ್ಞ ಹಾಗೂ ಇಂಡಿಯಾ ಫೌಂಡೇಶನ್ ಮುಖ್ಯಸ್ಥ ಶೌರ್ಯ ಧೋವಲ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದು, ದೇಶದ ಅರ್ಥ ವ್ಯವಸ್ಥೆ ಮತ್ತೆ ಸರಿದಾರಿಗೆ ಬರುವ ಆಶಾವಾದ ಹೊಂದಿರುವುದಾಗಿ ತಿಳಿಸಿದ್ದಾರೆ.
2007ರಲ್ಲಿ ಭಾರತದ ಆರ್ಥಿಕತೆ ಕೇವಲ 1 ಟ್ರಿಲಿಯನ್ ಡಾಲರ್‌ನಷ್ಟಿತ್ತು. ನರೇಂದ್ರ ಮೋದಿ 2014ರಲ್ಲಿ ಪ್ರಧಾನಿಯಾದ ನಂತರ 2 ಟ್ರಿಲಿಯನ್ ಡಾಲರ್‌ಗೆ ಏರಿತು. ಅದರಂತೆ ಮುಂದಿನ ಐದು ವರ್ಷಗಳ ಅವಧಿಯಲ್ಲಿ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‌ಗೆ ಏರಲಿದೆ ಎಂದು ಶೌರ್ಯ ಧೋವಲ್ ಅಭಿಪ್ರಾಯಪಟ್ಟಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.