ಆರ್ಥಿಕ ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಸೆನ್ಸೆಕ್ಸ್ ಏರಿಕೆ!

Published : May 13, 2020, 02:07 PM ISTUpdated : May 13, 2020, 02:44 PM IST
ಆರ್ಥಿಕ ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ಸೆನ್ಸೆಕ್ಸ್ ಏರಿಕೆ!

ಸಾರಾಂಶ

ಷೇರು ಮಾರುಕಟ್ಟೆಗೆ ಬಲ ತುಂಬಿದ ಮೋದಿ ಆರ್ಥಿಕ ಪ್ಯಾಕೇಜ್| ಆರ್ಥಿಕ ಪ್ಯಾಕೇಜ್ ಬೆನ್ನಲ್ಲೇ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ ಏರಿಕೆ| ಶೇ. 4ರಷ್ಟು ಏರಿಕೆ ಕಂಡ ಸೆನ್ಸೆಕ್ಸ್

ಮುಂಬೈ(ಮೇ.13): ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೊರೋನಾದಿಂದಾದ ನಷ್ಟ ಪರಿಹರಿಸಲು 20 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಈ ಘೋಷಣೆ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಏರಿಕೆಯಾಗಿದೆ. 

ಸ್ಥಳೀಯ ಉತ್ಪನ್ನ ಖರೀದಿಸಿ: ಚೀನಿ ಉತ್ಪನ್ನ ತ್ಯಜಿಸಲು ಮೋದಿ ಪರೋಕ್ಷ ಮನವಿ!

ಮುಂಬೈ ಷೇರು ಮಾರುಕಟ್ಟೆ ಸೆನ್ಸೆಕ್ಸ್ 1,474.36 ಅಂಕ ಏರಿಕೆಯಾಗಿದ್ದು, ವಹಿವಾಟು ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ 32,845ಕ್ಕೆ ಜಿಗಿದಿದೆ. ಅತ್ತ ನಿಫ್ಟಿ ಶೇಕಡಾ 4.22ರಷ್ಟು, ಅಂದರೆ 9,584ರಷ್ಟು ಏರಿಕೆ ಕಂಡು 9,196ರಲ್ಲಿ ವಹಿವಾಟು ಆರಂಭಿಸಿದೆ. ಐಟಿ ಕ್ಷೇತ್ರ ಹೊರತುಪಡಿಸಿ ಹಣಕಾಸು ಮತ್ತು ಆಟೋ ಮೊಬೈಲ್ ಕ್ಷೇತ್ರಗಳ ಷೇರು ಬೆಲೆ ಸೂಚ್ಯಂಕದಲ್ಲಿ ಭಾರೀ ಏರಿಕೆ ಕಂಡುಬಂದಿದೆ. 

ಮೋದಿ ಭಾಷಣ; ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್, ಲಾಕ್‌ಡೌನ್ 4 ಘೋಷಣೆ

ನಿಫ್ಟಿಯ 50 ಷೇರುಗಳಲ್ಲಿ 46 ಕಂಪೆನಿಗಳ ಷೇರುಗಳು ಏರಿಕೆಯಾಗಿವೆ. ಐಸಿಐಸಿಐ ಬ್ಯಾಂಕು, ಲಾರ್ಸೆನ್ ಅಂಡ್ ಟೌಬ್ರೊ, ಶ್ರೀ ಸಿಮೆಂಟ್, ಅಲ್ಟ್ರಾ ಟೆಕ್ ಸಿಮೆಂಟ್, ಆಕ್ಸಿಸ್ ಬ್ಯಾಂಕು, ಬಜಾಜ್ ಫೈನಾನ್ಸ್ ಗಳು ಶೇಕಡಾ 4.36ರಿಂದ ಶೇಕಡಾ 6.37ರ ಮಧ್ಯೆ ವಹಿವಾಟು ನಡೆಸುತ್ತಿವೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!