ಸ್ಥಳೀಯ ಉತ್ಪನ್ನ ಖರೀದಿಸಿ: ಚೀನಿ ಉತ್ಪನ್ನ ತ್ಯಜಿಸಲು ಮೋದಿ ಪರೋಕ್ಷ ಮನವಿ!
ಸ್ಥಳೀಯ ಮಾರುಕಟ್ಟೆಯೇ ನಮ್ಮ ಬೇಡಿಕೆ ಈಡೇರಿಸಿವೆ| ಸ್ಥಳೀಯ ಉತ್ಪನ್ನ ಖರೀದಿಸಿ ಪ್ರಚಾರ ಮಾಡೋಣ| ಚೀನಿ ಉತ್ಪನ್ನ ತ್ಯಜಿಸಲು ಪ್ರಧಾನಿ ಮೋದಿ ಪರೋಕ್ಷ ಮನವಿ
ನವದೆಹಲಿ(ಮೇ.13): ಇನ್ನು ಮುಂದೆ ನಾವು ಸ್ಥಲೀಯ ಉತ್ಪನ್ನಗಳನ್ನೇ ಖರೀದಿ ಮಾಡೋಣ, ಜೊತೆಗೆ ಅವುಗಳ ಬಗ್ಗೆ ಪ್ರಚಾರ ಮಾಡಿ ಆ ಉತ್ಪನ್ನಗಳನ್ನು ಜಾಗತಿಕ ಬ್ರಾಂಡ್ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ತನ್ಮೂಲಕ ಚೀನಾ ಸೇರಿದಂತೆ ವಿದೇಶಿ ಉತ್ಪನ್ನಗಳನ್ನು ತ್ಯಜಿಸಲು ಪರೋಕ್ಷವಾಗಿ ಮನವಿ ಮಾಡಿದ್ದಾರೆ.
ಕೊರೋನಾ ಬಿಕ್ಕಟ್ಟಿನಿಂದಾಗಿ ನಮಗೆ ಸ್ಥಳೀಯ ಉತ್ಪಾದನೆ, ಸ್ಥಳೀಯ ಮಾರುಕಟ್ಟೆ ಹಾಗೂ ಸ್ಥಳೀಯ ಪೂರೈಕೆ ಸರಣಿಯ ಮಹತ್ವವೇನು ಎಂಬುವುದು ಅರಿವಾಗಿದೆ. ಸಂಕಷ್ಟದ ಸಮಯದಲ್ಲಿ ಸ್ಥಳೀಯ ಮಾರುಕಟ್ಟೆಯೇ ನಮ್ಮ ಬೇಡಿಕೆ ಪೂರೈಸಿದೆ. ಈ ಸ್ಥಳೀಯತೆ ಎಂಬುವುದು ಕೇವಲ ನಮ್ಮ ಅಗತ್ಯವಲ್ಲ, ನಮ್ಮ ಜವಾಬ್ದಾರಿಯೂ ಆಗಿದೆ. ನಾವೀಗ ಸ್ಥಳೀಯತೆಯನ್ನು ನಮ್ಮ ಜೀವನದ ಮಂತ್ರ ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಮೋದಿ ಭಾಷಣ; ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 20 ಲಕ್ಷ ಕೋಟಿ ರೂ. ಪ್ಯಾಕೇಜ್, ಲಾಕ್‌ಡೌನ್ 4 ಘೋಷಣೆ
ಅಲ್ಲದೇ ಈಗಿನ ಗ್ಲೋಬಲ್ ಬ್ರಾಂಡ್‌ಗಳು ಹಿಂದೊಂದು ದಿನ ಲೋಕಲ್ ಬ್ರಾಂಡ್‌ಗಳೇ ಆಗಿದ್ದವು. ಹೀಗಾಗಿ ನಮ್ಮ ಲೋಕಲ್ ಉತ್ಪನ್ನಗಳನ್ನು ಖರೀದಿಸುವುದರ ಜೊತೆಗೆ ನಾವೇ ಅವುಗಳ ಬಗ್ಗೆ ಹೆಮ್ಮೆಯಿಂದ ಪ್ರಚಾರ ಮಾಡೋಣ. ಹಿಂದೆ ನಾನು ಖಾದಿ ಮತ್ತು ಕೈಮಗ್ಗದ ಉತ್ಪನ್ನಗಳನ್ನು ಖರೀದಿಸಲು ಮನವಿ ಮಾಡಿದ್ದೆ. ಇಂದು ಅವುಗಳ ಮಾರಾಟ ಸಾಕಷ್ಟು ವೃದ್ಧಿಯಾಗಿ, ದೊಡ್ಡ ಬ್ರಾಂಡ್‌ಗಳಾಗಿ ರೂಪುಗೊಂಡಿವೆ. ಹಾಗೆಯೇ ನಾವೀಗ ನಮ್ಮ ಸ್ಥಳೀಯ ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎಂದು ಕರೆ ನೀಡಿದ್ದಾರೆ.