
ಮುಂಬೈ(ಮೇ.12): ಭಾರತೀಯ ರಿಸವ್‌ರ್ ಬ್ಯಾಂಕ್ (ಆರ್‌ಬಿಐ) 2019-20ನೇ ಆರ್ಥಿಕ ಸಾಲಿನಲ್ಲಿ 40.45 ಟನ್ ಚಿನ್ನ ಖರೀದಿಸಿದೆ. ಈ ಮೂಲಕ ಆರ್‌ಬಿಐ ಸಂಗ್ರಹದಲ್ಲಿರುವ ಒಟ್ಟು ಚಿನ್ನದ ಪ್ರಮಾಣ 653.01 ಟನ್‌ಗೆ ಏರಿಕೆಯಾಗಿದೆ.
2019ರ ಮಾಚ್‌ರ್ ವೇಳೆಗೆ ಆರ್‌ಬಿಐ ಬಳಿ 612.56 ಟನ್ ಚಿನ್ನ ಸಂಗ್ರಹವಿತ್ತು. ಹೆಚ್ಚುವರಿ ಸಂಗ್ರಹ ಸೇರಿ ಸದ್ಯ ಆರ್‌ಬಿಐ ಬಳಿ ಇರುವ ಚಿನ್ನದ ಒಟ್ಟು ಮೌಲ್ಯ 23.07ಬಿಲಿಯನ್ ಡಾಲರ್‌ನಿಂದ 30.57 ಬಿಲಿಯನ್ ಡಾಲರ್ (2,32,000 ಕೋಟಿ)ಗೆ ಏರಿಕೆಯಾಗಿದೆ. ಸುರಕ್ಷತೆ ದೃಷ್ಟಿಯಿಂದ ಸುಮಾರು 360.71 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಮತ್ತು ಇತರೆ ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಲ್ಲಿ ಇರಿಸಲಾಗಿದೆ.
ಉಳಿದ ಚಿನ್ನವನ್ನು ದೇಶೀಯ ಬ್ಯಾಂಕುಗಳಲ್ಲಿ ಸಂಗ್ರಹಿಸಿಡಲಾಗಿದೆ ಎಂದು ಆರ್‌ಬಿಐ ತಿಳಿಸಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.