ಬಜೆಟ್ ಬಳಿಕ ಕುಸಿದ ಸೆನ್ಸೆಕ್ಸ್: ಮನೆ ಮಾಡಿದ ನಿರಾಶೆ, ಹತಾಶೆ!

Suvarna News   | Asianet News
Published : Feb 01, 2020, 04:53 PM ISTUpdated : Feb 01, 2020, 05:07 PM IST
ಬಜೆಟ್ ಬಳಿಕ ಕುಸಿದ ಸೆನ್ಸೆಕ್ಸ್: ಮನೆ ಮಾಡಿದ ನಿರಾಶೆ, ಹತಾಶೆ!

ಸಾರಾಂಶ

ಷೇರು ಪೇಟೆ ತಲ್ಲಣಕ್ಕೆ ಕಾರಣವಾಯ್ತು ಬಜೆಟ್​| ಪ್ರಮುಖ ಉದ್ಯಮ ವಲಯಗಳ ಉತ್ತೇಜನಕಾರಿ ಘೋಷಣೆ ಇಲ್ಲ| ಆಟೋಮೊಬೈಲ್​, ರಿಯಲ್​ ಎಸ್ಟೇಟ್​ ಸೇರಿ ಹಲವು ವಲಯಗಳ ಕಡೆಗಣನೆ| ಆದಾಯ ತೆರಿಗೆ ಇಳಿಕೆ ಬಗ್ಗೆ ಮಧ್ಯಮ ವರ್ಗದಲ್ಲಿ ಗೊಂದಲ|  ಹೂಡಿಕೆದಾರರಿಗೆ ಲಾಭ ಗಳಿಕೆ ಯೋಜನೆಗಳಿಲ್ಲ| ಸೆನ್ಸೆಕ್ಸ್​ 987 ಅಂಕ ಕುಸಿತ , ನಿಫ್ಟಿ 300 ಅಂಕ ಕುಸಿತ| 

ಮುಂಬೈ(ಫೆ.01): ಅತ್ತ ಕೇಂದ್ರ ಬಜೆಟ್ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೇ ಇತ್ತ ಮುಂಬೈ ಷೇರು ಮಾರುಕಟ್ಟೆ ಕುಸಿತದ ಆಘಾತ ಅನುಭವಿಸಿದೆ.

ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣಕ್ಕೂ ಮೊದಲೇ ಮುಂಬೈ ಷೇರು ಮಾರುಕಟ್ಟೆ ಕುಸಿತ ಕಂಡಿದ್ದರೂ, ಬಜೆಟ್ ಭಾಷಣದ ಮಧ್ಯದಲ್ಲಿ ಮಾರುಕಟ್ಟೆ ಕೊಂಚ ಏರಿಕೆ ಕಂಡು ನಿರಾಳ ಭಾವ ಮೂಡಿಸಿತ್ತು.

ಒಣಗಿದ ನಿರ್ಮಲಾ ಗಂಟಲು: ಮೋದಿ ತಡೆದರು ಬಜೆಟ್ ಪೂರ್ಣ ಭಾಷಣ ಓದಲು!

ಆದರೆ ಬಜೆಟ್ ಭಾಷಣ ಪೂರ್ಣಗೊಂಡ ಬಳಿಕ ಮತ್ತೆ ಷೇಉ ಮಾರುಕಟ್ಟೆ ಕುಸಿತದ ಹಾದಿ ಹಿಡಿಯಿತು. ಕೇಂದ್ರ ಬಜೆಟ್‌ನಲ್ಲಿ ಕೈಗಾರಿಕೆ ವಲಯದ ಉತ್ತೇಜನಕ್ಕೆ ಅಷ್ಟೊಂದು ಮಹತ್ವ ನೀಡದಿರುವುದು ಹಾಗೂ ಎಲ್‌ಐಸಿಯಿಂದ ಸರ್ಕಾರದ ಬಂಡವಾಳ ಹಿಂತೆಗೆತನ ನಿರ್ಧಾರ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಅಂದಾಜಿಸಲಾಗಿದೆ.

ಮುಂಬೈ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್​ 987 ಅಂಕ ಕುಸಿತ ಕಂಡಿದ್ದು, 39,735.53 ಪಾಯಿಂಟ್ಸ್‌ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ನಿಫ್ಟಿ ಕೂಡ 300 ಅಂಕ ಕುಸಿತ ಕಂಡಿದ್ದು, ಬಜೆಟ್ ಮಂಡನೆ ಬಳಿಕವೂ ಷೇರು ಮಾರುಕಟ್ಟೆ ತಲ್ಲಣಗೊಂಡಿದೆ.

ಬಜೆಟ್‌ನಲ್ಲಿ ಆಟೋಮೊಬೈಲ್​, ರಿಯಲ್​ ಎಸ್ಟೇಟ್​ ಸೇರಿ ಹಲವು ವಲಯಗಳ ಕಡೆಗಣನೆಯಾಗಿದ್ದು, ಇದರ ಪರಿಣಾಮವಾಗಿ ಈ ವಲಯದ ಷೇರುಗಳ ವಹಿವಾಟು ಮಂದಗತಿಯಲ್ಲಿ ಸಾಗಿದೆ ಎಂದು ಷೇರು ಮಾರುಕಟ್ಟೆ ಮೂಲಗಳು ಖಚಿತಪಡಿಸಿವೆ.

ಕೇಂದ್ರ ಬಜೆಟ್ 2020: ಯಾವುದು ಅಗ್ಗ? ಯಾವುದು ದುಬಾರಿ: ಇಲ್ಲಿದೆ ಪಟ್ಟಿ

ಆದಾಯ ತೆರಿಗೆ ಇಳಿಕೆ ಬಗ್ಗೆ ಮಧ್ಯಮ ವರ್ಗದಲ್ಲಿ ಗೊಂದಲವಿದ್ದು, ಬಜೆಟ್‌ನಲ್ಲಿ ಹೂಡಿಕೆದಾರರಿಗೆ ಲಾಭ ಗಳಿಕೆ ಯೋಜನೆಗಳಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.

"

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ