ಸಾಲದ ಮೇಲಿನ ಎಲ್ಲ ಶುಲ್ಕಗಳನ್ನು ಕೆಎಫ್ ಎಸ್ ನಲ್ಲಿ ಪ್ರಸ್ತಾಪಿಸಬೇಕು: ಬ್ಯಾಂಕುಗಳಿಗೆ ಆರ್ ಬಿಐ ಸೂಚನೆ

By Suvarna NewsFirst Published Apr 16, 2024, 6:25 PM IST
Highlights

ಸಾಲದ ಮೇಲೆ ಬ್ಯಾಂಕುಗಳು ಸುಖಾಸುಮ್ಮನೆ ಶುಲ್ಕಗಳನ್ನು ವಿಧಿಸುವಂತಿಲ್ಲ.ಎಲ್ಲ ಶುಲ್ಕಗಳ ವಿವರವನ್ನು ಕೆಎಫ್ ಸಿಯಲ್ಲಿ ಮೊದಲೇ ನಮೂದಿಸುವಂತೆ ಆರ್ ಬಿಐ ಬ್ಯಾಂಕುಗಳಿಗೆ ಸೂಚಿಸಿದೆ. 
 

ನವದೆಹಲಿ (ಏ.16): ಸಾಲಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವಂತಿಲ್ಲ ಎಂದು ಆರ್ ಬಿಐ ಎಲ್ಲ ಬ್ಯಾಂಕ್ ಗಳು ಹಾಗೂ ಹಣಕಾಸು ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ. ಸಾಲ ನೀಡುವಾಗ ಕೀ ಫ್ಯಾಕ್ಟ್ ಸ್ಟೇಟ್ಮೆಂಟ್ ನಲ್ಲಿ (ಕೆಎಫ್ ಎಸ್) ಬಹಿರಂಗಪಡಿಸದ ಹೆಚ್ಚುವರಿ ಶುಲ್ಕಗಳನ್ನು ವಿಧಿಸುವಂತಿಲ್ಲ ಎಂದು ಆರ್ ಬಿಐ ಎಲ್ಲ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಈ ಕ್ರಮ ಸಾಲ ನೀಡುವಿಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಜೊತೆಗೆ ಸಾಲಗಾರರಿಗೆ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರುವಂತೆ ಮಾಡಲಿದೆ. ಇದರಿಂದ ಸಾಲಗಾರರು ರಿಟೇಲ್ ಅಥವಾ ಎಂಎಸ್ ಎಂಇ ಟರ್ಮ್ ಸಾಲಗಳನ್ನು ಪಡೆಯುವ ಮುನ್ನ ಆ ಬಗ್ಗೆ ಮಾಹಿತಿ ಹೊಂದಿರಲು ಸಾಧ್ಯವಾಗಲಿದೆ. ಈ ಎಲ್ಲ ನಿರ್ದೇಶನಗಳನ್ನು ಆರ್ ಬಿಐ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್ 1934 ಹಾಗೂ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಆಕ್ಟ್ 1987ರ ವಿವಿಧ ಸೆಕ್ಷನ್ ಗಳಡಿಯಲ್ಲಿ ನೀಡಲಾಗಿದೆ. 2024ರ ಅಕ್ಟೋಬರ್ 1 ಅಥವಾ ಅದರ ಮೊದಲು ಅನುಮೋದನೆಗೊಂಡ ಸಾಲಗಳಿಗೆ ಇದು ಅನ್ವಯಿಸಲಿದೆ ಎಂದು ಆರ್ ಬಿಐ ತಿಳಿಸಿದೆ.

ಕೀ ಫ್ಯಾಕ್ಟ್ಸ್ ಅಂದ್ರೇನು?
ಆರ್ ಬಿಐ ಪ್ರಕಾರ ಕೀ ಫ್ಯಾಕ್ಟ್ಸ್ ಅಂದ್ರೆ ಸಾಲ ನೀಡುವ ಸಂಸ್ಥೆ ಹಾಗೂ ಸಾಲಗಾರರ ನಡುವಿನ ಸಾಲದ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ಅಂಶಗಳು. ಸಾಲಗಾರರಿಗೆ ಮಾಹಿತಿಯುಳ್ಳ ಹಣಕಾಸಿನ ನಿರ್ಧಾರ ಕೈಗೊಳ್ಳಲು ಇದು ನೆರವು ನೀಡುತ್ತದೆ. ಇದು ಮೂಲಭೂತ ಮಾಹಿತಿಗಳನ್ನು ಒದಗಿಸುತ್ತದೆ.

ಬ್ಯಾಂಕ್ ಆಫ್ ಬರೋಡಾ ವರ್ಲ್ಡ್ ಆ್ಯಪ್‌ ಹಗರಣ;ಸೈಬರ್ ವಂಚನೆ ತಡೆಗೆ ಬಿಗಿ ಕ್ರಮಕ್ಕೆ ಮುಂದಾದ ಹಣಕಾಸು ಸಚಿವಾಲಯ

ಕೀ ಫ್ಯಾಕ್ಟ್ ಸ್ಟೇಟ್ಮೆಂಟ್ ಅಂದ್ರೇನು?
ಕೀ ಫ್ಯಾಕ್ಟ್ ಸ್ಟೇಟ್ಮೆಂಟ್ (KFS)ಸಾಲದ ಒಪ್ಪಂದಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನು ಹೊಂದಿರುವ ಹೇಳಿಕೆಯಾಗಿದೆ. ಇದು ಸರಳ ಹಾಗೂ ಸುಲಭವಾದ ಅರ್ಥವಾಗುವ ಭಾಷೆಯಲ್ಲಿರುತ್ತದೆ. ಇದನ್ನು ಸಾಲಗಾರರಿಗೆ ಸ್ಟ್ಯಾಂಡರ್ಡ್ ರೂಪದಲ್ಲಿ ನೀಡಲಾಗುತ್ತದೆ.

ವಾರ್ಷಿಕ ಪರ್ಸೆಂಟೇಜ್ ರೇಟ್ ಅಂದ್ರೇನು?
ವಾರ್ಷಿಕ ಪರ್ಸೆಂಟೇಜ್ ರೇಟ್ (ಎಪಿಆರ್) ಸಾಲಗಾರರಿಗೆ ನೀಡುವ ಸಾಲದ ವಾರ್ಷಿಕ ವೆಚ್ಚ. ಇದು ಸಾಲಕ್ಕೆ ಸಂಬಂಧಿಸಿದ ಬಡ್ಡಿದರ ಹಾಗೂ ಇತರ ಎಲ್ಲ ಶುಲ್ಕಗಳನ್ನು ಒಳಗೊಂಡಿರುತ್ತದೆ. 

ಈಕ್ವೆಟೆಡ್ ಪಿರಿಯಾಡಿಕ ಇನ್ ಸ್ಟಾಲ್ಮೆಂಟ್ ಅಂದ್ರೇನು?
ಈಕ್ವೆಟೆಡ್ ಪಿರಿಯಾಡಿಕ್ ಇನ್ ಸ್ಟಾಲ್ಮೆಂಟ್ (EPI) ಈಕ್ವೆಟೆಡ್ ಅಥವಾ ನಿಗದಿತ ಮೊತ್ತದ ಸಾಲದ ಪಾವತಿಯಾಗಿದೆ. ಇದರಲ್ಲಿ ಸಾಲಗಾರರು ಪಾವತಿಸಬೇಕಾಗಿರುವ ಮೂಲಮೊತ್ತ ಹಾಗೂ ಬಡ್ಡಿದರ ಎರಡೂ ಸೇರಿದೆ. ನಿಗದಿತ ಅವಧಿಯಲ್ಲಿ ನಿಗದಿತ ಕಂತುಗಳಲ್ಲಿ ಸಾಲವನ್ನು ಸಾಲಗಾರರು ಮರುಪಾವತಿಸಬೇಕಿರುತ್ತದೆ. ಮಾಸಿಕ ಕಂತುಗಳಲ್ಲಿ ಪಾವತಿಸುವ  ಇಪಿಐಗೆ ಇಎಂಐ ಎಂದು ಕೂಡ ಕರೆಯುತ್ತಾರೆ.

ನಿಮ್ಗೆ ಸೆಂಟ್ರಲ್ ಕೆವೈಸಿ ಬಗ್ಗೆ ಗೊತ್ತಾ? ಒಮ್ಮೆ ಮಾಡಿಸಿದ್ರೆ ಸಾಕು, ಬ್ಯಾಂಕಿಗೆ ಪದೇಪದೆ ದಾಖಲೆ ನೀಡೋ ರಗಳೆ ಇಲ್ಲ!

ಆರ್ ಬಿಐ ನಿರ್ದೇಶನ ಹೀಗಿದೆ:
1. ಎಲ್ಲ ಸಾಲಗಾರರಿಗೂ ಆರ್ ಬಿಐ ಕೆಎಫ್ ಎಸ್ ನೀಡಬೇಕು. ಸಾಲದ ಒಪ್ಪಂದವನ್ನು ಅನುಷ್ಠಾನಗೊಳಿಸುವ ಮುನ್ನ ಸಾಲಗಾರರಿಗೆ ಮಾಹಿತಿ ನೀಡಲು ಸ್ಟಾಂಡರ್ಡ್ ನಮೂನೆಯಲ್ಲಿ ಒಪ್ಪಂದ ಮಾಡಬೇಕು.
2.ಸಾಲಗಾರರಿಗೆ ಅರ್ಥವಾಗುವ ಭಾಷೆಯಲ್ಲಿ ಕೆಎಫ್ ಎಸ್ ಬರೆಯಬೇಕು. ಕೆಎಫ್ ಎಸ್ ನಲ್ಲಿರುವ ಮಾಹಿತಿಗಳನ್ನು ಸಾಲಗಾರರಿಗೆ ವಿವರಿಸಬೇಕು ಹಾಗೂ ಅವರಿಂದ ಅರ್ಥವಾಗಿರುವ ಬಗ್ಗೆ ಸ್ವೀಕೃತಿ ಪಡೆಯಬೇಕು.
3.ಕೆಎಫ್ ಎಸ್ ವಿಶಿಷ್ಟ ಪ್ರಸ್ತಾವನೆ ಸಂಖ್ಯೆಯನ್ನು ನೀಡಬೇಕು. ಹಾಗೆಯೇ ಕೆಎಫ್ ಎಸ್ ನಲ್ಲಿರುವ ಷರತ್ತುಗಳಿಗೆ ಒಪ್ಪಿಗೆ ನೀಡಲು ಸಾಲಗಾರರಿಗೆ ಅವಧಿ ನೀಡಬೇಕು. 
4.ಇನ್ನು ಸಾಲಗಾರರು ಒಪ್ಪಿರುವ ಕೆಎಫ್ ಸಿಯಲ್ಲಿ ನಮೂದಿಸಿರುವ ನಿಬಂಧನೆಗಳಿಗೆ ಬ್ಯಾಂಕ್ ಗಳು ಕೂಡ ಬದ್ಧವಾಗಿರಬೇಕು. 
5.ಕೆಎಫ್ ಎಸ್ ಕೂಡ ವಾರ್ಷಿಕ ಪರ್ಸೆಂಟೇಜ್ ರೇಟ್ (ಎಪಿಆರ್) ಲೆಕ್ಕಾಚಾರ ಪತ್ರವನ್ನು ಹೊಂದಿರಬೇಕು. 
6.ಕೆಎಫ್ ಎಸ್ ನಲ್ಲಿ ನಮೂದಿಸದ ಯಾವುದೇ ಶುಲ್ಕಗಳು, ಚಾರ್ಜ್ ಗಳು ಇತ್ಯಾದಿಗಳನ್ನು ಸಾಲಗಾರರ ಮೇಲೆ ವಿಧಿಸಬಾರದು ಎಂದು ಆರ್ ಬಿಐ ತಿಳಿಸಿದೆ. 


 

click me!