ನಾನಾ ಕಾರಣದಿಂದ ಉದ್ಯೋಗ ತ್ಯಜಿಸಿದವರ ಇಪಿಎಫ್ ಖಾತೆ ಮೂರು ವರ್ಷದ ಬಳಿಕ ನಿಷ್ಕ್ರಿಯಗೊಳ್ಳುತ್ತದೆ.ಇಂಥ ಖಾತೆಯಲ್ಲಿರುವ ಹಣವನ್ನು ವಿತ್ ಡ್ರಾ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
Business Desk: ತಿಂಗಳ ವೇತನ ಪಡೆಯುವ ಉದ್ಯೋಗಿಗಳು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಸಂಘಟಿತ ವಲಯದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಭಾರತ ಸರ್ಕಾರ ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸ್ಥಾಪಿಸಿದೆ. ಇದು ಉದ್ಯೋಗಿಗಳಿಗೆ ನಿವೃತ್ತಿ ಜೀವನಕ್ಕೆ ಉಳಿತಾಯ ಯೋಜನೆಯಾಗಿದೆ. ಇಪಿಎಫ್ ಯೋಜನೆಯನ್ನು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ ಒ) ನಿರ್ವಹಿಸುತ್ತದೆ. ಈ ಯೋಜನೆಗೆ ಉದ್ಯೋಗಿಗಳ ತಿಂಗಳ ವೇತನದಿಂದ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಆದರೆ, ಕೆಲವೊಮ್ಮೆ ಉದ್ಯೋಗಿಯು ನಿವೃತ್ತಿ, ನಿಧನ ಅಥವಾ ಇನ್ಯಾವುದೋ ಕಾರಣದಿಂದ ಉದ್ಯೋಗ ತ್ಯಜಿಸಿದ ಕಾರಣಕ್ಕೆ ಇಪಿಎಫ್ ಗೆ ಸತತ ಮೂರು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ಕಾಲ ಹಣ ನೀಡಲು ಸಾಧ್ಯವಾಗೋದಿಲ್ಲ. ಇಂಥ ಇಪಿಎಫ್ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಇಂಥ ಖಾತೆಗಳು ಬ್ಲಾಕ್ ಆಗುತ್ತವೆ. ಇದರಲ್ಲಿರುವ ಹಣವನ್ನು ಕೂಡ ವಿತ್ ಡ್ರಾ ಮಾಡಲು ಸಾಧ್ಯವಾಗೋದಿಲ್ಲ. ಆದರೆ, ಬ್ಲಾಕ್ ಆಗಿರುವ ಇಂಥ ನಿಷ್ಕ್ರಿಯ ಇಪಿಎಫ್ ಖಾತೆಗಳನ್ನು ಇಪಿಎಫ್ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಸಕ್ರಿಯಗೊಳಿಸಬಹುದು.
ನಿಷ್ಕ್ರಿಯ ಖಾತೆಯನ್ನು ಅನ್ ಬ್ಲಾಕ್ ಮಾಡೋದು ಹೇಗೆ?
ಇತ್ತೀಚೆಗೆ ಇಪಿಎಫ್ ಖಾತೆಗಳನ್ನು ಅನ್ ಬ್ಲಾಕ್ ಮಾಡಲು ಇಪಿಎಫ್ ಒ ಹೊಸ ಎಸ್ ಒಪಿ ಅನುಷ್ಠಾನಗೊಳಿಸಿದೆ. ಈ ಎಸ್ ಒಪಿ ಪ್ರಕಾರ ಬಳಕೆದಾರರು ಇಪಿಎಫ್ ಖಾತೆಯನ್ನು ಅನ್ ಬ್ಲಾಕ್ ಮಾಡುವ ಮುನ್ನ ತಮ್ಮ ಕೆವೈಸಿ ದಾಖಲೆಗಳು ಸಮರ್ಪಕವಾಗಿವೆಯಾ ಎಂಬುದನ್ನು ಪರಿಶೀಲಿಸಬೇಕು. ಅಂದರೆ ಖಾತೆದಾರರ ಗುರುತು ದೃಢೀಕರಣ ದಾಖಲೆಗಳಾದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಬ್ಯಾಂಕ್ ಮಾಹಿತಿಗಳನ್ನು ಪರಿಶೀಲಿಸಬೇಕು. ಇದು ಬಳಕೆದಾರರ ಇಪಿಎಫ್ ಖಾತೆಯ ಭದ್ರತೆಯನ್ನು ನಿರ್ವಹಣೆ ಮಾಡುವಲ್ಲಿ ಅತೀಮುಖ್ಯವಾದ ಹಂತವಾಗಿದೆ. ಒಮ್ಮೆ ಕೆವೈಸಿ ಮಾಡಿದ ಬಳಿಕ ಬಳಕೆದಾರರು ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಇಪಿಎಫ್ ಖಾತೆಯನ್ನು ಅನ್ ಬ್ಲಾಕ್ ಮಾಡಬಹುದು.
EPF ಖಾತೆಗೆ ಕೆವೈಸಿ ಮಾಹಿತಿ ಅಪ್ಡೇಟ್ ಮಾಡಲು ಹೊಸ ವಿಧಾನ; ಈ ಆನ್ಲೈನ್ ಪ್ರಕ್ರಿಯೆ ಬಲು ಸರಳ
ಇಪಿಎಫ್ ಖಾತೆ ಅನ್ ಬ್ಲಾಕ್ ಮಾಡೋದು ಹೇಗೆ?
ಹಂತ 1: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಅಧಿಕೃತ ವೆಬ್ ಸೈಟ್ www.epfindia.gov.in.ಭೇಟಿ ನೀಡಿ.
ಹಂತ 2: ನಿಮ್ಮ ಹೆಸರು, ಪಿನ್ ಸೇರಿದಂತೆ ಅಗತ್ಯ ಮಾಹಿತಿಗಳನ್ನು ಬಳಸಿ ಈ ವೆಬ್ ಸೈಟ್ ಗೆ ಲಾಗಿನ್ ಆಗಿ.
ಹಂತ 3: ಆ ಬಳಿಕ ‘Help Desk’ವಿಭಾಗಕ್ಕೆ ಭೇಟಿ ನೀಡಿ.
ಹಂತ 4: ‘Inoperative Account Assistance’ ಮೇಲೆ ಕ್ಲಿಕ್ ಮಾಡಿ.
ಹಂತ 5: ವೆಬ್ ಸೈಟ್ ನೀಡಿರುವ ಸಲಹೆಗಳನ್ನು ಪಾಲಿಸಿ ನಿಮ್ಮ ಗುರುತು ದೃಢೀಕರಿಸಿ. ಆ ಬಳಿಕ ಹೆಚ್ಚಿನ ಮಾರ್ಗದರ್ಶನಕ್ಕೆ ಮನವಿ ಕಳುಹಿಸಿ.
ನೀವು ಎರಡು ಇಪಿಎಫ್ ಯುಎಎನ್ ಹೊಂದಿದ್ದೀರಾ? ಹಾಗಾದ್ರೆ ತಡಮಾಡದೆ ಈ ಕೆಲ್ಸ ಮಾಡಿ
ವಿತ್ ಡ್ರಾಗೂ ಅವಕಾಶ
ಇಪಿಎಫ್ ಖಾತೆದಾರರಿಗೆ ಹಣವನ್ನು ಆನ್ ಲೈನ್ ಹಾಗೂ ಆಪ್ ಲೈನ್ ನಲ್ಲಿ ವಿತ್ ಡ್ರಾ ಮಾಡಲು ಕೂಡ ಅವಕಾಶ ನೀಡಲಾಗಿದೆ. ಹಾಗೆಯೇ ಇಪಿಎಫ್ ಅಧಿಕೃತ ಪೋರ್ಟಲ್ ಅಥವಾ ಉಮಂಗ್ ಅಪ್ಲಿಕೇಷನ್ ಗೆ ಭೇಟಿ ನೀಡುವ ಮೂಲಕ ಕೂಡ ಇಪಿಎಫ್ ಬ್ಯಾಲೆನ್ಸ್ ಅನ್ನು ಆನ್ ಲೈನ್ ನಲ್ಲಿ ಚೆಕ್ ಮಾಡಬಹುದು. ಇನ್ನು ಇಪಿಎಫ್ ಒ ಕೂಡ ಏಕೀಕೃತ ಸದಸ್ಯರ ಪೋರ್ಟಲ್ ಹೊಂದಿದೆ. ಇದು ಜನರಿಗೆ ತಮ್ಮ ಪ್ರಸಕ್ತ ಬ್ಯಾಲೆನ್ಸ್, ಇಪಿಎಫ್ ಪಾಸ್ ಪುಸ್ತಕ ಇತ್ಯಾದಿ ಪರಿಶೀಲಿಸಲು ನೆರವು ನೀಡುತ್ತದೆ. ಪ್ರಸ್ತುತ ಎಲ್ಲ ಇಪಿಎಫ್ ಖಾತೆದಾರರು 58 ವರ್ಷದ ತನಕ ಇಪಿಎಫ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ ಗಳಿಕೆ ಮಾಡುತ್ತಾರೆ.